AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆಹ್ವಾನವಿಲ್ಲದೆ ಮದುವೆಯೂಟ ಸವಿಯಲು ಬಂದ ಹಾಸ್ಟೆಲ್ ವಿದ್ಯಾರ್ಥಿಗಳು; ಮುಂದೆನಾಯ್ತು ನೋಡಿ….

ಆಹ್ವಾನವಿಲ್ಲದಿರುವ ಖಾಸಗಿ ಕಾರ್ಯಕ್ರಮಗಳಿಗೆ ಹೋಗುವಂತಹದ್ದು, ಅಲ್ಲಿ ಊಟ ಮಾಡಿ ಬರುವಂತಹದ್ದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದ್ರೆ ಇಲ್ಲೊಂದು ಹಾಸ್ಟೆಲ್‌ ವಿದ್ಯಾರ್ಥಿಗಳ ಗುಂಪು ಆಹ್ವಾನವಿಲ್ಲದ ಮದುವೆ ಸಮಾರಂಭಕ್ಕೆ ಹೋಗಿದ್ದು ಮಾತ್ರವಲ್ಲದೆ, ಅಲ್ಲಿ ಅವರನ್ನು ಪ್ರಶ್ನಿಸಿದ್ದಕ್ಕೆ ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Viral: ಆಹ್ವಾನವಿಲ್ಲದೆ ಮದುವೆಯೂಟ ಸವಿಯಲು ಬಂದ ಹಾಸ್ಟೆಲ್ ವಿದ್ಯಾರ್ಥಿಗಳು; ಮುಂದೆನಾಯ್ತು ನೋಡಿ….
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 06, 2024 | 11:12 AM

Share

ಆಹ್ವಾನವಿಲ್ಲದಿರುವ ಖಾಸಗಿ ಕಾರ್ಯಕ್ರಮಗಳಿಗೆ ಹೋಗುವಂತಹದ್ದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ವಿಷಯ ಗೊತ್ತಿದ್ದರೂ ಅಥವಾ ಗೊತ್ತಿಲ್ಲದೆಯೋ ಅಥವಾ ಮೋಜಿಗಾಗಿಯೋ ಕೆಲವರು ಆಹ್ವಾನವಿಲ್ಲದ ಮದುವೆ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಫ್ರೀ ಆಗಿ ಸಿಗುವ ಭರ್ಜರಿ ಭೋಜನವನ್ನು ಸವಿದು ಬರ್ತಾರೆ. ಇಲ್ಲೊಂದಷ್ಟು ವಿದ್ಯಾರ್ಥಿಗಳು ಕೂಡ ಇದೇ ರೀತಿ ಫ್ರೀ ಊಟ ಸವಿಯಲು ಬೇರೆ ಯಾರದ್ದೋ ಮದುವೆ ಸಮಾರಂಭಕ್ಕೆ ನುಗ್ಗಿದ್ದು, ಇದನ್ನು ಯಾರೋ ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಗಳ ಗುಂಪು ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದ್ದು, ವಿದ್ಯಾರ್ಥಿಗಳ ಗುಂಪು ಫ್ರೀ ಊಟಕ್ಕಾಗಿ ಮದುವೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇಲ್ಲಿನ ಹಸನ್‌ಗಂಜ್‌ನ ರಾಮದಿನ್‌ ಮ್ಯಾರೇಜ್‌ ಲಾನ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದಕ್ಕೆ ವಿದ್ಯಾರ್ಥಿಗಳ ಗುಂಪೊಂದು ಊಟ ಮಾಡಲು ಬಂದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ಅಥಿತಿಗಳ ಮೇಲೆ ಕಲ್ಲು ಮತ್ತು ಕಚ್ಚಾ ಬಾಂಬ್‌ ಎಸೆದು ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ.

ಪೊಲೀಸ್‌ ವರದಿಗಳ ಪ್ರಕಾರ, ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಕ್ಕೆ ವಾಗ್ವಾದ ನಡೆದು ಪರಿಸ್ಥಿತಿ ಉಲ್ಬಣಗೊಂಡಿತು. ಮತ್ತು ಕೋಪಗೊಂಡ ವಿದ್ಯಾರ್ಥಿಗಳು ಮದುವೆಗೆ ಆಗಮಿಸಿದ ಅತಿಥಿಗಳ ಮೇಲೆ ಕಲ್ಲು ಮತ್ತು ಕಚ್ಚಾ ಬಾಂಬ್‌ ಎಸೆದಿದ್ದಾರೆ. ಈ ಘಟನೆ ಹಿಂಸಾತ್ಮಕ ರೂಪವನ್ನು ಪಡೆದು, ಈ ಹಿಂಸಾಚಾರದಲ್ಲಿ ಸುಮಾರು 20 ಅತಿಥಿಗಳಿಗೆ ಗಾಯಗಳಾಗಿವೆ. ಎರಡೂ ಕಡೆಯಿಂದ ದೂರನ್ನು ಸ್ವೀಕರಿಸಿದ ನಂತರ ಹಸನ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಎಫ್.ಐ.ಆರ್‌ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಮನೀಶಾ ಸಿಂಗ್‌ ಮಾಹಿತಿ ನೀಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ಹಿಂಸಾಚಾರದ ನಡುವೆಯೂ ಪೊಲೀಸ್‌ ಭದ್ರತೆಯಲ್ಲಿ ಮದುವೆ ನಡೆದಿದ್ದು, 3,000 ಜನರಿಗೆ ಭೋಜನವನ್ನು ಸಿದ್ಧಪಡಿಸಲಾಗಿದ್ದರೂ, ಗೊಂದಲದಿಂದಾಗಿ ಯಾರು ಇದನ್ನು ತಿನ್ನಲು ಸಾಧ್ಯವಾಗಲಿಲ್ಲ. ಮದುವೆಗೆ ಬಂದ ಅತಿಥಿಗಳು ಊಟ ಮಾಡದೆ ಹೋಗಿದ್ದಾರೆ. ಸುಮಾರು 150 ವಿದ್ಯಾರ್ಥಿಗಳು ಆಹ್ವಾನವಿಲ್ಲದೆ ಮದುವೆಗೆ ಬಂದಿದ್ದು, ಇವರುಗಳ ದಾಂಧಲೆಯಿಂದ 5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಧುವಿನ ತಂದೆ ರಿಂಕು ಸೋಂಕರ್‌ ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತಿನ ವಿನಾಶದ ಆರಂಭದ ವರ್ಷವಿದು; 2025ರಲ್ಲಿ ನಡೆಯಲಿರುವ ಘಟನೆಗಳ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಬಾಬಾ ವಂಗಾ

HateDetectors ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮದುವೆ ಹಾಲ್‌ ಬಲಿ ವಿದ್ಯಾರ್ಥಿಗಳು ಮದುವೆಗೆ ಆಗಮಿಸಿದ್ದ ಅತಿಥಿಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಾಲೆ ಎಬ್ಬಿಸಿದ ದೃಶ್ಯವನ್ನು ಕಾಣಬಹುದು. ಖುಷಿ ಖುಷಿಯಾಗಿ ನಡೆಯುತ್ತಿದ್ದ ಮದುವೆಯಲ್ಲಿ ವಿದ್ಯಾರ್ಥಿಗಳು ತೋರಿದ ದುರ್ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ