Viral Video : ನೀವೆಲ್ಲರೂ ಇನ್ನೂ ಹೊಸ ವರ್ಷದ ಆಚರಣೆಯ ಗುಂಗಿನಲ್ಲಿಯೇ ಇದ್ದೀರಿ. ಯಾರೆಲ್ಲ ಹೇಗೆ ಆಚರಿಸಿದರು ಎನ್ನುವತ್ತಲೇ ನಿಮ್ಮ ಮಾತುಕಥೆಗಳು ಸಾಗುತ್ತಿವೆ. ಪರಸ್ಪರರ ವಿಡಿಯೋಗಳನ್ನು ನೋಡುತ್ತಿದ್ದೀರಿ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ವಾಸಿಸುತ್ತಿರುವ ಈ ಕೋಟಾ ಬುಡಕಟ್ಟು ಜನಾಂಗದವರು ಹೊಸ ವರ್ಷವನ್ನು ಹೇಗೆ ಬರಮಾಡಿಕೊಂಡಿದ್ದಾರೆಂದು.
Beautiful Nilgiri hills reverberate with traditional music & dance of Kota tribals as they celebrate their local festival.Kotas are ancient inhabitants of Nilgiris.Their striking white attire gives a surreal feel & the graceful dance transports us to another world❤️#HappyNewYear pic.twitter.com/FF4wYlfixK
ಇದನ್ನೂ ಓದಿ— Supriya Sahu IAS (@supriyasahuias) December 31, 2022
ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ಹೊಸ ವರ್ಷವನ್ನು ಇವರು ಸ್ವಾಗತಿಸಿದ್ಧಾರೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಈ ವಿಡಿಯೋ ಅನ್ನು ಡಿಸೆಂಬರ್ 31 ರಂದು ಟ್ವೀಟ್ ಮಾಡಿದ್ದಾರೆ. ಬುಡುಕಟ್ಟು ಜನರು ಜಾನಪದದ ಹಿಮ್ಮೇಳದೊಂದಿಗೆ ದುಂಡುಗಟ್ಟಿದ್ದಾರೆ. ನಟ್ಟನಡುವೆ ಬೆಂಕಿ ಹಚ್ಚಿ ಸುತ್ತಲೂ ಬಿಳೀ ಬಟ್ಟೆಯಲ್ಲಿ ಅತ್ಯಂತ ಲಯಬದ್ಧವಾಗಿ ಕುಣಿದಿದ್ದಾರೆ.
ಇದನ್ನೂ ನೋಡಿ : ಪಾತರಗಿತ್ತಿ ಪಕ್ಕಾ ನಿನ್ ಹಿಡಿಯಾಕ್ ಬಂದಾರಕ್ಕಾ, ಪೆಂಗ್ವಿನಪ್ಪಾ ಪೆಂಗ್ವಿನವ್ವಾ
ಸಂಭ್ರಮಕ್ಕೊಂದು ನೆಪ. ಆಗಾಗ ಹೀಗೆ ನೆಪಗಳನ್ನು ಹುಡುಕಿಕೊಂಡು ಒಂದಿಷ್ಟು ಕುಣಿದು ಹಾಡಿ ನಲಿದರೆ ಖುಷಿ ನಮಗೇ ತಾನೆ ದಕ್ಕುವುದು? ಮತ್ತೆ ಇನ್ನೂ ಯಾಕೆ ತಡ? ಸಾಂಪ್ರದಾಯಿಕ ನೃತ್ಯ ಕಲಿಯೋದಕ್ಕೆ ಅಂತಾನಾದರೂ ಆಗಾಗ ಹೀಗೆ ಬುಡಕಟ್ಟು ಜನರಿರುವ ತಾಣಕ್ಕೆ ಭೇಟಿ ಕೊಡಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:58 pm, Mon, 2 January 23