ಈ ಪ್ರಪಂಚವು ಹಲವಾರು ರಹಸ್ಯಗಳಿಂದ ತುಂಬಿದೆ. ಅದರಲ್ಲಿ ಒಂದು ದೊಡ್ಡ ರಹಸ್ಯವೆಂದರೆ ಸಾವು. ಸಾವು ಯಾವಾಗ ಸಂಭವಿಸುತ್ತದೆ ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಯಾರು ಯಾವಾಗ, ಯಾವ ದಿನ ಸಾಯುತ್ತಾರೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಈ ವಿಷಯ ಇನ್ನೂ ನಿಗೂಢವಾಗಿದೆ. ಹೀಗಿದ್ದರೂ ಸಾವಿಗೆ ಸಂಬಂಧಿಸಿದ ರಹಸ್ಯಗಳನ್ನು ತಿಳಿದುಕೊಳ್ಳಲು ಜನರು ಹೆಚ್ಚು ಉತ್ಸುಹಕರಾಗಿರುತ್ತಾರೆ. ನಿರ್ಧಿಷ್ಟವಾಗಿ ಯಾವ ದಿನದಂದು ಜನರು ಸಾವನ್ನಪ್ಪುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಬ್ರಿಟನ್ನಲ್ಲಿ ನಡೆದ ಸಂಶೋಧನೆಯೊಂದು ಬ್ರಿಟನ್ ದೇಶದಲ್ಲಿ ಡಿಸೆಂಬರ್ 30 ರಿಂದ ಜನವರಿ 9 ರ ನಡುವೆ ಅತೀ ಹೆಚ್ಚು ಜನರು ಸಾವನ್ನಪ್ಪುತ್ತಾರೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.
ಬ್ರಿಟನ್ನಲ್ಲಿ ನಡೆದ ಇತ್ತೀಚಿನ ಅಧ್ಯಯನವು ನಿರ್ಧಿಷ್ಟವಾಗಿ ಯಾವ ದಿನದಂದು ಅತೀ ಹೆಚ್ಚು ಸಾವುಗಳು ಸಂಭವಿಸುತ್ತದೆ ಎಂಬುದನ್ನು ಬಹಿರಂಗ ಪಡಿಸಿದೆ. ʼಆಫ್ಟರ್ ಲೈಫ್ ಸರ್ವೀಸ್ ಸೈಟ್ ಬಿಯಾಂಡ್ʼ ಅಧ್ಯಯನದ ಪ್ರಕಾರ, ಬ್ರಿಟನ್ನಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸುವ ದಿನವೆಂದರೆ ಜನವರಿ 6 ನೇ ತಾರೀಕು. ಅಲ್ಲದೆ ಕ್ರಿಸ್ಮಸ್ ನಂತರದ ಸಮಯವು ಅಂದರೆ ಡಿಸೆಂಬರ್ 30 ರಿಂದ ಜನವರಿ 9 ರ ನಡುವಿನ ದಿನಗಳು ಸಾವಿಗೆ ಸಂಬಂಧಿಸಿದ ದೃಷ್ಟಿಕೋನದಿಂದ ಅತ್ಯಂತ ಅಪಾಯಕಾರಿ ದಿನಗಳೆಂದು ಈ ಅಧ್ಯಯನ ಹೇಳಿದೆ.
ಈ ಸಂಶೋಧನೆಯ ಪ್ರಕಾರ 2005 ರಿಂದ ಬ್ರಿಟನ್ನಲ್ಲಿ ಪ್ರತಿದಿನ 1387 ಸಾವುಗಳು ಸಂಭವಿಸುತ್ತಿವೆ. ಆದರೆ ಇಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಜನವರಿ 6 ರಂದು ಮಾತ್ರ 1732 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಬ್ರಿಟನ್ನಲ್ಲಿ ಡಿಸೆಂಬರ್ 30 ರಿಂದ ಜನವರಿ 9 ರ ನಡುವಿನ ದಿನಗಳನ್ನು ಸಾವಿನ ದೃಷ್ಟಿಕೋನದಿಂದ ಅತ್ಯಂತ ಅಪಾಯಕಾರಿ ದಿನಗಳೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಬಾಬಿ ಇನ್ನಿಲ್ಲ
ಅಷ್ಟಕ್ಕೂ ಈ ನಿರ್ಧಿಷ್ಟ ದಿನದಂದು ಅತೀ ಹೆಚ್ಚು ಸಾವುಗಳು ಏಕೆ ಸಂಭವಿಸುತ್ತದೆ ಎಂಬುದನ್ನು ನೋಡುವುದಾದರೆ, ಈ ಅವಧಿಯಲ್ಲಿನ ಸಾವುಗಳಿಗೆ ತೀವ್ರ ಶೀತ ವಾತಾವರಣ ಕಾರಣವಾಗಿದೆ. ಬ್ರಿಟನ್ನಲ್ಲಿ ಡಿಸೆಂಬರ್ ತಿಂಗಳಿಂದ ಜನವರಿ ವರೆಗೆ ಹೆಚ್ಚು ಚಳಿ ಇರುತ್ತದೆ. ಈ ಶೀತ ವಾತವರಣದ ಕಾರಣದಿಂದಾಗಿ ಜನರ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಇದರಿಂದಾಗಿ ಜನರು ಸುಲಭವಾಗಿ ರೋಗಗಳ ಸಂಪರ್ಕಕ್ಕೆ ಬರುತ್ತಾರೆ. ಇದರಿಂದಾಗಿ ಈ ದಿನದಂದು ಹೆಚ್ಚು ಸಾವುಗಳು ಸಂಭವಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ನಲ್ಲಿ ಜುಲೈ 30 ರಂದು ಅತೀ ಕಡಿಮೆ ಸಾವುಗಳು ಸಂಭವಿಸುತ್ತದೆ. ಏಕೆಂದರೆ ಆಗ ವಾತವರಣ ಬಿಸಿಯಾಗಿರುತ್ತದೆ ಎಂಬುದನ್ನು ಕೂಡಾ ಈ ಅಧ್ಯಯನ ಹೇಳಿದೆ. ಆದರೂ ಕೆಲವು ಸಂಶೋಧಕರು ಬೇಸಿಗೆಯಲ್ಲಿ ಸಾವಿನ ಸಂಖ್ಯೆ ಚಳಿಗಾಲಕ್ಕಿಂತ ಹೆಚ್ಚು ಎಂದು ನಂಬುತ್ತಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: