Viral Video: ಬಡವರ ಮಕ್ಕಳು ಬೆಳೆಯಲು ನೀವು ಬೀಡುವುದಿಲ್ಲ, ಫೇಮಸ್ ವಡಾಪಾವ್ ಹುಡುಗಿಗೆ ಅಧಿಕಾರಿಗಳ ಕಾಟ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2024 | 4:16 PM

Delhi Vada Pav Girl: ಕೆಲ ದಿನಗಳಿಂದ ದೆಹಲಿಯ ʼವಡಾ ಪಾವ್ ಹುಡುಗಿʼ  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಇವರ ಸ್ಟಾಲ್ ತೆರವು ಗೊಳಿಸಲು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮುಂದಾಗಿದೆ. ಹೃದ್ರೋಗದ ನಡುವೆಯೂ ಕಠಿಣ ಪರಿಶ್ರಮದ ಮೂಲಕವೇ ಮೇಲೆ ಬಂದಿರುವ ಈ  ವಡಾ ಪಾವ್ ಹುಡುಗಿ ಯಾರು? ಈ ಕುರಿತ ಸ್ಟೋರಿ  ಇಲ್ಲಿದೆ.   

Viral Video: ಬಡವರ ಮಕ್ಕಳು ಬೆಳೆಯಲು ನೀವು ಬೀಡುವುದಿಲ್ಲ, ಫೇಮಸ್ ವಡಾಪಾವ್ ಹುಡುಗಿಗೆ ಅಧಿಕಾರಿಗಳ ಕಾಟ
Follow us on

ಈಗೀಗ ಜನರು ದೊಡ್ಡ ದೊಡ್ಡ ಹೋಟೇಲ್ ರೆಸ್ಟೋರೆಂಟ್ ಗಳಿಗೆ ಹೋಗುವ ಬದಲು  ಬೀದಿ ಬದಿಯ ಅಂಗಡಿಗಳಿಗೆ ಹೋಗಿ ಆಹಾರವನ್ನು ಸವಿಯುತ್ತಾರೆ.  ಹೌದು ಇಲ್ಲಿ ಕೈಗೆಟಕುವ ದರದಲ್ಲಿ ರುಚಿಕರವಾದ ಆಹಾರ ಸಿಗುತ್ತೆ ಎಂಬ ಕಾರಣದಿಂದ  ಹೆಚ್ಚಿನವರು ಪ್ರತಿನಿತ್ಯ ಇಂತಹ ಸ್ಥಳಗಳಲ್ಲಿಯೇ ಆಹಾರವನ್ನು ಸವಿಯಲು ಬರುತ್ತಿರುತ್ತಾರೆ.  ಹೀಗೆ ಕೈಗೆಟಕುವ ದರದಲ್ಲಿ ರುಚಿಕರ ಆಹಾರವನ್ನು ಗ್ರಾಹಕರಿಗೆ ಉಣಬಡಿಸುತ್ತಿದ್ದ ಬೀದಿ ಬದಿ ವ್ಯಾಪಾರಿ ಕುಮಾರಿ ಆಂಟಿ ಎಂಬವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಇದೀಗ ಅವರಂತೆ ದೆಹಲಿಯ ʼವಡಪಾವ್ ಹುಡುಗಿʼ ಕೂಡಾ ಸೋಷಿಯಲ್ ಮೀಡಿಯಾದಲ್ಲಿ  ಭಾರಿ ಫೇಮಸ್ ಆಗಿದ್ದಾರೆ.

ಸಾಧಿಸಬೇಕೆಂಬ ಛಲದಿಂದ ದಿಟ್ಟ ಹೆಜ್ಜೆಯಿಟ್ಟು ದೆಹಲಿಯ ಪೀತಂಪುರದಲ್ಲಿ ಸಣ್ಣ ಸ್ಟಾಲ್ ಒಂದರಲ್ಲಿ ವಡಾ ಪಾವ್ ಮಾರಾಟ ಮಾರಾಟ ಮಾಡುವ ಉದ್ಯೋಗವನ್ನು ಆರಂಭಿಸಿದ  ಈ ಯುವತಿಯ ಹೆಸರು ಚಂದ್ರಿಕಾ ದೀಕ್ಷಿತ್ ಗೆರಾ. ಇತ್ತೀಚಿನ ದಿನಗಳಲ್ಲಿ   ಇವರು ಸರ್ವ್ ಮಾಡುವಂತಹ ರುಚಿ ರುಚಿಯಾದ ವಡಾ ಪಾವ್ ಸವಿಯಲು ದೂರದೂರುಗಳಿಂದಲೂ  ಜನರು ಬರುತ್ತಿದ್ದು, ಪ್ರತಿನಿತ್ಯ  ವಡಾ ಪಾವ್ ಸವಿಯಲು ಸ್ಟಾಲ್ ಮುಂದೆ ಜನ ಸಾಗರವೇ ನೆರೆಯುತ್ತದೆ. ಈಕೆಯ ಸ್ಟಾಲ್ ಗೆ ಸಂಬಂಧಪಟ್ಟ  ಒಂದಷ್ಟು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ.  ಇಷ್ಟೆಲ್ಲಾ ಫೇಮಸ್ ಆಗಿರುವ ಈಕೆಯ  ಸಣ್ಣ ಉದ್ಯಮವನ್ನು ತೆರವುಗೊಳಿಸಲು ಇದೀಗ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ಪೋಲೀಸರು ಮುಂದಾಗಿದ್ದಾರೆ. ಮುನ್ಸಿಪಲ್ ಕಾರ್ಪೋರೇಷನ್ ಗೆ 30,000 ರಿಂದ 35 ಸಾವಿರ ರೂಪಾಯಿ ಹಣವನ್ನು  ಪಾವತಿಸಿದರೂ ಕೂಡಾ ಅಲ್ಲಿನ ಅಧಿಕಾರಿಗಳು ಹಣದ ಆಸೆಗೆ ಮತ್ತೊಮ್ಮೆ ನನ್ನನ್ನು ಪೀಡಿಸುತ್ತಿದ್ದಾರೆ,  ಅಷ್ಟೇ ಅಲ್ಲದೆ ಸ್ಟಾಲ್ ಅನ್ನು ಎತ್ತಂಗಡಿ ಮಾಡಿಸುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದಾರೆ ಎಂದು  ತಮ್ಮ ಅಳಲನ್ನು ತೋಡಿಕೊಂಡ  ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೈರಲ್​​  ವಿಡಿಯೋ ಇಲ್ಲಿದೆ ನೋಡಿ:

ಹೃದ್ರೋಗದ ನಡೆಯುವೆಯೂ ಉದ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಛಲ ಈಕೆಯದ್ದು;

ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿರುವ ನಾನು ಆ ಆಘಾತದ  ನಂತರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದೇನೆ, ಆದರೆ ಸಾಧಿಸುವ ಹುಮ್ಮಸ್ಸು, ಛಲ ಎಂದಿಗೂ ಕಡಿಮೆಯಾಗಿಲ್ಲ  ಎಂದು ಅವರು ಹೇಳಿದ್ದಾರೆ.  ಹೀಗೆ ಮೊದಲಿನಿಂದಲೂ ಜೀವನದಲ್ಲಿ ಬರೀ ನೋವನ್ನೇ ಉಂಡಿರುವ ಚಂದ್ರಿಕಾ ತಮ್ಮ ಕಠಿಣ ಪರಿಶ್ರಮದ ಮೂಲಕವೇ ಯಶಸ್ಸನ್ನು ಪಡೆಯುತ್ತಿದ್ದಾರೆ. ಒಂದಷ್ಟು ವರ್ಷ ಹಲ್ದಿರಾಮ್ ಅಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಿಕಾ ಮಗನ ಕಾರಣದಿಂದಾಗಿ ಉದ್ಯೋಗವನ್ನು ಬಿಡಬೇಕಾಯಿತು.

ಇದನ್ನೂ ಓದಿ:  ಏಕಕಾಲದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾಗಲು ಈತ ಮಾಡಿದ ಪ್ಲಾನ್​​ ಏನು ಗೊತ್ತಾ?

ಅಡುಗೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಇವರು ಬಳಿಕ  ಪತಿಯ ಸಹಾಯದೊಂದಿಗೆ ದೆಹಲಿಯ ಪೀತಂಪುರದಲ್ಲಿ ವಡಾ ಪಾವ್ ಸ್ಟಾಲ್ ಒಂದನ್ನು ತೆರೆಯುತ್ತಾರೆ. ಈ ಸಣ್ಣ ಉದ್ಯಮವನ್ನು ನೆಲೆ ನಿಲ್ಲಿಸಲು ಚಂದ್ರಿಕಾ ಪಟ್ಟ ಪಾಡು ಅಷ್ಟಿಷ್ಟಲ್ಲ. ತಮ್ಮ ಧೈರ್ಯ ಮತ್ತು ಛಲದ  ಕಾರಣದಿಂದಲೇ ಅವರ ವಡಾ ಪಾವ್ ಶಾಪ್ ಇಂದು ಇಷ್ಟೆಲ್ಲಾ ಖ್ಯಾತಿ ಪಡೆದಿದೆ ಅಂತಾ ಹೇಳಬಹುದು. ಇದೀಗ  ದೆಹಲಿ ಮುನ್ಸಿಪಲ್ ಕಾರ್ಪೋರೇಷನ್  ಅವರ ಸ್ಟಾಲ್ ತೆರವು ಗೊಳಿಸಲು ಮುಂದಾಗಿದೆ. ಹೀಗಿದ್ದರೂ ಅವರ ಕನಸು ಕಮರಿ ಹೋಗಿಲ್ಲ.  ತಮ್ಮದೇ ಆದ ಸ್ವಂತ ಡಾಭಾ ಅಥವಾ ರೆಸ್ಟೋರೆಂಟ್  ಅನ್ನು ಆರಂಭಿಸುವ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ