Kitchen Hacks : ಒಂದೊಂದು ಹಣ್ಣು ತಿನ್ನುವಾಗಲೂ ಅದರ ಸ್ವಾದವನ್ನು ಅನುಭವಿಸುತ್ತ ಪ್ರಕೃತಿಯ ಈ ಕೊಡುಗೆಯ ಬಗ್ಗೆ ಅಚ್ಚರಿ ಪಡುತ್ತಿರುತ್ತೇವಲ್ಲ? ಆಯಾ ಬಣ್ಣ, ಆಯಾ ರುಚಿ, ಪೋಷಕಾಂಶ… ಹೀಗೆ ಯೋಚಿಸುತ್ತಾ ಹೋದರೆ ಅದ್ಭುತವಲ್ಲದೆ ಇನ್ನೇನು ಎನ್ನಿಸತೊಡಗುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೇಕ್ ಮಾಡುವುದು ಬೇಕರಿ ತಿನಿಸುಗಳನ್ನು ಮಾಡುವಾಗ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಭೂಪ ದೊಡ್ಡ ಕಲ್ಲಂಗಡಿ (watermelon) ಹಣ್ಣನ್ನು ಇಡಿಯಾಗಿ ಎಣ್ಣೆಯಲ್ಲಿ ಕರೆದಿದ್ದಾನೆ!
????
ಇದನ್ನೂ ಓದಿwatermelon
sugar
frywatermelon
sugar
fry?????? pic.twitter.com/cocMvR6zf4
— eric rivera (@ericriveracooks) June 1, 2023
ಸುಮಾರು 3 ನಿಮಿಷದ ಈ ವಿಡಿಯೋ ಮೂಲಕ ಈ ಮನುಷ್ಯ ಜಗತ್ತಿಗೆ ಏನನ್ನು ತಿಳಿಯಪಡಿಸಲು ಹೊರಟಿದ್ದಾನೆ? ಇವನ ಈ ಪಾಕಪ್ರಯೋಗ ಎಷ್ಟು ಅನಾರೋಗ್ಯಕರ ಮತ್ತು ಅಪಾಯಕಾರಿಯಿಂದ ಕೂಡಿದೆ. ಬೇಸಿಗೆಯ ಹಣ್ಣುಗಳನ್ನು ಹೀಗೆ ಕೊತಕೊತ ಕುದಿಯುವ ಎಣ್ಣೆಯಲ್ಲಿ ಇಡಿಯಾಗಿ ಕರಿದು ತಿನ್ನುತ್ತಾನಲ್ಲ! ಇವನಿಗೆ ಏನು ಹೇಳುವುದು?
ಇದನ್ನೂ ಓದಿ : Viral Video: ಇದನ್ನು ಆಸ್ಕರ್ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ
ಹೀಗೆ ಎಣ್ಣೆಯಲ್ಲಿ ಕರಿಯುವುದರಿಂದ ಹಣ್ಣು ಗರಿಗರಿಯಾಗುತ್ತದೆ ಎಂದು ಬೇರೆ ಹೇಳಿದ್ದಾನೆ ಈತ. ಗರಿಗರಿ ಹೋಗಲಿ ಆದರೆ ಅವನು ದೊಡ್ಡ ಕಲ್ಲಂಗಡಿಯನ್ನು ಅಷ್ಟೊಂದು ಎಣ್ಣೆಯಲ್ಲಿ ಕರಿಯುವುದನ್ನು ನೋಡುವುದಕ್ಕೆ ಭಯವಾಗುತ್ತಿತ್ತು. ನೆಟ್ಟಿಗರಂತೂ ರೊಚ್ಚಿಗೆದ್ದು ಇವನ ತಲೆಯನ್ನು ಕಲ್ಲಂಗಡಿ ಹಣ್ಣಿನಿಂದ ಒಡೆಯಬೇಕು ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್ ಎಲ್ಲಿ ಹೋಗೋಣ?
ಬೇಸಿಗೆಯಲ್ಲಿ ಹಣ್ಣು ತಿನ್ನುವುದೇ ಹೊಟ್ಟೆ ತಂಪಗಿರಲೆಂದು. ಆದರೆ ಇವ ಇಷ್ಟು ದೊಡ್ಡ ಹಣ್ಣನ್ನು ಕರಿದು ತಿನ್ನುತ್ತಿದ್ದಾನೆಂದರೆ ಖಂಡಿತ ಇವನಿಗೆ ಹುಚ್ಚು ಹಿಡಿದಿದೆ. ನಾನು ನನ್ನ ಮೂರು ನಿಮಿಷವನ್ನು ಹಾಳು ಮಾಡಿಕೊಂಡೆ. ಇಷ್ಟು ದಿನ ನೋಡಿದ ಕಿಚನ್ ಹ್ಯಾಕ್ ವಿಡಿಯೋಗಳಲ್ಲಿ ಇದು ಅತ್ಯಂತ ಅಪಾಯಕಾರಿ ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ದಾರೆ. ನೀವೇನಂತೀರಿ?
(ವಿ. ಸೂ : ನೀವಂತೂ ಇಂಥ ಪ್ರಯೋಗಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ. ಇದು ಅತ್ಯಂತ ಅಪಾಯಕಾರಿ)
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:25 pm, Sat, 3 June 23