ರಷ್ಯನ್ ಬಾಲೆಯರ ಮಾಂತ್ರಿಕ ತೇಲು, ಆಹ್ಲಾದಗೊಳಿಸುವ ಈ ವಿಡಿಯೋ ನೋಡಿ

Berezka Dance : ಈ ಕಲಾವಿದೆಯರು ಫ್ಲೋಟಿಂಗ್ ಸ್ಟೆಪ್​ ಕರಗತ ಮಾಡಿಕೊಂಡಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈತನಕ ಬೆರೆಝ್ಕಾ ನೃತ್ಯವನ್ನು ನೋಡಿಲ್ಲವಾದರೆ ಒಮ್ಮೆ ನೋಡಲೇಬೇಕು ನೀವು.

ರಷ್ಯನ್ ಬಾಲೆಯರ ಮಾಂತ್ರಿಕ ತೇಲು, ಆಹ್ಲಾದಗೊಳಿಸುವ ಈ ವಿಡಿಯೋ ನೋಡಿ
Russian Berezka Dancers "Magically Float" On The Stage
Edited By:

Updated on: Nov 17, 2022 | 11:47 AM

Viral Video : ರಷ್ಯಾದ ಬೆರೆಝ್ಕಾ ನರ್ತಕಿಯರು ವೇದಿಕೆಯ ಮೇಲೆ ನರ್ತಿಸುವ ಈ ಸೂಕ್ಷ್ಮ ಕಲೆಗಾರಿಕೆ ಯಾರನ್ನೂ ಅಚ್ಚರಿಗೊಳಿಸುವಂತಿದೆ. ವೇದಿಕೆ ಸ್ಥಿರವಾಗಿಯೇ ಇದೆ ಆದರೆ ವೇದಿಕೆಯೇ ತಿರುಗುತ್ತಿದೆ ಎಂದು ಭಾಸವಾಗುವಂತಿದೆ ತಾನೆ? ಹೀಗಾಗಿ ಇವರು ತೇಲುತ್ತಿದ್ದಾರೇನೋ ಎಂದು ಅನ್ನಿಸುತ್ತದೆ. ಆದರೆ ಇವರು ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಹೀಗೆ ನೃತ್ಯದಲ್ಲಿ ಹೀಗೊಂದು ತೇಲು ಸೃಷ್ಟಿಸಿದ್ದು ಮಾತ್ರ ಅದ್ಭುತ. ನೋಡಿ ಈ ವೈರಲ್ ವಿಡಿಯೋ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಜಗತ್ತಿನಾದ್ಯಂತ ಅನೇಕ ನೃತ್ಯಪ್ರಕಾರಗಳಿವೆ. ಆಯಾ ನೃತ್ಯಪ್ರಕಾರಗಳಿಗೆ ಅವುಗಳದೇ ಆದ ವೈವಿಧ್ಯ, ಶೈಲಿ ಮತ್ತು ವ್ಯಕ್ತಿತ್ವಗಳಿವೆ. ಇಪ್ಪತ್ತನೇ ಶತಮಾನದ ಸೋವಿಯತ್ ಒಕ್ಕೂಟವು ಬೆರೆಝ್ಕಾ ನೃತ್ಯವನ್ನು ಮುನ್ನೆಲೆಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿತು. 1948 ರಲ್ಲಿ ರಷ್ಯಾದ ನರ್ತಕಿ ಮತ್ತು ನೃತ್ಯ ಸಂಯೋಜಕಿ ನಾಡೆಝ್ಡಾ ನಡೆಝ್ಡೀನಾ ಬೆರೆಝ್ಕಾ ಡ್ಯಾನ್ಸ್​ ಎನ್ಸೆಂಬಲ್​ ಸ್ಥಾಪಿಸಿದರು. ಕಲಾವಿದೆಯರು ಉದ್ದನೆಯ ನಿಲುವಂಗಿಗಳಿಂದ ಅಲಂಕೃತಗೊಂಡು ಹೀಗೆ ತೇಲುನೃತ್ಯವನ್ನು ಮಾಡುವಲ್ಲಿ ಹೆಸರುವಾಸಿಯಾದರು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಕಲಾವಿದೆಯರು ಈ ತಂಡದ ಸದಸ್ಯರೇ.

ನೆಟ್ಟಿಗರು ಇವರ ಕೌಶಲಕ್ಕೆ ಬೆರಗುಗಣ್ಣಾಗಿದ್ದಾರೆ. ಇವರು ಫ್ಲೋಟಿಂಗ್​ ಸ್ಟೆಪ್​ ತಂತ್ರವನ್ನು ಹೇಗೆಲ್ಲಾ ನಿರ್ವಹಿಸಿದ್ದಾರೆ ಎಂದು ಅಚ್ಚರಿಯಿಂದ ಚರ್ಚಿಸುತ್ತಿದ್ದಾರೆ. ಏಕೆಂದರೆ ಇದು ಅತ್ಯಂತ ಕಠಿಣವಾದ ತಂತ್ರ. ಅತಿಯಾದ ಪರಿಶ್ರಮದಿಂದ ಮಾತ್ರ ಸಾಧಿಸುವಂಥದ್ದು.

ಏನನ್ನಿಸಿತು ಈ ವಿಡಿಯೋ ನೋಡಿದ ನಿಮಗೆ ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ