ಹೆಚ್ಚಾಗಿ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಬಸ್ಸುಗಳಲ್ಲಿ ಫುಲ್ ರಶ್ ಇರುತ್ತೆ. ಎಷ್ಟೇ ರಶ್ ಇದ್ರೂ ನಾನು ಮನೆಗೆ ಬೇಗ ತಲುಪಿದ್ರೆ ಸಾಕು, ನಾನು ಸಮಯಕ್ಕೆ ಸರಿಯಾಗಿ ಆಫೀಸ್ ತಲುಪಿದ್ರೆ ಸಾಕು, ಕರೆಕ್ಟ್ ಟೈಮ್ಗೆ ಕಾಲೇಜ್ ರೀಚ್ ಆದ್ರೆ ಸಾಕು ಎನ್ನುತ್ತಾ, ಹೆಚ್ಚಿನವರು ಬಸ್ ಎಷ್ಟೇ ರಷ್ ಇದ್ರೂ ಅದೇ ಬಸ್ಸಿನಲ್ಲಿ ನೇತಾಡಿಕೊಂಡು ಹೋಗುತ್ತಾರೆ. ಹೀಗೆ ಬಸ್ಸಲ್ಲಿ ಸಿಕ್ಕಾಪಟ್ಟೆ ರಶ್ ಇದ್ರೆ ಪ್ರಯಾಣಿಕರನ್ನು ಹತ್ತಿ ಇಳಿಸುವುದೇ ಕಂಡಕ್ಟರ್ಗೆ ಒಂದು ದೊಡ್ಡ ತಲೆನೋವಾಗಿರುತ್ತೆ. ಅದರಲ್ಲೂ ಈ ಸಮಯದಲ್ಲಿ ಪ್ರಯಾಣಿಕರು ಬಸ್ ಹತ್ತಿ ಇಳಿಯಲು ನೂಕು ನುಗ್ಗಲು ಮಾಡಿದರೆ, ಹೆಚ್ಚಾಗಿ ಕಂಡೆಕ್ಟರ್ಗಳು ಕೋಪಗೊಂಡು ಪ್ರಯಾಣಿಕರ ಮೇಲೆ ರೇಗಾಡಿಬಿಡುತ್ತಾರೆ. ಯಾಕಮ್ಮ ಅರ್ಜೆಂಟ್ ಮಾಡ್ತೀರಾ, ಇಲ್ಲಿ ಬಸ್ಸಿಂದ ಇಳಿತಿರೋದು ಕಣ್ಣ್ ಕಾಣ್ಸಲ್ವಾ ಅಂತೆಲ್ಲಾ ಜೋರು ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಂಡೆಕ್ಟರ್ ಮಾತ್ರ ಯಾರ ಮೇಲೂ ರೇಗಾಡದೆ ನಿಲ್ಲೇ ಗಂಗವ್ವ.. ಬಾರೇ ಗೌರಮ್ಮ… ಅರ್ಜೆಂಟ್ ಮಾಡ್ಬೇಡಾ, ಜನರು ಇಳಿದ ಮೇಲೆ ನಿಧಾನಕ್ಕೆ ಬಸ್ ಹತ್ತುವಿರಂತೆ ಎಂದು ಹಾಡನ್ನು ಹಾಡುತ್ತಾ ಬಹಳ ಲವಲವಿಕೆಯಿಂದ ಪ್ರಯಾಣಿಕರನ್ನು ಬಸ್ಸಿನಿಂದ ಹತ್ತಿ ಇಳಿಸುವ ಕೆಲಸವನ್ನು ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ಇದನ್ನು ನೋಡಿದ ಅನೇಕರು ಮಾಡೋ ಕೆಲಸದಲ್ಲಿ ನೆಮ್ಮದಿ ಸಿಗಬೇಕಾದ್ರೆ ಹೀಗೆ ಖುಷಿ ಖುಷಿಯಾಗಿರಬೇಕು ಎಂದು ಹೇಳಿದ್ದಾರೆ.
@raichur_mandi_adda ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಮಾಡೋ ಕೆಲಸದಲ್ಲಿ ನೆಮ್ಮದಿ ಸಿಗಬೇಕಾದ್ರೆ ಹೀಗೆ ಖುಷಿ ಖುಷಿಯಾಗಿರಬೇಕುʼ ಎಂಬ ಶೀರ್ಷಿಕೆಯನ್ನು ಸಹ ಬರೆಯಲಾಗಿದೆ. ಬಹಳ ಲವಲವಿಕೆಯಿಂದ ಹಾಡನ್ನು ಹಾಡುತ್ತಾ ಬಸ್ಟ್ ಕಂಡಕ್ಟರ್ ಪ್ರಯಾಣಿಕರನ್ನು ಬಸ್ಸಿನಿಂದ ಪ್ರಯಾಣಿಕರನ್ನು ಹತ್ತಿ ಇಳಿಸುವ ದೃಶ್ಯಾವಳಿಯನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವಿಡಿಯೋದಲ್ಲಿ ಬಸ್ಸ್ಟ್ಯಾಂಡಿಗೆ ಬಸ್ ಬಂದ ತಕ್ಷಣ ಮಹಿಳೆಯೊಬ್ಬರು ಆ ಸ್ಟಾಪಿನಲ್ಲಿ ಪ್ರಯಾಣಿಕರು ಇಳಿಯುವ ಮುಂಚೆಯೇ ಬಸ್ಸ್ ಹತ್ತಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಈ ಕಂಡಕ್ಟರ್ ʼನಿಲ್ಲೇ ಗಂಗಮ್ಮ, ಬಾರೇ ಗೌರಮ್ಮ ಈಗ್ಲೇ ಬಸ್ ಹತ್ತ್ ಬ್ಯಾಡ, ಜನ್ರು ಬಸ್ಸಿಂದ ಇಳಿತಾ ಇದ್ದಾರೆ. ಅರ್ಜೆಂಟ್ ಯಾಕ್ ಮಾಡ್ತಿ ನಮ್ಮವ್ವಾ.. ಬಾರೇ ನಮ್ಮವ್ವ ಎಂದು ಬಹಳ ಉತ್ಸಾಹದಿಂದ ಹಾಡನ್ನು ಹಾಡುತ್ತಾ, ಬಸ್ಸಿನಿಂದ ಪ್ರಯಾಣಿಕರನ್ನು ಹತ್ತಿ ಇಳಿಸುವ ಸೊಗಸಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಆನೆ ಬಂತೋ.. ಕಾಪಾಡಪ್ಪ ಗಣಪ; ಈ ಹುಡುಗರು ಗೋಳಾಟ ನೋಡಿ
ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 175 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವಿಡಿಯೋವನ್ನು ನೋಡಿದ ಅನೇಕರು ಕಂಡೆಕ್ಟರ್ ಹಾಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: