AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಾಜಕುಮಾರನ ಗೆಟಪ್​ನಲ್ಲಿ ಬಂದ ವರ ಕುದುರೆ ಮೇಲೆ ಏರಲ್ಲ ಅಂದ: ಅಸಲಿ ಕಾರಣವೇ ಬೇರೆಯಿತ್ತು..!

Trending News: ಸಾಮಾನ್ಯವಾಗಿ ವೀರನಂತೆ ಕಾಣಲು ರಾಜರ ಗೆಟಪ್ ಜೊತೆ ಕುದುರೆಯಲ್ಲಿ ಮೆರವಣಿಗೆ ಮಾಡಿಸುವುದು ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟ್ರೆಂಡ್.

Viral Video: ರಾಜಕುಮಾರನ ಗೆಟಪ್​ನಲ್ಲಿ ಬಂದ ವರ ಕುದುರೆ ಮೇಲೆ ಏರಲ್ಲ ಅಂದ: ಅಸಲಿ ಕಾರಣವೇ ಬೇರೆಯಿತ್ತು..!
ವೈರಲ್ ಸುದ್ದಿ
TV9 Web
| Updated By: ಝಾಹಿರ್ ಯೂಸುಫ್|

Updated on:Dec 26, 2021 | 10:06 PM

Share

ಮದುವೆ ಮನೆಯಲ್ಲಿ ನಡೆಯುವ ಕೆಲ ಹಾಸ್ಯ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ವಿಡಿಯೋ ಮೂಲಕ ಹೊರಬರುತ್ತಿವೆ. ಅದರಲ್ಲೂ ಸೋಷಿಯಲ್ ಮೀಡಿಯಾ ಯುಗದಲ್ಲಿ ಮದುವೆ ಮನೆಯ ಹಲವು ತಮಾಷೆಯ ವಿಡಿಯೋಗಳನ್ನು ನೀವು ಕೂಡ ನೋಡಿರುತ್ತೀರಿ. ಆದರೆ ಇಲ್ಲೊಬ್ಬರು ಹಂಚಿಕೊಂಡಿರುವ ವಿಡಿಯೋ ನೋಡಿ ನಗಬೇಕೋ ಬೇಡ್ವೊ ಎಂದು ನೀವೇ ನಿರ್ಧರಿಸಿಕೊಳ್ಳಿ. ಏಕೆಂದರೆ ಇಲ್ಲಿ ವರನಿಗೆ ಪ್ರಾಣ ಸಂಕಟವಾದರೆ, ವಿಡಿಯೋ ನೋಡಿದವರಿಗೆ ಚೆಲ್ಲಾಟ.

ಹೌದು, ಮದುವೆಯ ದಿನ ವಧು ಅಥವಾ ವರನ ಬಗ್ಗೆ ಎಲ್ಲರೂ ತುಂಬಾ ಕಾಳಜಿವಹಿಸುತ್ತಾರೆ. ಅದರಲ್ಲೂ ಮದುವೆ ಗಂಡು ಅಥವಾ ಹೆಣ್ಣು ಯಾವ ಗೆಟಪ್​ನಲ್ಲಿರಬೇಕೆಂದು ಬಹಳ ದಿನಗಳ ಮುಂಚಿತವಾಗಿ ಕುಟುಂಬಸ್ಥರು ನಿರ್ಧರಿಸುತ್ತಾರೆ. ಅದರಲ್ಲೂ ಗಂಡಿನ ಕಡೆಯವರು ಸಾಮಾನ್ಯವಾಗಿ ವೀರನಂತೆ ಕಾಣಲು ರಾಜರ ಗೆಟಪ್ ಜೊತೆ ಕುದುರೆಯಲ್ಲಿ ಮೆರವಣಿಗೆ ಮಾಡಿಸುವುದು ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಟ್ರೆಂಡ್. ಆದರೆ ವರನು ಕುದುರೆ ಹತ್ತುವಾಗ ಪ್ಯಾಂಟ್ ಹರಿದು ಹೋದರೆ…ಆತನ ಪರಿಸ್ಥಿತಿ ಏನಾಗಬೇಡ..?

ಇಲ್ಲಿ ಆಗಿರುವುದು ಕೂಡ ಅದೇ. ವರನು ಕುದುರೆ ಹತ್ತುವಾಗ ಪ್ಯಾಂಟ್ ಹರಿದು ಹೋಗಿದೆ. ಇತ್ತ ಕುಟುಂಬಸ್ಥರು ಕುದುರೆ ಮೇಲೇರಲು ಸೂಚಿಸುತ್ತಿದ್ದಾರೆ. ಆದರೆ ಅತ್ತ ರಾಜಕುಮಾರನ ಗೆಟಪ್​ನಲ್ಲಿರುವ ವರ ಮಾತ್ರ ಬಿಲ್ಕುಲ್ ಒಪ್ಪುತ್ತಿಲ್ಲ. ಇದಾಗ್ಯೂ ಕುಟುಂಬದವರು ಬಿಡಬೇಕಲ್ವಾ. ಮತ್ತೆ ಮತ್ತೆ ಒತ್ತಾಯ ಮಾಡಿದಾಗ, ಅತ್ತ ವರನ ಸಹನೆಯ ಕಟ್ಟೆ ಹೊಡೆದಿದೆ. ಅಷ್ಟೇ ಅಲ್ಲದೆ ಸಿಟ್ಟಿನಿಂದ ನನ್ನ ಪ್ಯಾಂಟ್ ಹರಿದಿದೆ ಎಂದು ತನ್ನ ಕೋಪವನ್ನು ಹೊರಹಾಕಿದ್ದಾನೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಆತನ ಪರಿಸ್ಥಿತಿ ನೋಡಿ ಮರುಗಿದರೆ, ಇನ್ನು ಕೆಲವರು ವರನ ಅವಸ್ಥೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಗೆಟಪ್ ಯಾವುದೇ ಇದ್ದರೂ, ಸ್ಟಿಚ್ ಸ್ಟ್ರಾಂಗ್​ ಆಗಿರಬೇಕು ಎಂದು ಕಮೆಂಟಿಸಿ ಕಿಚಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಜಕುಮಾರನ ಗೆಟಪ್​ನಲ್ಲಿ ಕಾಣಿಸಿಕೊಂಡ ವರ ಇದೀಗ ವೈರಲ್ ಆಗಿದ್ದಾನೆ. ಆದರೆ ಗೆಟಪ್​ನ ಕಾರಣದಿಂದಲ್ಲ ಎಂಬುದಷ್ಟೇ ಇಲ್ಲಿ ವ್ಯತ್ಯಾಸ.

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

Published On - 10:05 pm, Sun, 26 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ