Viral: ಗಣಿತ ಪರೀಕ್ಷೆಯಲ್ಲಿ ಸೊನ್ನೆ ಪಡೆದ ಮಗಳು; ಇಂಥ ಅಂಕ ಗಳಿಸಲು ತುಂಬಾ ಧೈರ್ಯ ಬೇಕು ಎಂದ ತಾಯಿ

|

Updated on: Aug 29, 2023 | 11:07 AM

Encouraging: ನನ್ನ ಮರ್ಯಾದೆ ಕಳೆದೆ. ನಿನ್ನ ಸಲುವಾಗಿ ಅದೆಷ್ಟು ಖರ್ಚು ಮಾಡುತ್ತೇನೆ. ಕೇಳಿದ್ದೆಲ್ಲ ಕೊಡಿಸುತ್ತೇನೆ ಆದರೂ ನೀ ಹೀಗೆ. ಹೀಗೆ ಮಾರ್ಕ್ಸ್​ ತೆಗೆದರೆ ಜೀವನದಲ್ಲಿ ಉದ್ಧಾರವೇ ಆಗಲಾರೆ; ಮಕ್ಕಳು ಕಡಿಮೆ ಅಂಕ ಗಳಿಸಿದಾಗ ಪೋಷಕರು ಹೀಗೆ ಕೂಗಾಡುವುದುಂಟು. ಆದರೆ ಇಲ್ಲೊಬ್ಬ ತಾಯಿ, ತಮ್ಮ ಮಗಳ ಉತ್ತರ ಪತ್ರಿಕೆಯಲ್ಲಿ ಬರೆದಿದ್ದು ಮಾತ್ರ ವಿಭಿನ್ನ.

Viral: ಗಣಿತ ಪರೀಕ್ಷೆಯಲ್ಲಿ ಸೊನ್ನೆ ಪಡೆದ ಮಗಳು; ಇಂಥ ಅಂಕ ಗಳಿಸಲು ತುಂಬಾ ಧೈರ್ಯ ಬೇಕು ಎಂದ ತಾಯಿ
'ಇಷ್ಟು ಅಂಕ ಪಡೆಯಲು ಧೈರ್ಯ ಬೇಕು' ಎಂದ ತಾಯಿ.
Follow us on

Parenting: ಮಕ್ಕಳು ಪರೀಕ್ಷೆಯಲ್ಲಿ ಫೇಲ್​ ಆದಾಗ ಸಾಮಾನ್ಯವಾಗಿ ಪೋಷಕರು ಮಕ್ಕಳನ್ನು ಬಯ್ದು, ಹೊಡೆದು ಅವಮಾನಿಸುತ್ತಾರೆ ಇಲ್ಲವೇ ಬೆದರಿಸುತ್ತಾರೆ. ಆದರೆ, ಇದೀಗ ವೈರಲ್ ಆಗಿರುವ ಈ X ಪೋಸ್ಟ್​ನಲ್ಲಿ ಗಣಿತಕ್ಕೆ ಸೊನ್ನೆ ಪಡೆದ ಮಗಳನ್ನುದ್ದೇಶಿಸಿ ತಾಯಿಯೊಬ್ಬಳು (Mother) ಪ್ರೋತ್ಸಾಹದಾಯಕವಾದ ನೋಟ್​ ಬರೆದಿದ್ದಾಳೆ; ‘ನನ್ನ 6ನೇ ತರಗತಿಯ  ಗಣಿತ ನೋಟ್‌ಬುಕ್ ಸಿಕ್ಕಿದೆ. ಪ್ರತೀ ಸಲ ಕೆಟ್ಟದಾಗಿ ಪರೀಕ್ಷೆ ಬರೆದಾಗಲೂ ನನ್ನ ಅಮ್ಮ ಪ್ರೋತ್ಸಾಹದಾಯಕವಾದ ನೋಟ್ ಬರೆದು ಸಹಿ ಹಾಕುತ್ತಿದ್ದಳು. ಇಂಥ ಅಮೂಲ್ಯ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ.’ ಈ ಪೋಸ್ಟ್​ ನೋಡಿದ ನೆಟ್ಟಿಗರು ಆ ತಾಯಿಯ ಪ್ರೇರಣೆ, ಪ್ರೀತಿ ಮತ್ತು ಔದಾರ್ಯದವನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಬಾರ್ಬಿ; ದೋಸೆಗೆ ಸೋಂಕಿದ ಗುಲಾಬಿ ಜ್ವರ, ಓಪನ್​ಹೈಮರ್ ದೋಸೆಯೂ ಬೇಕೆನ್ನತ್ತಿರುವ ನೆಟ್ಟಿಗರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಝೈನಾಬ್ ಎನ್ನುವವರು X ನಲ್ಲಿ ಆ. 25ರಂದು ಈ ಪೋಸ್ಟ್​ ಮಾಡಿದ್ದಾರೆ. ‘ನಾನು 15ಕ್ಕೆ ಸೊನ್ನೆ ಪಡೆದರೂ ನನ್ನ ತಾಯಿ ಸಹಿ ಮಾಡಿ, ‘ಈ ಅಂಕಗಳನ್ನು ಪಡೆಯಲು ತುಂಬಾ ಧೈರ್ಯ ಬೇಕು’ ಎಂದು ಬರೆದಿದ್ದರು. ಅವರ ಈ ಮಾತುಗಳಿಂದಾಗಿ, ನಾನು ಗಣಿತದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುತ್ತಾ ಹೋದೆ.  ನಿಮ್ಮ ಮಗುವಿನ ವೈಫಲ್ಯವನ್ನು ಅವಮಾನಿಸದಿದ್ದರೆ ಇದೆಲ್ಲ ಸಾಧ್ಯವಾಗುತ್ತದೆ’ ಎಂದಿದ್ದಾರೆ ಆಕೆ.

ಆ ಉತ್ತರ ಪತ್ರಿಕೆ ಇಲ್ಲಿದೆ

ಈತನಕ ಈ ಪೋಸ್ಟ್​ ಅನ್ನು 95,000 ಜನರು ನೋಡಿದ್ದಾರೆ. 1,400 ಜನರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಈ ಉತ್ತರಪತ್ರಿಕೆಯಲ್ಲಿ ನಿಮ್ಮ ತಾಯಿ ಬರೆದ ನೋಟ್​ ಅಮೂಲ್ಯವಾಗಿದೆ ಎಂದಿದ್ದಾರೆ ಒಬ್ಬರು. ಅದಕ್ಕಾಗಿಯೇ ತಾಯಿ ನಮ್ಮ ಮೊದಲ ಶಿಕ್ಷಕಿ, ಮಾರ್ಗದರ್ಶಕಿ, ಸ್ನೇಹಿತೆ ಮತ್ತು ತತ್ವಜ್ಞಾನಿ. ನಿಮ್ಮ ತಾಯಿ ನಿಮ್ಮನ್ನು ಸಕಾರಾತ್ಮಕ ವಿಧಾನಗಳಿಂದ ಬೆಳೆಸಿದ್ದಾರೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಅಪಹರಣಕಾರರಿಂದ ಶಾಲಾಬಾಲಕಿಯನ್ನು ರಕ್ಷಿಸಿದ ಬೀದಿನಾಯಿಯ ವಿಡಿಯೋ ವೈರಲ್

ಇದು ಎಷ್ಟು ಮುದ್ದಾಗಿದೆ, ನನ್ನ ಕಣ್ಣುಗಳು ತುಂಬಿಬಂದವು ಎಂದಿದ್ದಾರೆ ಇನ್ನೊಬ್ಬರು. ಓಹ್​ ಎಲ್ಲ ಮಕ್ಕಳಿಗೂ ಇಂಥ ಪೋಷಕರು ಸಿಗಲಿ ಎಂದಿದ್ದಾರೆ ಮಗದೊಬ್ಬರು. ಇಂಥ ಪೋಷಕರ ಅವಶ್ಯಕತೆ ಸಾಕಷ್ಟು ಬೇಕಿದೆ. ಖಿನ್ನತೆಗೆ ಜಾರುವ ಮಕ್ಕಳನ್ನು ರಕ್ಷಿಸಬೇಕಿದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:59 am, Tue, 29 August 23