ವಿವಾಹ ಸಮಾರಂಭದಲ್ಲಿ ಹಾಲಿನಲ್ಲಿ ಉಂಗುರು ಹುಡುಕುವ ಶಾಸ್ತ್ರವೂ ಕೂಡ ಒಂದು. ಇದೀಗ ಉಂಗುರು ಹುಡುಕುವ ಶಾಸ್ತ್ರದಲ್ಲಿ ನವಜೋಡಿಯೊಂದು ಕಿತ್ತಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋಗೆ ನೆಟ್ಟಿಗರಿಂದ ಬಗೆಬಗೆಯಾಗಿ ಕಾಮೆಂಟ್ ಗಳು ಬರುತ್ತಿದ್ದು, ಸಾಕಷ್ಟು ಟ್ರೋಲ್ಗೆ ಕಾರಣವಾಗಿದೆ.
the_ultimate_trolls ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 441k ಅಂದರೆ 4ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 9 ಸಾವಿರಕ್ಕೂ ಅಧಿಕ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: ಆಹ್ವಾನವಿಲ್ಲದೆ ಮದುವೆಯೂಟ ಸವಿಯಲು ಬಂದ ಹಾಸ್ಟೆಲ್ ವಿದ್ಯಾರ್ಥಿಗಳು; ಮುಂದೆನಾಯ್ತು ನೋಡಿ….
ವೈರಲ್ ಆಗಿರುವ ವಿಡಿಯೋದಲ್ಲಿ ಮದುಮಗಳು ಮದುಮಗನ ಕೈಗಳನ್ನು ಪರಚಿ,ಆತನ ಕೈಗಳನ್ನು ಹಿಡಿದಿಟ್ಟುಕೊಂಡು ಉಂಗುರು ಹುಡುಕಿ ಕೊಟ್ಟಿರುವುದನ್ನು ಕಾಣಬಹುದು. ನವ ಜೋಡಿಯ ಪರಿಸ್ಪರ ಕಿತ್ತಾಟ ವಿಡಿಯೋದಲ್ಲಿ ಸೆರೆಯಾಗಿದೆ. “ಶುಭ ಸಂದರ್ಭದಲ್ಲಿ ಖುಷಿಯಾಗಿರಿ, ಯಾಕೆ ಈರೀತಿಯ ವರ್ತನೆ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Fri, 6 December 24