Viral Photo: ಯಾರೋ ಕೊಟ್ಟ ಶಿಕ್ಷೆಯಲ್ಲ, ಶಾಪವೂ ಅಲ್ಲ 1973ರಲ್ಲಿ ಮೇಲಕ್ಕೆತ್ತಿದ್ದ ಕೈಯನ್ನು ಇಲ್ಲಿಯವರೆಗೂ ಇಳಿಸದ ಬಾಬಾ
ನಿಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರು ಕೊಡುತ್ತಿದ್ದ ಶಿಕ್ಷೆ ನೆನಪಿದೆಯೇ, ಒಂದೋ ಒಂಟಿ ಕಾಲಲ್ಲಿ ನಿಲ್ಲಬೇಕು, ಇಲ್ಲವೂ ಎರಡೂ ಕೈಗಳನ್ನು ಮೇಲಕ್ಕೆತ್ತಿ ನಿಲ್ಲಬೇಕು, ಅಥವಾ ಕಪ್ಪೆಯ ರೀತಿ ಕುಳಿತು ಕಾಲುಗಳ ಸಂಧಿಯಿಂದ ಕೈಯನ್ನು ತಂದು ಕಿವಿಯನ್ನು ಹಿಡಿದುಕೊಳ್ಳಬೇಕು.
ನಿಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರು ಕೊಡುತ್ತಿದ್ದ ಶಿಕ್ಷೆ ನೆನಪಿದೆಯೇ, ಒಂದೋ ಒಂಟಿ ಕಾಲಲ್ಲಿ ನಿಲ್ಲಬೇಕು, ಇಲ್ಲವೂ ಎರಡೂ ಕೈಗಳನ್ನು ಮೇಲಕ್ಕೆತ್ತಿ ನಿಲ್ಲಬೇಕು, ಅಥವಾ ಕಪ್ಪೆಯ ರೀತಿ ಕುಳಿತು ಕಾಲುಗಳ ಸಂಧಿಯಿಂದ ಕೈಯನ್ನು ತಂದು ಕಿವಿಯನ್ನು ಹಿಡಿದುಕೊಳ್ಳಬೇಕು. ಇದ್ಯಾವುದೇ ಶಿಕ್ಷೆ ನೀಡಿದರೂ ನಮಗೆ 5 ನಿಮಿಷಕ್ಕಿಂತ ಹೆಚ್ಚು ಕಾಲ ಯಾವುದನ್ನು ಮಾಡಲಾಗುತ್ತಿರಲಿಲ್ಲ. ಆದರೆ ಈ ವ್ಯಕ್ತಿಯೊಬ್ಬ ಕಳೆದ 40 ವರ್ಷಗಳಿಂದ ಮೇಲಕ್ಕೆತ್ತಿದ ಕೈಯನ್ನು ಕೆಳಗಿಳಿಸಿಯೇ ಇಲ್ಲ. ಇದು ಯಾರೋ ಅವರಿಗೆ ನೀಡಿರುವ ಸಜೆಯಲ್ಲ. ವಾಸ್ತವವಾಗಿ, ಈ ಬಾಬಾ ಅವರ ಹೆಸರು ಅಮರ್ ಭಾರತಿ ಎಂದು ಹೇಳಲಾಗುತ್ತಿದೆ. ಬಾಬಾ 1973 ರಿಂದ ಕೈ ಎತ್ತುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. ಅವರ ಈ ಹೆಜ್ಜೆಯನ್ನು ಭಗವಾನ್ ಶಿವ ಶಂಕರ ಶಿವನಿಗೆ ಸಮರ್ಪಿಸಲಾಗಿದೆ.
ಅಷ್ಟೇ ಅಲ್ಲ, ಜಾಗತಿಕ ಸೌಹಾರ್ದತೆಯನ್ನು ಕಾಪಾಡುವ ಧ್ಯೇಯ ಎಂದೂ ಕರೆಯುತ್ತಾರೆ. ಅಮರ್ ಭಾರತಿ ಅತ್ಯಂತ ಜನಪ್ರಿಯ ಸನ್ಯಾಸಿಯಾಗಿದ್ದು, ಕುಂಭಮೇಳ ಸೇರಿದಂತೆ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಮತ್ತಷ್ಟು ಓದಿ: Weird Wedding Tradition: ಮದುವೆಯಲ್ಲಿ ಮಗಳ ಎದೆಯ ಮೇಲೆ ಉಗುಳುವ ತಂದೆ, ವಧುದಕ್ಷಿಣೆ ನೀಡುವ ವರ ಹೀಗೊಂದು ವಿಚಿತ್ರ ಸಂಪ್ರದಾಯ
ಈ ಚಿತ್ರವನ್ನು ನೋಡಿದರೆ ಬಾಬಾರವರ ಕೈ ಎತ್ತುವ ಹಿಂದಿರುವ ಹೆಜ್ಜೆ ಎಷ್ಟು ಜಟಿಲವಾಗಿದೆ ಎಂಬುದನ್ನು ನೀವು ಊಹಿಸಬಹುದು. ಕಳೆದ 40 ವರ್ಷಗಳಿಂದ ಗಾಳಿಯಲ್ಲಿ ಇರುವುದರಿಂದ ಕೈಯ ಸ್ಥಿತಿ ತುಂಬಾ ಹದಗೆಟ್ಟಿದೆ. ಕೈಗಳ ಸಡಿಲವಾಗಿದೆ, ಕೈಯಲ್ಲಿ ರಕ್ತ ಸಂಚಾರವೇ ಇರದೆ ಸಣಕಲಾಗಿದೆ. ಬೆರಳುಗಳಲ್ಲಿ ಶಕ್ತಿಯೇ ಇಲ್ಲ, ಉಗುರುಗಳು ತುಂಬಾ ಉದ್ದ ಬೆಳೆದಿವೆ.
Amar Bharati, a Hindu Sadhu, elevated his right hand in 1973 and has steadfastly kept it raised ever since. This act is regarded by him as a manifestation of his devotion to Lord Shiva and a symbol of his mission to foster global harmony. Amar Bharati is a renowned sadhu who… pic.twitter.com/u6wn7qdjP3
— Historic Vids (@historyinmemes) May 27, 2023
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋ ಬಾಬಾ ಅಮರ್ ಭಾರತಿ ಮಾಡಿದ್ದನ್ನು ಯಾರೂ ಮಾಡಲು ಸಾಧ್ಯವಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಬಾಬಾರವರ ಭಾವಚಿತ್ರವನ್ನು ನೋಡಿ ಎಲ್ಲರೂ ಅವರಿಗೆ ನಮಸ್ಕರಿಸುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಖಾತೆಯ ಹೆಸರು ಐತಿಹಾಸಿಕ ವೇದಿಕ್.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ