ಆನೆಗಳು ಶಾಂತ ಪ್ರಾಣಿಗಳು. ಸಾಮಾನ್ಯವಾಗಿ ಅವುಗಳು ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ. ಆದರೆ ಕೆಲವೊಮ್ಮೆ ಅವುಗಳಿಗೆ ಮದವೇರಿದರೆ, ಅದು ಇತರ ಪ್ರಾಣಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಅವುಗಳ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತವೆ. ಇದೇ ರೀತಿ ಮನುಷ್ಯರು ಹಾಗೂ ಪ್ರಾಣಿಗಳನ್ನು ಆನೆಗಳು ಅಟ್ಟಾಡಿಸಿಕೊಂಡು ಹೋಗುವಂತಹ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಜೀಪ್ ಅಲ್ಲಿ ಹಾಯಾಗಿ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಂತಹ ಯುವಕರ ಗುಂಪನ್ನು ಆನೆಯೊಂದು ಅಟ್ಟಾಡಿಸಿಕೊಂಡು ಬಂದಿವೆ. ಈ ದೃಶ್ಯಕ್ಕೆ ಸೂಕ್ತವೆಂಬಂತೆ ಮನು ಹಂದಾಡಿಯವರ, ʼಹಟ್ಟಿಯಂಗಡಿ ಗಣಪತಿ ಮಧೂರು ಗಣಪತಿ… ಆನೆ ಹೋಯ್ತಾʼ ಎಂದು ಹೇಳುವ ತಮಾಷೆಯ ಡೈಲಾಗ್ ಅನ್ನು ಹಿನ್ನೆಲೆ ಧ್ವನಿಯಾಗಿ ಈ ವಿಡಿಯೋಗೆ ಸೇರಿಸಲಾಗಿದೆ. ಈ ದೃಶ್ಯಕ್ಕೆ ಬ್ಯಾಗ್ರೌಂಡ್ ವಾಯ್ಸ್ ಹೇಳಿ ಮಾಡಿಸಿದಂತಿದೆ, ಇದು ಸಿಕ್ಕಾಪಟ್ಟೆ ಹಾಸ್ಯಮಯವಾಗಿದೆ ಎಂದು ಹಲವರು ಹೇಳಿದ್ದಾರೆ.
ಈ ವಿಡಿಯೋವನ್ನು @trollkannada_official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಜೀಪ್ ಅಲ್ಲಿ ಹಾಯಾಗಿ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ಯುವಕರ ಗುಂಪನ್ನು ದೈತ್ಯ ಆನೆ ಅಟ್ಟಾಡಿಸಿಕೊಂಡು ಹೋಗುವುದನ್ನು ಕಾಣಬಹುದು.
ವಿಡಿಯೋದಲ್ಲಿ ಕಾಡು ದಾರಿಯ ಮಧ್ಯೆ ಒಂದಷ್ಟು ಯುವಕರು ಜೀಪ್ ಅಲ್ಲಿ ಹಾಯಾಗಿ ಡ್ರೈವ್ ಮಾಡುತ್ತಾ ಹೋಗುತ್ತಿದ್ದರು. ಆ ವೇಳೆಯಲ್ಲಿ ದೈತ್ಯ ಆನೆಯೊಂದು ಇವರಿಗೆ ಎದುರಾಗುತ್ತದೆ. ಯುವಕರನ್ನು ಕಂಡು ಸಿಟ್ಟಾದ ಆನೆ ಅವರನ್ನು ಅಟ್ಟಾಡಿಸಿಕೊಂಡು ಬರುತ್ತದೆ. ಆನೆ ಮುಂದೆ ಬರುತ್ತಿದ್ದಂತೆ ಜೀಪ್ ಓಡಿಸುತ್ತಿದ್ದ ಚಾಲಕ ರಿವರ್ಸ್ ಡ್ರೈವ್ ಮಾಡುತ್ತಾ ಬರುತ್ತಾನೆ. ಕೊನೆಯಲ್ಲಿ ಆನೆ ಅತ್ತ ಕಡೆ ಹೋಗುತ್ತೆ. ಈ ಒಂದು ಸಂದರ್ಭಕ್ಕೆ ಸೂಕ್ತವಾಗುವಂತೆ ಮನು ಹಂದಾಡಿಯವರ ʼಹಟ್ಟಿಯಂಗಡಿ ಗಣಪತಿ ಮಧೂರು ಗಣಪತಿ… ಆನೆ ಹೋಯ್ತಾʼ ಎಂದು ಹೇಳುವ ತಮಾಷೆಯ ಡೈಲಾಗ್ ಅನ್ನು ಹಿನ್ನೆಲೆ ಧ್ವನಿಯಾಗಿ ಸೇರಿಸಲಾಗಿದೆ.
ಇದನ್ನೂ ಓದಿ: ಈ ಲೇಸ್ ಪ್ಯಾಕೆಟ್ನಲ್ಲಿ ಎರಡೇ ಚಿಪ್ಸ್! ಇದು ಮಹಾಮೋಸ ಎಂದು ತಲೆ ಚಚ್ಚಿಕೊಂಡ ವ್ಯಕ್ತಿ
ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 127K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಕೊನೆಗೂ ಭಗವಂತ ಕೈ ಹಿಡಿದʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಹುಡುಗರ ಪರಿಸ್ಥಿತಿಯನ್ನು ಕಂಡು ನಗು ತಡೆಯಲಾಗಲಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:31 pm, Mon, 11 December 23