ಮನುಕುಲ ಕಂಡ ಅತ್ಯಂತ ಕರಾಳ ಯುದ್ಧ ಅಂದ್ರೆ ಅದು 2 ನೇ ಮಹಾಯುದ್ಧ. 1939 ರಿಂದ 1945 ರ ವರೆಗೆ ನಡೆದ ಈ ಯುದ್ಧದಲ್ಲಿ ಅದೆಷ್ಟೋ ಸಾವು ನೋವುಗಳು ಸಂಭವಿಸಿದೆ. ಈ ಯುದ್ಧದ ಇತಿಹಾಸ ಪುಟಗಳನ್ನು ತೆರೆದು ನೋಡಿದರೆ ಅದರ ರೋಚಕ, ರಕ್ತಸಿಕ್ತ ಕಥೆಗಳು ಇಂದಿಗೂ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಇಂತಹ ಭೀಕರ ಯುದ್ಧದಲ್ಲಿ ಪೋಲೆಂಡ್ ಸೈನಿಕರ ಸಹಾಯಕ್ಕಾಗಿ ನಿಷ್ಠಾವಂತ ಕರಡಿಯೊಂದು ಕೂಡಾ ಯುದ್ಧದಲ್ಲಿ ಭಾಗವಹಿಸಿದಂತಹ ನೈಜ್ಯ ಕಥೆಯ ಬಗ್ಗೆ ನಿಮಗೆ ಗೊತ್ತಾ? ಹಾಗಿದ್ರೆ ಈ ಸೈನಿಕ ಕರಡಿಯ ಇಂಟರಿಸ್ಟಿಂಗ್ ಸ್ಟೋರಿಯ ಬಗ್ಗೆ ತಿಳಿದುಕೊಳ್ಳಿ.
ಪೋಲೆಂಡ್ ಸೈನಿಕರು 1941 ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಆಕ್ರಮನದ ನಂತರ ಇರಾನ್ ಬೆಟ್ಟಗಳ ಮೂಲಕ ಇನ್ನೊಂದು ದೇಶಕ್ಕೆ ಹಾದು ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿ ಒಬ್ಬ ಹುಡುಗ ಆ ಸೈನಿಕರ ಕಣ್ಣಿಗೆ ಬೀಳುತ್ತಾನೆ. ಆತನ ಕೈಯಲ್ಲಿ ಒಂದು ಪುಟ್ಟ ಕರಡಿ ಮರಿಯೂ ಕೂಡಾ ಇರುವುದು ಈ ಸೈನಿಕರ ಗಮನಕ್ಕೆ ಬರುತ್ತದೆ. ಈ ಕರಡಿ ಮರಿಯ ತಾಯಿಯನ್ನು ಯಾರೋ ಒಬ್ಬ ಬೇಟೆಗಾರ ಶೂಟ್ ಮಾಡಿ ಕೊಂದು ಹಾಕಿದ್ದಾನೆ, ಪಾಪ ಈ ಮರಿ ಅನಾಥವಾಗಿದೆ ಎಂದು ಪುಟ್ಟ ಬಾಲಕ ಸೈನಿಕರ ಬಳಿ ಹೇಳಿಕೊಳ್ಳುತ್ತಾನೆ. ನೋಡಲು ತುಂಬಾನೇ ದುರ್ಬಲವಾಗಿದ್ದ ಈ ಕರಡಿಯನ್ನು ಕಂಡು ಪಾಪ ಈ ಮುಗ್ಧ ಪ್ರಾಣಿಯನ್ನು ಅನಾಥನನ್ನಾಗಿ ಮಾಡುವುದು ಬೇಡ ಎಂದು ಸೈನಿಕರು ಅದನ್ನು ತಮ್ಮೊಂದಿಗೆ ಕರ್ಕೊಂಡು ಹೋಗ್ತಾರೆ.
ಹೀಗೆ ತಮ್ಮ ಜೊತೆ ಕರೆದುಕೊಂಡು ಬಂದ ಕರಡಿಗೆ ಹೊಟ್ಟೆ ತುಂಬಾ ಊಟ, ಹಾಲು ಕೊಟ್ಟು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಜೊತೆಗೆ ಈ ಕರಡಿಗೆ “ವೋಜೆಕ್ಟ್ʼ ಎಂಬ ಹೆಸರನ್ನು ಕೂಡಾ ಇಟ್ಟಿದ್ದರು. ಕರಡಿಯೂ ಅಷ್ಟೇ ಸೈನಿಕರನ್ನು ತನ್ನ ಬಂಧು ಬಳಗ ಎನ್ನುವಂತೆ ಅವರ ಜೊತೆ ಬಲು ಪ್ರೀತಿಯಿಂದ ನಡೆದುಕೊಳ್ಳುತ್ತಿತ್ತು. ಹೀಗೆ ಸೈನಿಕರಿಗೆ ತುಂಬಾನೇ ಹತ್ತಿರವಾದ ವೋಜೆಕ್ಟ್ ಸೈನಿಕರಿಗೆ ತಮ್ಮ ದಿನನಿತ್ಯದ ಕಾರ್ಯಗಳಿಗೆ ಸಹಾಯ ಮಾಡುತ್ತಿತ್ತು. ಅವರ ಜೊತೆಯಲ್ಲಿಯೇ ಟೆಂಟ್ ಅಲ್ಲಿ ಮಲಗುತ್ತಿತ್ತು. ಅಷ್ಟೇ ಅಲ್ಲದೇ ಈ ಕರಡಿ ಸೈನಿಕರೊಂದಿಗೆ ಸೇರಿ ಶರಾಬು ಕುಡಿಯುತ್ತಿತ್ತು. ಬೀಯರ್ ಸಿಗರೇಟ್ ಅಂದರೆ ಈ ಕರಡಿಗೆ ಬಲು ಇಷ್ಟವಾಗಿತ್ತು. ಈ ವಿಚಾರವನ್ನು ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಪೋಲಿಷ್ ಸೈನಿಕ ವೊಜ್ಸಿಕ್ ನರೆಬ್ಸ್ಕಿ ಬಿಬಿಸಿ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ.
ತುಂಬಾ ಶಾಂತಿಯುತ ಮತ್ತು ಸ್ನೇಹಜೀವಿಯಾಗಿದ್ದ ವೋಜೆಕ್ಟ್ ತಮ್ಮ ದೇಶ ಮತ್ತು ಕುಟುಂಬದಿಂದ ದೂರವಿದ್ದ ಸೈನಿಕರ ಮನೋಬಲವನ್ನು ಹೆಚ್ಚಿಸುವ ಹಾಗೂ ಪ್ರೀತಿ ಹಂಚುವ ಕಾರ್ಯವನ್ನು ಮಾಡುತ್ತಿತ್ತು. ಸೈನಿಕರನ್ನು ಅಪ್ಪಿಕೊಂಡು ಅವರೊಂದಿಗೆ ದಿನವಿಡೀ ಆಟವಾಡುವ ಮೂಲಕ ಅವರುಗಳ ನೋವು, ದುಃಖವನ್ನು ಕಡಿಮೆ ಮಾಡುತ್ತಿತ್ತು.
1/ I’d like to tell you an #WW2 story close to my family’s heart. That of an incredible bear that was adopted by Polish soldiers in the Middle East and accompanied them during the war through Italy.
His name was Wojtek.THREADhttps://t.co/UD3eBtskVE pic.twitter.com/q6Ndg204SL
— Janek Lasocki (@JanekLasocki) May 10, 2020
ಹೀಗೆ ಸೈನಿಕರ ಜೊತೆಗೆ ಆತ್ಮೀಯವಾಗಿದ್ದ ವೋಜ್ಟೆಕ್ ಕರಡಿಯನ್ನೂ 22 ನೇ ಫಿರಂಗಿ ಸರಬರಾಜು ಕಂಪೆನಿಗೆ ಸೈನಿಕನಾಗಿ ಸೇರ್ಪಡೆ ಮಾಡಲಾಯಿತು. 1943 ರಲ್ಲಿ ಯುದ್ಧಕ್ಕಾಗಿ ಇಟಲಿಗೆ ತೆರಳಬೇಕಾದರೆ ಈ ಕರಡಿಯನ್ನು ಕೂಡಾ ಸೈನಿಕರು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋದರು. ಇದು ಸೈನ್ಯದಲ್ಲಿ ಆಯುಧಗಳನ್ನೆಲ್ಲಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಕೆಲಸ ಮಾಡುತ್ತಿತ್ತು. ಹೀಗೆ ವೋಜ್ಟೆಕ್ ಕರಡಿ ಇರಾಕ್, ಸಿರಿಯಾ, ಸ್ಕಾಟ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಪೋಲಿಷ್ ಸೈನ್ಯದ ಜೊತೆ ಯುದ್ಧದಲ್ಲಿ ಭಾಗವಹಿಸಿತ್ತು. ಆ ಸಮಯದಲ್ಲಿ ಈ ಕರಡಿ “ಸೋಲ್ಜರ್ ಬೀರ್” ಎಂದೇ ಖ್ಯಾತಿಯನ್ನು ಪಡೆದಿತ್ತು.
ಇದನ್ನೂ ಓದಿ: ಬಡವರ ಮಕ್ಕಳು ಬೆಳೆಯಲು ನೀವು ಬೀಡುವುದಿಲ್ಲ, ಫೇಮಸ್ ವಡಾಪಾವ್ ಹುಡುಗಿಗೆ ಅಧಿಕಾರಿಗಳ ಕಾಟ
1945 ಎರಡನೇ ಮಹಾಯುದ್ಧ ಮುಗಿದ ನಂತರ ಈ ಕರಡಿಯನ್ನು ಸ್ಕಾಟ್ಲೆಂಡ್ ನ ಎಡಿನ್ಬರ್ಗ್ ಮೃಗಾಲಯಕ್ಕೆ ಕಳುಹಿಸಲಾಯಿತು. ನಂತರ ಪೋಲಿಷ್ ಸೈನಿಕರು ಕೂಡಾ ವೋಕ್ಟೆಕ್ ನನ್ನು ಕಾಣಲು ಆಗೊಮ್ಮೆ ಈಗೊಮ್ಮೆ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಹೀಗೆ ತನ್ನ ಕೊನೆಯ 16 ವರ್ಷಗಳನ್ನು ಮೃಗಾಲಯದಲ್ಲಿಯೇ ಕಳೆದ ವೋಜ್ಟೆಕ್ 1965 ರಲ್ಲಿ ತನ್ನ 21 ನೇ ವಯಸ್ಸಿನಲ್ಲಿ ಸಾವನನ್ನಪ್ಪಿತು.
ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ವೋಜ್ಟೆಕ್ ಕರಡಿಯ ಗೌರವಾರ್ಥವಾಗಿ ಸ್ಕಾಟ್ಲೆಂಡ್ ಮತ್ತು ಪೋಲೆಂಡ್ ದೇಶದಲ್ಲಿ ಈ ಕರಡಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ 2011 ರಲ್ಲಿ ಈ ಧೀರ ಕರಡಿಯ ಕುರಿತ “ವೋಕ್ಟೆಕ್-ದಿ ಬೀರ್ ದಟ್ ವಾಂಟೆಡ್ ಟು ವಾರ್ʼ ಎಂಬ ಸಾಕ್ಷ್ಯ ಚಿತ್ರವನ್ನು ಕೂಡಾ ಮಾಡಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Fri, 15 March 24