Father Daughter : ನೀವು ನನ್ನ ಸಂದರ್ಶನ (Interview) ಕಳಿಸಲು ಕೇಳಿದ್ದೀರಿ. ಅದಕ್ಕಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ಹಾಗೆಯೇ ನೀವು ನನ್ನ ಮಕ್ಕಳ ಬಗ್ಗೆ ಕೇಳಿದ್ದೀರಿ. ಆದರೆ ನನಗಿರುವುದು ಒಬ್ಬಳೇ ಮಗಳು, ಆಕೆಯ ಹೆಸರು ಆ್ಯಬಿ. ಇನ್ನು ನನ್ನ ಹಿನ್ನೆಲೆ ಬಗ್ಗೆ ಹೇಳಬೇಕೆಂದರೆ, ನಾನು ಈಗ ಇದ್ದೇನಲ್ಲ ಹೀಗೆಯೇ ನಿತ್ಯವೂ ಡ್ರೆಸ್ ಮಾಡಿಕೊಳ್ಳುತ್ತೇನೆ. ಪ್ರತೀದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳುತ್ತೇನೆ. ನಂತರ 12 ಮೈಲಿ ಓಡುತ್ತೇನೆ. ವಾಪಾಸು ಮನೆಗೆ ಬಂದು ಹರಡಿರುವ ಮನೆಯನ್ನೆಲ್ಲ ಸ್ವಚ್ಛಗೊಳಿಸಿ ಒಪ್ಪಗೊಳಿಸುತ್ತೇನೆ. ನಂತರ ಪಾತ್ರೆಗಳನ್ನು ತೊಳೆದು ನಾಯಿಗಳಿಗೆ ಸ್ನಾನ ಮಾಡಿಸುತ್ತೇನೆ. ಆಮೇಲಷ್ಟೇ ನನ್ನ ಹೆಂಡತಿ ಹಾಸಿಗೆಯಿಂದ ಎದ್ದೇಳುತ್ತಾಳೆ. ಹೀಗೆ ಅಪ್ಪ ಹೇಳುತ್ತಿರುವಾಗ ಮಗಳು, ಕಟ್ ಕಟ್ ಎಂದು ಕಿರಿಚುತ್ತಾಳೆ. ಯಾಕಿರಬಹುದು?
ಇದೆಲ್ಲ ಸುಳ್ಳು, ಇದು ನೀನಲ್ಲ ಎಂದು ಹೇಳುತ್ತ ಜೋರಾಗಿ ಕೂಗುತ್ತ ಮಗಳು ಫ್ರೇಮ್ನಿಂದ ಎದ್ದು ಹೋಗಲು ನೋಡುತ್ತಾಳೆ. ಅದಕ್ಕೆ ಪ್ರತಿಯಾಗಿ ಅಪ್ಪ, ಅವರೆಲ್ಲ ನೋಡುತ್ತಿರುತ್ತಾರೆ, ನೀನು ಹೀಗೆಲ್ಲ ಹೋಗಬಾರದು ದಯವಿಟ್ಟು ಕುಳಿತುಕೋ ಎಂದು ಮಗಳಿಗೆ ಹೇಳುತ್ತಾನೆ. ನಂತರ ಆತ ತನ್ನ ಸಂದರ್ಶನವನ್ನು ಮುಂದುವರಿಸುತ್ತಾನೆ.
ಇದನ್ನೂ ಓದಿ : Viral Video: ಮಹಾರಾಷ್ಟ್ರ; ‘ಬುದ್ಧಿ ಇದೆಯೇ ನಿನಗೆ?’ ಭಯೋತ್ಪಾದಕನಿಗೆ ಕಪಾಳಮೋಕ್ಷ, ಮುಂದೆ?
ಇನ್ನು ನೀವು ನನ್ನ ಡಯೆಟ್ ಬಗ್ಗೆ ಕೇಳಿದ್ದೀರಿ, ನಾನು ಅಪ್ಪಟ ಸಸ್ಯಾಹಾರಿ. ಪಿಝಾ ಅಂತೂ ತಿನ್ನುವುದೇ ಇಲ್ಲ. ಎಗ್ಸ್ಯಾಂಡ್ವಿಚ್, ಐಸ್ಟೀ ಅಂತೂ ಮುಟ್ಟುವುದೇ ಇಲ್ಲ ಎಂದು ಆತ ಹೇಳುತ್ತಿದ್ದಂತೆ, ಎಲ್ಲಾ ಸುಳ್ಳು ಚಿಪ್ಸ್ ತಿನ್ನುತ್ತೀ ಜೊತೆಗೆ ಡ್ರಿಂಕ್ಸ್. ಹಾಲನ್ನೂ ಕುಡಿಯುತ್ತೀ ಮತ್ತೆ ದಿನವಿಡೀ ಸಕ್ಕರೆ ತಿನ್ನುತ್ತಿರುತ್ತೀ ಎಂದು ಕೂಗುತ್ತಾಳೆ. ಸುಳ್ಳೀನ ಮೇಲೆ ಸುಳ್ಳನ್ನು ಕೇಳಿಸಿಕೊಂಡು ಕೋಪ ನೆತ್ತಿಗೇರಿ ಬೈ ಎಂದು ಎದ್ದುಹೋಗಲು ನೋಡುತ್ತಾಳೆ. ದಯವಿಟ್ಟು ಕುಳಿತುಕೋ ಎಂದು ಕುಳ್ಳರಿಸುತ್ತಾನೆ.
ಇದನ್ನೂ ಓದಿ : Viral: ಈ ಬೈಕ್ನಲ್ಲಿ ಎಷ್ಟು ಜನರು ಸವಾರಿ ಮಾಡುತ್ತಿದ್ದಾರೆ? ಇದು ಭ್ರಮಾತ್ಮಕ ಚಿತ್ರವಲ್ಲ!
ಇಲ್ಲ ನಾನು ನೀರನ್ನು ಮಾತ್ರ ಕುಡಿಯುತ್ತೇನೆ ಎಂದ ಆತ ಹೇಳುತ್ತಾನೆ. ಎಲ್ಲಾ ಸುಳ್ಳು, ಎಲ್ಲಾ ಸುಳ್ಳು, ಹಾಗೆಲ್ಲ ಸುಳ್ಳು ಹೇಳಬಾರದು ಎಂದು ಮಗಳು ಫ್ರೇಮಿನಿಂದ ಎದ್ದು ಹೋಗುವಲ್ಲಿಗೆ ವಿಡಿಯೋ ಮುಕ್ತಾಯವಾಗುತ್ತದೆ. ಇದೊಂದು ನಕಲಿ ಸಂದರ್ಶನದ (Fake Interview) ವಿಡಿಯೋ. ತಮಾಷೆಗಾಗಿ ಮಾಡಿದ್ದಷ್ಟೇ. ಆದರೆ ಈ ವಿಷಯ ಮಗಳಿಗೆ ಗೊತ್ತಿಲ್ಲ. ಗಂಭೀರವಾಗಿ ಕ್ಯಾಮೆರಾದೆದುರು ಕುಳಿತು ಅಪ್ಪನ ಮಾತುಗಳನ್ನು ಕೇಳಿಸಿಕೊಂಡು ಸಿಟ್ಟಿಗೆದ್ದಿದೆ ಈ ಪುಟಾಣಿ!
ಇದನ್ನೂ ಓದಿ : Viral: ಆಸ್ಟ್ರೇಲಿಯಾ; 247 ಮಿಲಿಯನ್ ವರ್ಷಗಳ ಹಿಂದೆ ಹಲ್ಲಿಜಾತಿಗೆ ಸೇರಿದ್ದ ಜೀವಿಯ ಪಳಿಯುಳಿಕೆ ಪತ್ತೆ
ಆದರೆ ಅಪ್ಪ ನಗುವನ್ನು ತಡೆದುಕೊಂಡು ಗಂಭೀರವಾಗಿ ಸುಳ್ಳು ಹೇಳುತ್ತ ಹೋಗಿದ್ದಾನೆ. ಈ ವಿಡಿಯೋ ಅನ್ನು ಈತನಕ 12 ಮಿಲಿಯನ್ ಜನರು ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಬಿದ್ದುಬಿದ್ದು ನಕ್ಕು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಈಕೆ ಮುಂದಿನ ಅಧ್ಯಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ, ತುಂಬಾ ಪ್ರಾಮಾಣಿಕ ಮತ್ತು ನಿಖರತೆ ಇದೆ ಈ ಮಗುವಿನ ನಡೆವಳಿಕೆಯಲ್ಲಿ ಎಂದಿದ್ದಾರೆ ನೆಟ್ಟಿಗರು.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:06 pm, Thu, 10 August 23