ಅಳಬೇಡ ಅಣ್ಣ ಅಳಬೇಡ; ಮಿಲಿಯನ್ಗಟ್ಟಲೆ ಜನಕ್ಕೆ ಈ ವಿಡಿಯೋ ಇಷ್ಟವಾಗಿದೆ
Cat : ನನಗ್ಯಾರೂ ಇಲ್ಲ, ನನ್ನ ನೋವನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು, ತುಂಬಾ ಒಂಟಿತನ ಕಾಡುತ್ತಿದೆ ಎಂದುಕೊಳ್ಳುವವರೆಲ್ಲ ಒಮ್ಮೆ ಬೆಕ್ಕನ್ನು ಸಾಕಿನೋಡಿ.
Viral Video : ಮನುಷ್ಯರಿಗಿಂತ ಪ್ರಾಣಿಗಳೇ ನಿಮ್ಮ ಮನಸ್ಸಿಗೆ ಹೆಚ್ಚು ಸ್ಪಂದಿಸುತ್ತವೆ. ಬಾಯಿಬಿಟ್ಟು ಹೇಳಿದರೂ ಮನುಷ್ಯರು ಸಾಕಷ್ಟು ಸಲ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಪ್ರಾಣಿಗಳು ಮೌನದಲ್ಲಿಯೇ ನಿಮ್ಮ ಮನಸ್ಸಿನಲ್ಲಿ ನಡೆಯುವುದನ್ನು ಗ್ರಹಿಸುತ್ತವೆ ಮತ್ತು ಸ್ಪಂದಿಸುತ್ತವೆ. ಹಾಗಾಗಿಯೇ ಮನುಷ್ಯ ಸಾಕುಪ್ರಾಣಿಗಳನ್ನು ಮನುಷ್ಯಸಂಬಂಧಗಳಿಗಿಂತ ಹೆಚ್ಚು ನೆಚ್ಚುವುದು ಮತ್ತು ಪ್ರೀತಿಸುವುದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಈ ಮನುಷ್ಯ ಯಾಕೆ ಅಳುತ್ತಿದ್ದಾನೆ ಗೊತ್ತಿಲ್ಲ. ಆದರೆ ಅವನ ಬಳಿ ಬಂದ ಈ ಬೆಕ್ಕು ಮಾತ್ರ ನಿನ್ನೊಂದಿಗೆ ನಾನಿದ್ದೇನೆ ಎಂಬಂತೆ ಸಮಾಧಾನ ಹೇಳಿದೆ.
Nothing gonna change.. ? pic.twitter.com/cdjsazBHLF
ಇದನ್ನೂ ಓದಿ— Buitengebieden (@buitengebieden) November 16, 2022
ನೆಟ್ಟಿಗರು ಈ ವಿಡಿಯೋ ನೋಡಿ ಕರಗುತ್ತಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 1.9 ಮಿಲಿಯನ್ ಜನರು ನೋಡಿದ್ದಾರೆ. ಅನೇಕರು ತಮ್ಮ ತಮ್ಮ ಬೆಕ್ಕು ತಮಗೆ ಸ್ಪಂದಿಸಿದ ಭಾವುಕ ಕ್ಷಣಗಳ ವಿಡಿಯೋ ಅನ್ನು ಅಪ್ಲೋಡ್ ಮಾಡಿದ್ದಾರೆ. ನಾಯಿ, ಬೆಕ್ಕು, ಆಕಳು ಮುಂತಾದ ಸಾಕುಪ್ರಾಣಿಗಳು ಬಹಳೇ ಸೂಕ್ಷ್ಮ. ಎಂಥ ಸಂದರ್ಭದಲ್ಲಿಯೂ ಸಾಕಿದವರನ್ನು ಬಿಟ್ಟು ಕದಲಲಾರವು.
Dog:Don’t cry. It’s not a big deal. pic.twitter.com/EJ1RJ17aZF
— Funny Animals(???Foback) (@Lisa06862244) November 16, 2022
ಎಂಥ ಭಾವುಕ ಕ್ಷಣಗಳಿವು ಎಂದು ನೆಟ್ಟಿಗರು ಬೆಕ್ಕಿನ ವಿಡಿಯೋಗೆ ಸ್ಪಂದಿಸಿದ್ದಾರೆ. ಇದ್ದರೆ ಇಂಥದೊಂದು ಆಪ್ತಜೀವ ಇರಬೇಕು. ಈ ಮನುಷ್ಯರ ಸಹವಾಸವೇ ಬೇಡ ಎಂದಿದ್ದಾರೆ ಮತ್ತೊಬ್ಬರು. ಬೆಕ್ಕುಗಳು ಎಂದೂ ಮನುಷ್ಯನನ್ನು ನೋಯಿಸುವುದಿಲ್ಲ ಬದಲಿಗೆ ಸಾಂತ್ವನ ನೀಡುತ್ತವೆ ಎಂದಿದ್ದಾರೆ ಮಗದೊಬ್ಬರು. ದಿನವೂ ನಾನು ಬೆಕ್ಕುಗಳ ವಿಡಿಯೋ ನೋಡಿಯೇ ಸಮಾಧಾನ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಹಲವರು.
ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ