Viral Video: ಕಿಟಕಿ ಬಾಗಿಲು ತೆಗಿಯಲು ಈ ಬೆಕ್ಕಿನ ಕಸರತ್ತು ನೋಡಿ

ಬೆಕ್ಕೊಂದು ಕಿಟಕಿಯಿಂದ ಮನೆಯ ಒಳಗೆ ಬರಲು ಯಾವ ಪರಿ ಕಸರತ್ತು ಮಾಡುತ್ತಿದೆ ಎಂಬುದನ್ನು ಈ ವೈರಲ್ ವೀಡಿಯೋದಲ್ಲಿ ನೋಡಿ.

Viral Video: ಕಿಟಕಿ ಬಾಗಿಲು ತೆಗಿಯಲು ಈ ಬೆಕ್ಕಿನ ಕಸರತ್ತು ನೋಡಿ
ವೈರಲ್​​ ವೀಡಿಯೊ
Edited By:

Updated on: Jun 02, 2023 | 4:23 PM

ಬೆಕ್ಕುಗಳನ್ನು ಸಾಕಲು ಬಹಳಷ್ಟು ಜನ ಇಷ್ಟಪಡುತ್ತಾರೆ. ನೋಡಲು ಮುದ್ದು ಮುದ್ದಾಗಿರುವ ಬೆಕ್ಕುಗಳು, ಅವುಗಳ ತರ್ಲೆ ತುಂಟಾಟಗಳಿಂದ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಇನ್ನೂ ಬೆಕ್ಕುಗಳ ತರ್ಲೆ, ತುಂಟಾಟಗಳ ವೀಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅಂತಹ ವೀಡಿಯೋಗಳು ನಮ್ಮ ಮುಖದಲ್ಲಿ ನಗು ಮೂಡಿಸುತ್ತದೆ. ಇದೇ ರೀತಿ ಇಲ್ಲೊಂದು ತರ್ಲೆ ಬೆಕ್ಕು ಕಿಟಕಿಯಿಂದ ಮನೆಯ ಒಳಗೆ ಬರಲು ಭಾರಿ ಕಸರತ್ತು ನಡೆಸುತ್ತದೆ. ಬೆಕ್ಕಿನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೊಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

@TheFigen_ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅದಕ್ಕೆ ‘ಬೆಕ್ಕುಗಳು ಜಗತ್ತನ್ನು ಆಳುತ್ತವೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಬೆಕ್ಕು ಮನೆಯ ಒಳಗೆ ಬರಲು ಬುದ್ಧಿವಂತಿಕೆಯಿಂದ ಕಿಟಕಿ ಬಾಗಿಲನ್ನು ತೆರೆಯುವುದನ್ನು ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:Viral Video : ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ

ಶ್ವೇತವರ್ಣದ ಮುದ್ದಾದ ಬೆಕ್ಕೊಂದು ಕಿಟಕಿಯಿಂದ ಮೆಲ್ಲಗೆ ಮನೆಯ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತದೆ. ಆದರೆ ಕಿಟಕಿ ಬಾಗಿಲ ಮುಚ್ಚಿರುತ್ತದೆ. ಕಿಟಕಿ ಬಾಗಿಲು ಮುಚ್ಚಿದರೇನು, ನನಗೆ ಬಾಗಿಲನ್ನು ತೆರದು ಬರಲು ಅಸಾಧ್ಯವೇ ಎಂದು ಹೇಳುತ್ತಾ ಕಿಟಕಿಯ ಬಾಗಿಲು ತೆರೆಯಲು ಬೆಕ್ಕು ತನ್ನ ಕಸರತ್ತು ಶುರು ಮಾಡೇ ಬಿಟ್ಟಿತು. ತನ್ನ ನಾಲ್ಕು ಪುಟ್ಟ ಕಾಳುಗಳನ್ನು ಉಪಯೋಗಿಸಿಕೊಂಡು, ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡು ಕಿಟಕಿ ಬಾಗಿಲನ್ನು ಸರಿಸಲು ಪ್ರಯತ್ನಿಸುತ್ತದೆ. ಕೊನೆಗೂ ಪ್ರಯತ್ನದಲ್ಲಿ ಜಯಗಳಿಸಿ, ಕಿಟಕಿ ಬಾಗಿಲನ್ನು ಸರಿಸಿ ಮನೆಯ ಒಳಗೆ ಗರ್ವದಿಂದ ಬಂದೇ ಬಿಟ್ಟಿತು ಬೆಕ್ಕು. ಬೆಕ್ಕಿನ ಕಸರತ್ತಿನ ಈ ವೀಡಿಯೋ ನೋಡಗರನ್ನು ನಗುವಂತೆ ಮಾಡಿದೆ.

ಟ್ವಿಟರ್​​​ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 264.6 ಸಾವಿರ ವೀಕ್ಷಣೆಗಳನ್ನು ಮತ್ತು 2.6 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಅನೇಕರು ಕಮೆಂಟ್ಸ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ತುಂಬಾ ಚಾಲಾಕಿ ಬೆಕ್ಕು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ಬೆಕ್ಕು ಖಂಡಿತವಾಗಿಯೂ ಪ್ರಶಸ್ತಿಗೆ ಅರ್ಹ’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಹೌದು, ಬೆಕ್ಕುಗಳು ನಿಜವಾಗಿಯೂ ಜಗತ್ತನ್ನು ಆಳುತ್ತವೆ’ ಎಂದು ಕಮೆಂಟ್ಸ್ ಮಾಡಿದ್ದಾರೆ.

Published On - 4:23 pm, Fri, 2 June 23