ರಷ್ಯಾ (Russia) ಕೆಂಗಣ್ಣಿಗೆ ಗುರಿಯಾದ ಉಕ್ರೇನ್ ಅಧ್ಯಕ್ಷ (Ukraine President) ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಮೊದಲು ಹಾಸ್ಯನಟ ಮತ್ತು ಹಿನ್ನೆಲೆ ಧ್ವನಿ ನೀಡುವ ಕಲಾವಿದರಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. 2019ರಲ್ಲಿ ಉಕ್ರೇನ್ ಅಧ್ಯಕ್ಷರಾಗಿ ವೊಲೊಡಿಮಿರ್ ಝೆಲೆನ್ಸ್ಕಿ ಅಧಿಕಾರ ಸ್ವೀಕರಿಸಿದ್ದರು.ಆದರೆ 2006ರಲ್ಲಿ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಝೆಲೆನ್ಸ್ಕಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಅದಕ್ಕೂ ಜನಪ್ರಿಯ ಮಿಗಿಲಾಗಿ ಕಾರ್ಟೂನ್ ಸಿನಿಮಾ ಪ್ಯಾಡಿಂಗ್ಟನ್ ಬಿಯರ್ (Paddington Bear) ಗೆ ಹಿನ್ನಲೆ ಧ್ವನಿಯನ್ನು ನೀಡುತ್ತಿದ್ದರು ಎಂದು ಹೇಳಲಾಗಿದೆ.
Until today I had no idea who provided the voice of @paddingtonbear in Ukraine. Speaking for myself, thank you, President Zelenskiy. #PaddingtonBear https://t.co/5VaMi201Fs
— Hugh Bonneville ?? (@hughbon) February 27, 2022
ಈ ಕುರಿತು ಪ್ಯಾಡಿಂಗ್ಟನ್ ಬಿಯರ್ ನಿರ್ಮಾಪಕ ಮಾತನಾಡಿ 2004ರಲ್ಲಿ ಬಿಡುಗಡೆಯಾದ ಪ್ಯಾಡಿಂಗ್ಟ್ನ್ ಹಾಗೂ 2017ರಲ್ಲಿ ಬಿಡುಗಡೆಯಾದ ಪ್ಯಾಡಿಂಗ್ಟನ್ 2 ಗೂ ಕೂಡ ಹಿನ್ನಲೆ ಧ್ವನಿಯನ್ನು ಝೆಲೆನ್ಸ್ಕಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟಿಷ್ ನಟ ಹಗ್ ಬೊನೆವಿಲ್ಲೆ ಈ ಕಾರ್ಟೂನ್ ಚಿತ್ರದಲ್ಲಿ ಕರಡಿಯ ಸಾಕು ತಂದೆಯ ಪಾತ್ರಕ್ಕೆ ಧ್ವನಿ ನೀಡಿದ್ದರು. ಈ ಕುರಿತು ಫ್ರಾಂಕ್ಲಿನ್ ಲಿಯೊನಾರ್ಡೋ ಎನ್ನುವವರು ಪ್ಯಂಡಿಗ್ಟನ್ನಲ್ಲಿರುವ ಧ್ವನಿ ವೊಲೊಡಿಮಿರ್ ಝೆಲೆನ್ಸ್ಕಿ ಅದರದ್ದೇ ಆಗಿದೆ ಎಂದು ದೃಢಪಡಿಸಿದ್ದಾರೆ. ಸದ್ಯ ಈ ವಿಚಾರ ಎಲ್ಲಡೆ ವೈರಲ್ ಆಗಿದೆ.
ಪ್ಯಾಡಿಂಗ್ಟನ್ ಪ್ರಮೋಶನ್ ವಿಡಿಯೋವನ್ನು ಬ್ರಿಟಿಷ್ ನಟ ಹಗ್ ಬೊನೆವಿಲ್ಲೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ವೊಲೊಡಿಮಿರ್ ಅವರು ತಮ್ಮ ಪರಿಚಯವನ್ನು ಹೇಳಿಕೊಂಡು ಚಿತ್ರದ ಪ್ರಮೋಶನ್ ಬಗ್ಗೆ ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಹಿಂದೆ ಉಕ್ರೇನ್ ಅಧ್ಯಕ್ಷರು ಏನಾಗಿದ್ದರು ಎನ್ನುವ ಪ್ರಶ್ನೆಗೆ ಒಂದು ಹಂತದ ಉತ್ತರ ದೊರಕಿದಂತಾಗಿದೆ.
ಇದನ್ನೂ ಓದಿ:
Viral Video: ಕವ್ವಾಲಿ ಹಾಡುವಾಗ ಮುರಿದುಬಿದ್ದ ವೇದಿಕೆ: ತಂಡದ ಸದಸ್ಯರು ಮಾಡಿದ್ದೇನು ಗೊತ್ತಾ?