ಬೀದಿ ಬದಿ ವ್ಯಾಪಾರಿಗಳ ತಿಂಗಳ ಸಂಬಳ ಎಷ್ಟಿರಬಹುದು, ಅಬ್ಬಬ್ಬಾ ಅಂದ್ರೆ ತಿಂಗಳಿಗೆ 30 ರಿಂದ 50 ಸಾವಿರ ದುಡಿಬೋದು ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದ್ರೆ ಈ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವು ಬೀದಿ ಬದಿ ವ್ಯಾಪಾರಿಗಳ ಸಂಪಾದನೆಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿದಾಗ ಇದೇನ್ ಸ್ವಾಮಿ ಐಟಿ ಉದ್ಯೋಗಿಗಳಿಗಿಂತ ಇವರೇ ಹೆಚ್ಚು ಸಂಪಾದನೆ ಮಾಡ್ತಿದ್ದಾರಲ್ವಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ಇಲ್ಲೊಬ್ಬ ವ್ಯಕ್ತಿ ಕೂಡಾ ಬೀದಿ ಬದಿಯಲ್ಲಿ ವಡಾಪಾವ್ ಮಾರಿ ತಿಂಗಳಿಗೆ 2.8 ಲಕ್ಷ ರೂಪಾಯಿ ಗಳಿಸುತ್ತಿದ್ದಾರಂತೆ. ಈತನ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಇವರ ತಿಂಗಳ ಸಂಪಾದನೆಯನ್ನು ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವಡಾಪಾವ್ ಮಾರಾಟ ಮಾಡುವುದರಿಂದ ಮುಂಬೈನ ಬೀದಿ ಬದಿ ವ್ಯಾಪಾರಿಯೊಬ್ಬರು ಎಷ್ಟು ಸಂಪಾದನೆ ಮಾಡುತ್ತಾರೆ ಎಂಬುದನ್ನು ವ್ಲಾಗರ್ ಒಬ್ಬರು ವಿಡಿಯೋ ಮಾಡಿದ್ದಾರೆ. ಇನ್‌ಫ್ಲುಯೆನ್ಸರ್ ಸಾರ್ಥಕ್ ಸಚ್‌ದೇವ್ (sarthaksachdevva) ಅವರು ವಡಾಪಾವ್ ಮಾರಾಟ ಮಾಡುವ ವ್ಯಕ್ತಿ ತಿಂಗಳಗೆ ಗಳಿಸುವ ಸಂಪಾದನೆಯ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬೀದಿಬದಿ ವ್ಯಾಪಾರಿಯ ತನ್ನ ತಿಂಗಳ ಸಂಪಾದನೆಯ ಬಗ್ಗೆ ಹೇಳಿಕೊಂಡಿದ್ದಾನೆ. ಸಾರ್ಥಕ್ ಸ್ವತಃ ತಾವೇ ವಾಡಾಪಾವ್ ಮಾರುವ ವ್ಯಕ್ತಿಯ ಜೊತೆ ಬೆಳಗ್ಗಿನಿಂದ ಸಂಜೆಯವರೆಗೆ ಇದ್ದು ಅವರು ಒಂದು ದಿನಕ್ಕೆ ಎಷ್ಟು ಸಂಪಾದನೆ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಹೀಗೆ ವ್ಯವಹಾರದ ಬಗ್ಗೆ ಮಾತನಾಡುತ್ತಾ ಇಂದು ಕೇವಲ 2.5 ಗಂಟೆಯಲ್ಲಿ ಸುಮಾರು 200 ವಡಾಪಾವ್‌ಗಳು ಮಾರಾಟವಾಗಿದೆ, ದಿನದ ಕೊನೆಯಲ್ಲಿ ಒಟ್ಟು 622 ವಡಾಪಾವ್‌ಗಳು ಮಾರಾಟವಾಗಿದೆ ಎಂದು ಹೇಳಿದ್ದಾರೆ. ಈ ವ್ಯಕ್ತಿ ಒಂದು ವಡಾಪಾವ್ ಅನ್ನು 15 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಂದ್ರೆ ಇವರು ತಿಂಗಳಿಗೆ ಸುಮಾರು 2.8 ಲಕ್ಷ ರುಪಾಯಿ ಗಳಿಸುತ್ತಿದ್ದಾರೆ. ಮತ್ತು ವಾರ್ಷಿಕವಾಗಿ 24 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶಾಲೆಗೆ ಹೋಗೋದು ಬಿಟ್ಟು, ಗಲ್ಲಿಯಲ್ಲಿ ರೊಮ್ಯಾನ್ಸ್ ಮಾಡ್ತಾ ನಿಂತ ಸ್ಟೂಡೆಂಟ್ಸ್; ವಿಡಿಯೋ ವೈರಲ್
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 54.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮತ್ತೇ ಬ್ಯುಸಿನೆಸ್ ಅಂದ್ರೆ ಸುಮ್ನೇನಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇನ್ನೂ ನಾನು ಕೂಡಾ ಇದೇ ವ್ಯವಹಾರಕ್ಕೆ ಕೈ ಹಾಕುತ್ತೇನೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ