ಭೂಮಿ ಅನೇಕ ಜೀವ ವೈವಿಧ್ಯಗಳ ಆವಸ ಸ್ಥಾನ. ಮನುಷ್ಯನ ಅರಿವಿಗೆ ಬರದ ಎಷ್ಟೀ ಜೀವಿಗಳು ಇಲ್ಲಿವೆ. ಬಹುಶಃ ಅದೇ ಕಾರಣಕ್ಕೆ ಈಗಲೂ ಹೊಸ ಹೊಸ ತಳಿಯನ್ನು ನಾವು ಗುರುತಿಸುತ್ತಿದ್ದೇವೆ. ಇಲ್ಲಿ ಪ್ರತೀ ಜೀವಿಗಳ ರಚನೆ ಬಹಳ ವಿಶಿಷ್ಟವಾದುದು. ಇಲ್ಲಿ ಬದುಕುವುದಕ್ಕೆ ಪೂರಕವಾಗಿ ಅವುಗಳು ವಿನ್ಯಾಸಗೊಂಡಿರುತ್ತವೆ. ಅಂಥವುಗಳಲ್ಲಿ ವಿಷಕಾರಿ ರಚನೆಯನ್ನು ಹೊಂದಿದ ಜೀವಿಗಳೂ ಇವೆ. ಬಹಳಷ್ಟು ಸಂದರ್ಭಗಳಲ್ಲಿ ಇವುಗಳು ಮನುಷ್ಯನ ಸಂಪರ್ಕಕ್ಕೆ ಬರುವುದೇ ಇಲ್ಲ. ಬಹಳ ಅಪರೂಪದ ಸಂದರ್ಭಗಳಲ್ಲಿ ಮನುಷ್ಯ ಇವುಗಳಿಗೆ ಎದುರುಗೊಳ್ಳಬಹುದು. ಹಾವು- ಚೇಳುಗಳ ಹೊರತಾಗಿ ಬಹಳಷ್ಟು ವಿಷಕಾರಿ ಜೀವಿಗಳು ಭೂಮಿಯಲ್ಲಿವೆ. ಅವುಗಳ ಬಣ್ಣ, ದೇಹ ರಚನೆ ಸೇರಿದಂತೆ ಎಲ್ಲವೂ ವಿಶಿಷ್ಟವಾದುದ್ದು. ಇವುಗಳು ನೋಡಲು ಎಲ್ಲರನ್ನು ಸೆಳೆದರೂ ವಾಸ್ತವದಲ್ಲಿ ಹಾಗಿರುವುದಿಲ್ಲ. ಅಂತಹ ಕೆಲವು ವಿಷಕಾರಿ ಜೀವಿಗಳ ಪರಿಚಯ ಇಲ್ಲಿದೆ.
ಬಾಕ್ಸ್ ಜೆಲ್ಲಿ ಮೀನು: ಇದು ನೋಡಲು ಸುಂದರವಾಗಿದೆ, ಆದರೆ ಅಷ್ಟೇ ಅಪಾಯಕಾರಿ. ಬಾಕ್ಸ್ ಜೆಲ್ಲಿ ಮೀನು ವಿಶ್ವದ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ. ಇದರ ವಿಷವು ಏಕಕಾಲದಲ್ಲಿ 60 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಎನ್ನುತ್ತವೆ ಅಧ್ಯಯನಗಳು. ಇದರ ವಿಷವು ಮನುಷ್ಯನ ದೇಹವನ್ನು ಪ್ರವೇಶಿಸಿದರೆ ಒಂದು ನಿಮಿಷದಲ್ಲಿ ಸಾಯುವಷ್ಟು ತೀವ್ರತೆ ಹೊಂದಿದೆ.
ಬ್ಲೂ ರಿಂಗ್ಡ್ ಆಕ್ಟೋಪಸ್: ಪ್ರಪಂಚದಾದ್ಯಂತ 300 ಕ್ಕೂ ಹೆಚ್ಚು ಜಾತಿಯ ಆಕ್ಟೋಪಸ್ಗಳಿವೆ. ಆದರೆ ‘ಬ್ಲೂ ರಿಂಗ್ಡ್ ಆಕ್ಟೋಪಸ್’ ಇವೆಲ್ಲವುಗಳಲ್ಲಿ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿಯಾಗಿದೆ. ಇದು ಹೆಚ್ಚಾಗಿ ಹಿಂದೂ ಮಹಾಸಾಗರ ಮತ್ತು ಆಸ್ಟ್ರೇಲಿಯಾದ ಸಾಗರಗಳಲ್ಲಿ ಕಂಡುಬರುತ್ತದೆ. ಇದರ ವಿಷವು ಕೇವಲ 30 ಸೆಕೆಂಡುಗಳಲ್ಲಿ ಮನುಷ್ಯನ ಪ್ರಜ್ಞೆ ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಇದರ ವಿಷವು ಏಕಕಾಲದಲ್ಲಿ 25 ಜನರನ್ನು ಕೊಲ್ಲುವಷ್ಟು ತೀವ್ರವಾಗಿದೆ.
ಫನಲ್ ವೆಬ್ ಸ್ಪೈಡರ್: ಆಸ್ಟ್ರೇಲಿಯಾದಲ್ಲಿ ಕಂಡುಬಂದ ಈ ಫನಲ್ ವೆಬ್ ಸ್ಪೈಡರ್ ವಿಷಕಾರಿ ಜೇಡವೆಂದು ಖ್ಯಾತವಾಗಿದೆ. ಇದು ಕಚ್ಚುವ ಪ್ರಮಾಣ ಕೇವಲ ಶೇ 10ರಿಂದ 15 ಪ್ರತಿಶತ ಎಂದು ವರದಿಗಳು ಹೇಳುತ್ತವೆ. ಆದರೆ ಕಚ್ಚಿದರೆ ಇವು ಅಪಾಯಕಾರಿ. ಕಚ್ಚಿಸಿಕೊಂಡ ವ್ಯಕ್ತಿ 15 ನಿಮಿಷದಿಂದ 3 ದಿನಗಳಲ್ಲಿ ಮರಣಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನುತ್ತವೆ ಅಧ್ಯಯನಗಳು.
ಕೋನ್ ಬಸವನಹುಳು: ಇದು ತುಂಬಾ ಅಪಾಯಕಾರಿ ಬಸವನಹುಳು. ಜಗತ್ತಿನಲ್ಲಿ 600 ಕ್ಕೂ ಹೆಚ್ಚು ಜಾತಿಯ ಬಸವನಗಳಿದ್ದರೂ, ಕೋನ್ ಬಸವನ ಹುಳವು ವಿಷಕಾರಿಯಾಗಿದೆ. ಇದರಿಂದ ಕಚ್ಚಿಸಿಕೊಂಡರೆ ಪಾರ್ಶ್ವವಾಯುವಿಗೆ ತುತ್ತಾಗಬಹುದು ಎನ್ನುತ್ತವೆ ಅಧ್ಯಯನಗಳು.
ಭಾರತೀಯ ಕೆಂಪು ಚೇಳು: ಚೇಳುಗಳಲ್ಲಿ ಅತ್ಯಂತ ವಿಷಕಾರಿ. ಭಾರತದಲ್ಲಿ ಕಂಡುಬರುವ ಇದನ್ನು ಭಾರತೀಯ ಕೆಂಪು ಚೇಳು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಲ್ಲೂ ಈ ಜಾತಿಯ ಚೇಳು ಕಂಡುಬರುತ್ತವೆ. ಕಚ್ಚಿದ ನಂತರ ಚಿಕಿತ್ಸೆ ನೀಡದಿದ್ದರೆ, ವ್ಯಕ್ತಿಯು 72 ಗಂಟೆಗಳ ಒಳಗೆ ಸಾಯುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ:
ಶರ್ಟ್ ಬಟನ್ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್ ಸಹಾಯ; ವಿಡಿಯೋ ವೈರಲ್