Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ

|

Updated on: Sep 07, 2023 | 10:27 AM

Art Tutorial: ಅಂತರ್ಜಾಲದಲ್ಲಿ ಸಾಕಷ್ಟು ತ್ರೀಡಿ ಚಿತ್ರಗಳನ್ನು ನೋಡುತ್ತೀರಿ. ಅವು ಹುಟ್ಟಿಸುವ ಭ್ರಮೆ ಕಂಡು ಅಚ್ಚರಿಗೆ ಒಳಗಾಗುತ್ತೀರಿ. ಕಲಾವಿದರು ಇದನ್ನು ಹೇಗೆ ಚಿತ್ರಿಸುತ್ತಾರೆ? ಇದಕ್ಕಾಗಿ ಯಾವ ತಂತ್ರಗಳನ್ನು ಬಳಸುತ್ತಾರೆ? ಒಟ್ಟಾರೆಯಾಗಿ ಈ ಚಿತ್ರ ರೂಪುಗೊಳ್ಳುವ ಬಗೆಯಾದರೂ ಹೇಗೆ? ಎಂದು ಯೋಚಿಸುತ್ತೀರಿ. ಒಮ್ಮೊಮ್ಮೆ ನಿಮಗೂ ಇಂಥ ಚಿತ್ರಗಳನ್ನು ಚಿತ್ರಿಸಬೇಕು ಎನ್ನುವ ಆಸೆಯುಂಟಾಗುತ್ತದೆ ಅಲ್ಲವೆ?

Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ
ಕಲಾವಿದ ಮೋಹಿತ ಕಶ್ಯಪ
Follow us on

Indian Artists: ಸಾಮಾಜಿಕ ಜಾಲತಾಣಗಳಿಂದ ಹರಿದುಬರುತ್ತಿರುವ ಮಾಹಿತಿಯ ಸಾಗರದಲ್ಲಿ ಏನೆಲ್ಲಾ ಹುದುಗಿಲ್ಲ ಕೇಳಿ. ಯಾರಿಗೆ ಏನೇ ಆಸಕ್ತಿ ಇದ್ದರೂ ಅದಕ್ಕೆ ಸಂಬಂಧಿಸಿದ್ದನ್ನು ಸದಾಕಾಲ ನೋಡಬಹುದಾಗಿದೆ, ಕಲಿಯಬಹುದಾಗಿದೆ ಮತ್ತು ಪ್ರತಿಭೆಯ ಅನಾವರಣಗೊಳಿಸಬಹುದಾಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಕಲಾವಿದ ಮೋಹಿತ ಕಶ್ಯಪ ತ್ರೀಡಿ ಕಲೆಯ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ತ್ರೀಡಿ ಎಂದರೆ ಒಂದರ್ಥದಲ್ಲಿ ಭ್ರಮಾತ್ಮಕ ಚಿತ್ರ (Optical Illusion). ಇದನ್ನು ರಚಿಸುವ ತಂತ್ರದಲ್ಲಿ ಜಾಣ್ಮೆ ಅಡಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆರಗಾಗುತ್ತಿದ್ದಾರೆ.

ಇದನ್ನೂ ಓದಿ : Viral Video: ಹೈದರಾಬಾದ; ಜಲಾವೃತಗೊಂಡಿದ್ದ ಚರಂಡಿಯನ್ನು ಸ್ವಚ್ಛಗೊಳಿಸಿದ ಮಹಿಳಾ ಪೊಲೀಸ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 28ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 6 ಮಿಲಿಯನ್​ ಜನರು ನೋಡಿದ್ದಾರೆ. 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಮೋಹಿತ ಕೌಶಲವನ್ನು ಮೆಚ್ಚಿ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ಆರ್ಟ್ ಕ್ಲಾಸ್ ತುಂಬಾ ಚೆನ್ನಾಗಿದೆ. ಆಸಕ್ತಿ ಇರುವ ಯಾರೂ ಈ ವಿಡಿಯೋ ನೋಡಿ ಕಲಿಯಬಹುದಾಗಿದೆ ಎಂದಿದ್ದಾರೆ ಅನೇಕರು.

ಇದು ಮೋಹಿತ ಕಶ್ಯಪ ತ್ರೀಡಿ ಕ್ಲಾಸ್

ಈತನಕ ನನಗೆ ಇಂತ ಭ್ರಮೆಯನ್ನು ಸೃಷ್ಟಿಸಲು ಸಾಧ್ಯವೇ ಆಗಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಈ ತ್ರೀಡಿ ಕಲಾಕೃತಿಗಳನ್ನು ನೋಡುತ್ತಿದ್ದೆ. ಆದರೆ ಹೇಗೆ ಚಿತ್ರಿಸುವುದು ಎಂದು ಗೊತ್ತಿರಲಿಲ್ಲ. ಈ ವಿಡಿಯೋದಲ್ಲಿ ಅತ್ಯಂತ ಸರಳವಾಗಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ, ಕಲಾವಿದರೆ ಧನ್ಯವಾದ ಎಂದಿದ್ದಾರೆ ಇನ್ನೊಬ್ಬರು. ನನ್ನ ಮಕ್ಕಳಿಗೂ ಈ ವಿಡಿಯೋ ತೋರಿಸಿದೆ, ಅವರೂ ಇದನ್ನು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ ಒಂದಿಷ್ಟು ಜನ. ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಮೋಹಿತ ಕಲಾಗೌರವ ಅರ್ಪಿಸಿದ ವಿಡಿಯೋ ಕೂಡ ಇಲ್ಲಿದೆ.

ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋಗೆ ಮೋಹಿತಗೌರವ

ಕಲೆ ಇರುವುದು ಬಚ್ಚಿಟ್ಟುಕೊಳ್ಳುವುದಕ್ಕಲ್ಲ. ಅದನ್ನು ನಾಲ್ಕು ಜನರೆದುರು ಪ್ರದರ್ಶಿಸಬೇಕು ಮತ್ತು ಆಸಕ್ತರಿಗೆ ಕಲಿಸಬೇಕು. ಅಂದಾಗಲೇ ಆ ಕಲೆಯೂ ಕಲಾವಿದನೂ ಒಟ್ಟೊಟ್ಟಿಗೇ ಬೆಳೆಯುವುದು. ಕಲೆಯಲ್ಲಿ ಅಭಿರುಚಿ ಇದ್ದ ಮನುಷ್ಯ ಶ್ರಮವನ್ನು ನೆಚ್ಚಿಕೊಂಡಿರುತ್ತಾನೆ. ಆತನಲ್ಲಿ ಸದಾ ಚೈತನ್ಯ ಪ್ರವಹಿಸುತ್ತಿರುತ್ತದೆ. ಕತ್ತಲೆಯೊಳಗಿದ್ದೇ ಬೆಳಕಿನ ಹುಡುಕಾಟ ಸಾಗುತ್ತಿರುತ್ತದೆ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ