ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ರತಿಯೊಬ್ಬರು ಸೌದೆ ಒಲೆಗಳಲ್ಲಿಯೇ ಅಡುಗೆ ಮಾಡ್ತಾರೆ. ಸೌದೆ ಒಲೆಗಳಲ್ಲಿ ಮಾಡಿದಂತ ಅಡುಗೆಗಳು ರುಚಿಯಾಗಿರುತ್ತವೆ, ಆದ್ರೆ ಗುಡ್ಡಗಾಡು ಪ್ರದೇಶಗಳಿಂದ ಒಣ ಕಟ್ಟಿಗೆಗಳನ್ನು ತುರುವುದೇ ಒಂದು ದೊಡ್ಡ ಕಷ್ಟದ ಕೆಲಸ. ಎಷ್ಟೇ ಕಷ್ಟವಾದ್ರೂ ಹಳ್ಳಿಗಳಲ್ಲಿ ಮನೆಯವರೆಲ್ಲಾ ಜೊತೆ ಸೇರಿ ಗುಡ್ಡಗಾಡು ಪ್ರದೇಶಗಳಿಂದ ಕಟ್ಟಿಗೆಗಳನ್ನು ಹೊತ್ತು ತಂದು ಸಂಗ್ರಹಿಸಿಡುತ್ತಾರೆ. ನಾವುಗಳು ಅಪ್ಪಾ ದೇವ್ರೆ ಅಷ್ಟು ದೂರದಿಂದ ಈ ಕಟ್ಟಿಗಳನ್ನು ಹೊತ್ತು ತರಲು ನಮ್ ಕೈಯಿಂದ ಆಗಲ್ಲ ಅಂತ ಹೇಳ್ತಿವಿ ಅಲ್ವಾ. ಆದ್ರೆ ಇಲ್ಲೊಂದು ಶ್ವಾನಗಳು ಪಾಪ ಮನೆಯವರೇ ಎಷ್ಟು ಅಂತ ಕಷ್ಟ ಪಡ್ತಾರೆ, ನಾವು ಕೂಡಾ ಅವರಿಗೆ ಸಹಾಯ ಮಾಡೋಣ ಎನ್ನುತ್ತಾ, ಮನೆಯವರ ಜೊತೆಸೇರಿ ಆ ಶ್ವಾನಗಳು ಕೂಡಾ ಕಟ್ಟಿಗೆಯನ್ನು ಹೊತ್ತುಕೊಂಡು ಬಂದಿವೆ. ಈ ನಿಷ್ಕಲ್ಮಶ ಮನಸ್ಸುಗಳ ಮುದ್ದಾದ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಯನ್ನು ಪಡೆದಿದೆ.
ಅನಿತ ರಾಣಿ (@anitarani056) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮನೆಯವರ ಜೊತೆ ಸೇರಿ ಶ್ವಾನಗಳು ಕೂಡಾ ಕಟ್ಟಿಗೆಯನ್ನು ಹೊತ್ತು ತರುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವಿಡಿಯೋದಲ್ಲಿ ಪಕ್ಕದ ಗುಡ್ಡಗಾಡು ಪ್ರದೇಶದಿಂದ ಗಂಡ ಹೆಂಡತಿ ಇಬ್ಬರು ಸೈಕಲ್ ಮೇಲೆ ಒಂದಷ್ಟು ಕಟ್ಟಿಗೆಯನ್ನು ಹೊತ್ತುಕೊಂಡು ಬರುತ್ತಿರುತ್ತಾರೆ. ಜೊತೆಗೆ ಇವರ ಮನೆಯ ನಾಲ್ಕು ನಾಯಿಗಳು ಸಹ ನಾವು ನಮ್ಮ ಮಾಲೀಕರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎನ್ನುತ್ತಾ, ಸ್ವಲ್ಪ ಸ್ವಲ್ಪ ಕಟ್ಟಿಗೆಯನ್ನು ಹೊತ್ತುಕೊಂಡು ಬರುವ ಸುಂದರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಗಾಜಿನ ಚೂರುಗಳನ್ನು ಹಾಗೇನೇ ಕಸದ ಬುಟ್ಟಿಗೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
ಡಿಸೆಂಬರ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಇದ್ದಕ್ಕೆ ಹೇಳೋದೂ ನಾಯಿಗಳು ನೀಯತ್ತಿನ ಪ್ರಾಣಿಗಳುʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಶ್ವಾನಗಳು ತಮ್ಮ ಮಾಲೀಕರಿಗೆ ನಿಷ್ಠೆಯನ್ನು ತೋರುವ ರೀತಿಯನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ವಿಡಿಯೋ ತುಂಬಾ ಮುದ್ದಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: