ಮದುವೆಯಲ್ಲಿ ಹೂಮಾಲೆ ಬದಲಾಯಿಸಲು ಬಿದಿರಿನ ಕೋಲು ಬಳಸಿದ ದಂಪತಿ; ವೈರಲ್​ ಆಯ್ತು ವಿಡಿಯೋ

ಮದುವೆ ಸಮಾರಂಭಗಳಿಗೆ ಅವಶ್ಯವಿರುವ ಜನರಷ್ಟೇ ಕೂಡಿ ಸಮಾರಂಭ ನಡೆಸುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಇಲ್ಲೋರ್ವರು ವಿವಾಹವನ್ನು ಆಚರಿಸಲು ವಿಶಿಷ್ಟವಾದ ಅಲೋಚನೆಗಳೊಂದಿಗೆ ಬಂದಿದ್ದಾರೆ.

ಮದುವೆಯಲ್ಲಿ ಹೂಮಾಲೆ ಬದಲಾಯಿಸಲು ಬಿದಿರಿನ ಕೋಲು ಬಳಸಿದ ದಂಪತಿ; ವೈರಲ್​ ಆಯ್ತು ವಿಡಿಯೋ
ವೈರಲ್​ ಆಯ್ತು ವಿಡಿಯೋ
Edited By:

Updated on: May 06, 2021 | 8:17 AM

ಕೊರೊನಾ ಎರಡನೇ ಅಲೆ ದೇಶದೆಲ್ಲೆಡೆ ವ್ಯಾಪಿಸುತ್ತಿದೆ. ಹೀಗಿರುವಾಗ ಮದುವೆ ಸಮಾರಂಭಗಳಿಗೆ ಅವಶ್ಯವಿರುವ ಜನರಷ್ಟೇ ಕೂಡಿ ಸಮಾರಂಭ ನಡೆಸುವ ಪರಿಸ್ಥಿತಿ ಎದುರಾಗಿದೆ. ಇಲ್ಲೋರ್ವರು ವಿವಾಹವನ್ನು ಆಚರಿಸಲು ವಿಶಿಷ್ಟವಾದ ಅಲೋಚನೆಗಳೊಂದಿಗೆ ಬಂದಿದ್ದಾರೆ. ವಿವಾಹದಲ್ಲಿ ಹೂವಿನ ಹಾರ ಬದಲಾಯಿಸಿಕೊಳ್ಳುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಬಿದಿರಿನ ಕೋಲನ್ನು ಬಳಸಿ ದೂರದಲ್ಲಿಯೇ ಎದುರುಬದುರು ನಿಂತು ಹಾರ ಬದಲಾಯಿಸಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇನ್ನು ಕೆಲವೆಡೆ ವಿವಾಹದ ಸಂದರ್ಭದಲ್ಲಿ ಪಿಪಿಇ ಕಿಟ್​ಗಳನ್ನು ಧರಿಸಿಕೊಂಡು ವಿವಾಹವಾದ ಅದೆಷ್ಟೋ ವೈರಲ್​ ವಿಡಿಯೋಗಳನ್ನು ನೋಡಿದ್ದೇವೆ. ಅದೇ ರೀತಿ ಹೂವಿನ ಹಾರ ಬದಲಾಯಿಸಿಕೊಳ್ಳುವ ಈ ವಿಡಿಯೋ ನೆಟ್ಟಿಗರ ಮಾತಿಗೆ ಕಾರಣವಾಗಿದೆ. ವರ ಹಾಗೂ ಮಧು ಇಬ್ಬರೂ ಸುರಕ್ಷತೆಗಾಗಿ ಮಾಸ್ಕ್​ ಧರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಬಿಹಾರದ ಬೆಗುಸಾರೈ ಮೂಲದ ದಂಪತಿಗಳು ಪರಸ್ಪರ ಹೂಮಾಲೆಯನ್ನು ಬಿದಿರಿನ ಕೋಲಿನ ಮೂಲಕ ಬದಲಾಯಿಸಿಕೊಳ್ಳುವುದನ್ನು ನೋಡಬಹುದು. ಈ ವಿಡಿಯೋವೊಂದನ್ನು ಛತ್ತೀಸ್​ಗಡದ ಹೆಚ್ಚುವರಿ ಸಾರಿಗೆ ಆಯುಕ್ತ ದೀಪಂಶು ಕಬ್ರಾ ಅವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ವಿಡಿಯೋ ನೋಡಿ ಹಾಸ್ಯ ಅಂದುಕೊಂಡರೆ, ಇನ್ನು ಕೆಲವರು ಸಾಂಕ್ರಾಮಿಕ ಸಮಯದಲ್ಲಿ ವಿವಾಹವನ್ನು ನಿಗದಿಪಡಿಸುವುದು ಅಗತ್ಯವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡು ವೈದ್ಯರನ್ನು ಅಪ್ಪಿಕೊಂಡ 75ವರ್ಷದ ವೃದ್ಧೆಯ ಫೋಟೋ ವೈರಲ್

Published On - 8:16 am, Thu, 6 May 21