Belly Dance: ತಮ್ಮತಮ್ಮ ಸಾಕುಪ್ರಾಣಿಗಳಿಗೆಂದೇ ಸಾಮಾಜಿಕ ಜಾಲತಾಣಗಳಲ್ಲಿ ಪುಟಗಳನ್ನು ಸೃಷ್ಟಿಸಿ ದಿನವೂ ಅವುಗಳ ಚಟುವಟಿಕೆಗಳನ್ನು ಅಪ್ಡೇಟ್ ಮಾಡುತ್ತಿರುವವರು ಕೋಟ್ಯಂತರ ಜನರಿದ್ದಾರೆ. ಪ್ರಾಣಿಗಳ ಸಾಹಸಮಯ, ಸೃಜನಶೀಲ, ತುಂಟಾಟ ಮತ್ತು ಆಪ್ತಭಾವದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತ ತಾವು ಅವುಗಳಿಗಾಗಿಯೇ ಬದುಕುತ್ತಿದ್ದೇವೇನೋ, ಆ ಮೂಲಕವೇ ತಮ್ಮ ಅಸ್ತಿತ್ವೇನೋ ಎಂಬಷ್ಟು ತೀವ್ರವಾಗಿ ಬದುಕುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ, ತಿಳಿಹಸಿರು ಉಣ್ಣೆಯ ಸ್ಕರ್ಟ್ ಧರಿಸಿ ಅಲಂಕರಿಸಿಕೊಂಡಿರುವ ಈ ಬೆಕ್ಕು (Cat) ನೆಟ್ಟಿಗರನ್ನು ಬಹುವಾಗಿ ಸೆಳೆಯುತ್ತಿದೆ. ನೃತ್ಯಪ್ರಿಯರು ಮತ್ತು ಬೆಕ್ಕುಪ್ರಿಯರು ಈ ಪೋಸ್ಟಿನಡಿ ಜಮಾಯಿಸಿದ್ದಾರೆ.
ಇದನ್ನೂ ಓದಿ : Viral Video: ಬೆಯಾನ್ಸ್ ಸಂಗೀತ ಕಛೇರಿಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆನೋವು; ಹೆಣ್ಣುಮಗು ಜನನ
ಜು. 25ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈತನಕ ಸುಮಾರು 4.8 ಲಕ್ಷ ಜನರು ಲೈಕ್ ಮಾಡಿದ್ದಾರೆ. 15 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ಮುದ್ದಾಗಿದೆ ಎಂದು ಅನೇಕರು ಹೇಳಿದ್ದಾರೆ. ಇದಕ್ಕೆ ಹೀಗೆ ಡ್ಯಾನ್ಸ್ ಕಲಿಸಿದವರು ಯಾರು? ಹೇಗೆ ಕಲಿಸಿದರು? ಎಂದು ಕೆಲವರು ಕೇಳಿದ್ದಾರೆ.
ನಿಮ್ಮ ಮೋಜಿಗಾಗಿ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂದು ಕೆಲವರು ವಾದಿಸಿದ್ಧಾರೆ. ಇದು ಪ್ರಾಣಿಹಿಂಸೆ, ದಯವಿಟ್ಟು ಇಂಥ ವಿಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ ಎಂದು ಕೆಲವರು ಒತ್ತಾಯಿಸಿದ್ದಾರೆ. ಇನ್ನುಳಿದವರು ಇದು ಬಹಳ ಮುದ್ದಾದ ಬೆಕ್ಕು, ಬಹಳ ಛಂದ ನೃತ್ಯ ಮಾಡಿದೆ ಎಂದಿದ್ದಾರೆ. ಈಗಲೇ ಈ ಬೆಕ್ಕು ನನಗೆ ಬೇಕು ಎಂದು ಹೇಳಿದ್ಧಾರೆ.
ಇದನ್ನೂ ಓದಿ : Viral Video: ಆಕೆ ಪ್ರಕಾಶಮಾನವಾಗಿ ಕಂಗೊಳಿಸಬೇಕು; ವಧುವಿಗೆ ಎಲ್ಇಡಿ ಲೆಹೆಂಗಾ ವಿನ್ಯಾಸ ಮಾಡಿದ ವರ
ಇದು ಜೀವ, ಆಟಿಕೆಯ ವಸ್ತುವಲ್ಲ ಎಂದಿದ್ದಾರೆ ಒಬ್ಬರು. ಅದು ನಿಮ್ಮ ಮಗು, ಅದರ ಮನಸಿನ ವಿರುದ್ಧ ವರ್ತಿಸಬೇಡಿ, ಇಲ್ಲವಾದರೆ ಒಂದು ದಿನ ಅದು ಮನೆಬಿಟ್ಟು ಓಡಿಹೋಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ಅದು ಹೀಗೆ ಡ್ಯಾನ್ಸ್ ಮಾಡಬೇಕೆಂದರೆ ಅದಕ್ಕೆ ಏನೇಲ್ಲ ಭಕ್ಷೀಸು ಕೊಟ್ಟಿದ್ದೀರಿ ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ಬೆಕ್ಕು ಸರ್ಕಸ್ ಕಂಪೆನಿಯಲ್ಲಿಲ್ಲ, ಮನೆಯಲ್ಲಿ ನಿಮ್ಮ ಮಕ್ಕಳಂತೆ ಇದೆ, ಬಿಟ್ಟುಬಿಡಿ ಅದನ್ನು ಅದರಪಾಡಿಗೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ