ಆಸ್ಟ್ರೇಲಿಯಾದ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲು ಮ್ಯಾಚ್‌ನಲ್ಲಿ ಭಾರತದ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಇದಲ್ಲದೆ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ವಿರುದ್ಧ ಶತಕ ಸಿಡಿಸುವ ಮೂಲಕ ನಿನ್ನೆ ಇತಿಹಾಸವನ್ನೇ ಸೃಷ್ಟಿಸಿದ್ದರು. ಈ ವಿಶೇಷ ಸಂದರ್ಭದಲ್ಲಿಯೇ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಅವರು 2015 ರಲ್ಲಿ ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾ ಸಲುವಾಗಿ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ ಮಾಡಿದ್ದಂತಹ ಒಂದು ಮನವಿಯ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಕ್ರಿಕೆಟ್ ಕುರಿತ ಚರ್ಚೆಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರಿಗೆ ಸಂಬಂಧಿಸಿದ ಸ್ವಾರಸ್ಯಕರ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಅಂದು 2015 ರಲ್ಲಿ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡೇಟಿಂಡ್ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ನನ್ನ ಗರ್ಲ್‌ಫ್ರೆಂಡನ್ನು ಕೂಡಾ ಕರ್ಕೊಂಡು ಬರ್ಬೋದಾ ಎಂದು ರವಿ ಶಾಸ್ತ್ರಿ ಅವರ ಬಳಿ ಕೊಹ್ಲಿ ಕೇಳಿದ್ದರಂತೆ. ಆ ಸಮಯದಲ್ಲಿ ಬಿಸಿಸಿಐ ವಿದೇಶಿ ಪ್ರವಾಸಗಳಲ್ಲಿ ಕೇವಲ ಆಟಗಾರರ ಪತ್ನಿಯರು ಮಾತ್ರ ಬರಬಹುದು ಎಂಬ ರೂಲ್ಸ್ ತಂದಿತ್ತು. ಇದೇ ಕಾರಣಕ್ಕೆ ಕೊಹ್ಲಿ ರವಿಶಾಸ್ತ್ರಿಯವರ ಬಳಿ ಮನವಿ ಮಾಡಿದ್ದರಂತೆ. ನಂತರ ಅವರು ಬಿಸಿಸಿಐಗೆ ಕರೆ ಮಾಡಿ ಅನುಷ್ಕಾ ಶರ್ಮಾ ಕೂಡಾ ಬರುವಂತೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರಂತೆ.
ವೈರಲ್ ವಿಡಿಯೋ
“ only wives are allowed? can I bring my girlfriend? ”
Kohli the lover boy is unmatched 😂❤️pic.twitter.com/z6oJtz9S7w— Yashvi (@BreatheKohli) November 25, 2024
Breathekohli ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ 2015 ರಲ್ಲಿ ಕೊಹ್ಲಿ ಮಾಡಿದ್ದಂತಹ ಒಂದು ಮನವಿಯ ಸ್ವಾರಸ್ಯಕರ ಕಥೆಯನ್ನು ರವಿಶಾಸ್ತ್ರಿಯವರು ವಿವರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಇವರು ಕೋಚ್ ಆಗಿದ್ದಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ನನ್ನ ಗರ್ಲ್‌ಫ್ರೆಂಡ್ ಅನುಷ್ಕಾಳನ್ನು ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಬರಲೇ ಎಂದು ಕೇಳಿದ್ದಕ್ಕೆ ಬಿಸಿಸಿಐ ಜೊತೆ ಮಾತನಾಡಿ ಇದಕ್ಕೆ ಅನುಮತಿ ಮಾಡಿಕೊಟ್ಟಿದ್ದೆ. ಇಂದಿಗೂ ಕೊಹ್ಲಿಯ ದೊಡ್ಡ ಸಪೋರ್ಟ್ ಎಂದರೇ ಅನುಷ್ಕಾ ಶರ್ಮಾ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಲಿ ಘರ್ಜನೆ ಕೇಳಿ ಮರವೇರಿ ಕುಳಿತ ಫಾರೆಸ್ಟ್ ಗಾರ್ಡ್; ಮುಂದೇನಾಯ್ತು ನೋಡಿ…
ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ವಿಡಿಯೋ 67 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಸ್ವಾರಸ್ಯಕರ ಕಥೆಯನ್ನು ಕೇಳಿ ವಿರುಷ್ಕಾ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Mon, 25 November 24