Video: ತಾಯಿಯ ಧ್ವನಿ ಕೇಳುತ್ತಿದ್ದಂತೆ ಓಡೋಡಿ ಬಂದು ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ

ಮರಿಯಾನೆಗಳೇ ಹಾಗೆ ತಮ್ಮ ಆಟ ತುಂಟಾಟಗಳಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಈ ತುಂಟಾಟಗಳ ದೃಶ್ಯವನ್ನು ನೀವು ನೋಡಿರಬಹದು. ಆದರೆ ಇದು ತಾಯಿ ಹಾಗೂ ಮರಿಯಾನೆಯ ಪುನರ್ಮಿಲನದ ವಿಡಿಯೋ ಆಗಿದೆ. ದಾರಿ ತಪ್ಪಿದ ಪುಟಾಣಿ ಆನೆಯೊಂದು ತನ್ನ ತಾಯಿಯನ್ನು ಹುಡುಕುತ್ತ ಕೊನೆಗೂ ತನ್ನ ಅಮ್ಮನ ಮಡಿಲು ಸೇರಿದೆ. ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ತಾಯಿಯ ಧ್ವನಿ ಕೇಳುತ್ತಿದ್ದಂತೆ ಓಡೋಡಿ ಬಂದು ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Aug 17, 2025 | 10:45 AM

ತಾಯಿಯ ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಾಣಿಗಳು ತನ್ನ ಕಂದಮ್ಮಗಳಿಗೆ ನೀಡುವ ಪ್ರೀತಿಯೂ ಅಷ್ಟೇ. ಮಾತು ಬಾರದೆ ಇದ್ದರೂ ತನ್ನ ನಡೆಯಿಂದ ತಮ್ಮ ಮಕ್ಕಳನ್ನು ಮುದ್ದಿಸುತ್ತವೆ, ತಪ್ಪು ಮಾಡಿದರೆ ದಂಡಿಸುತ್ತವೆ. ಕೆಲವೊಮ್ಮೆ ಮರಿಯಾನೆಗಳು (baby elephant) ದಾರಿ ತಪ್ಪಿ ತಾಯಿಯಿಂದ ಬೇರ್ಪಟ್ಟು ಬೇರೆಲ್ಲೋ ಹೋಗುವುದಿದೆ. ಇದೀಗ ಇಂತಹದ್ದೇ ಪರಿಸ್ಥಿತಿ ಈ ಮರಿಯಾನೆಯದ್ದಾಗಿದೆ. ದಾರಿ ತಪ್ಪಿದ ಮರಿಯಾನೆಯೊಂದು ತನ್ನ ತಾಯಿಯನ್ನು ಕಂಡೊಡನೆ ಓಡೋಡಿ ಬಂದು ಕೊನೆಗೂ ಅಮ್ಮನ ಮಡಿಲು ಸೇರಿದೆ. ಈ ಭಾವನಾತ್ಮಕ ವಿಡಿಯೋವನ್ನು ಲೈಕ್ ಚೈಲರ್ಟ್ (Lek Chailert) ಅವರು ತಮ್ಮ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನಸ್ಸನ್ನು ತಟ್ಟಿದ ವಿಡಿಯೋ ಕಂಡ ಬಳಕೆದಾರರು ಕೊನೆಗೂ ಅಮ್ಮನ ಮಡಿಲು ಸೇರಿದ ಮರಿಯಾನೆಯನ್ನು ಕಂಡು ಖುಷಿ ಪಟ್ಟಿದ್ದಾರೆ.

ಸೇವ್ ಎಲಿಫೆಂಟ್ ಫೌಂಡೇಶನ್ ಸಂಸ್ಥಾಪಕ ಲೈಕ್ ಚೆಲರ್ಟ್ ತಾಯಾನೆ ಹಾಗೂ ಮರಿಯಾನೆಯ ಪುನರ್ಮಿಲನದ ವಿಡಿಯೋವನ್ನು ಹಂಚಿಕೊಂಡು ಆಗಿದ್ದೇನು ಎನ್ನುವುದನ್ನು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ನಾಮ್ ಥಿಪ್ ಎಂಬ ಮರಿಯಾನೆಯೂ ತನ್ನ ಹಿಂಡನ್ನು ಭೇಟಿ ಮಾಡಲು ಹೊಲಗಳಲ್ಲಿ ಅಲೆದಾಡುತ್ತಿದ್ದಳು. ಈ ವೇಳೆಯಲ್ಲಿ ದಾರಿ ತಪ್ಪಿದಳು. ಹೀಗಿರುವಾಗ ತಾಯಾನೆ ಮಲೈ ಥಾಂಗ್ ಚಿಂತಿತಳಾಗಿ ಕಂದನನ್ನು ಕರೆದಳು. ತನ್ನ ತಾಯಿಯ ಧ್ವನಿ ಕೇಳುತ್ತಿದ್ದಂತೆ ನಾಮ್ ಥಿಪ್  ಅಮ್ಮಾ ಕ್ಷಮಿಸಿ, ನಾನು ಬರುತ್ತಿದ್ದೇನೆ ಎಂದು ಜೋರಾಗಿ ಗೀಳಿಡುತ್ತಾ ಓಡೋಡಿ ಬಂದಳು. ನಾಮ್ ಥಿಪ್ ಈಗ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಕರವಾಗಿದೆ. ಜೀವನದಲ್ಲಿ ಆತ್ಮ ವಿಶ್ವಾಸ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ತಾಯಾನೆಯನ್ನೇ ಹಿಂಬಾಲಿಸುತ್ತಾ ರಸ್ತೆ ದಾಟಿದ ಮರಿಯಾನೆ
ನದಿಯಲ್ಲಿ ಫುಲ್​​​ ಎಂಜಾಯ್​​​ ಮೂಡನಲ್ಲಿ ಗಜಲಕ್ಷ್ಮೀ
ತಳ್ಳಾಟ, ತುಂಟಾಟದಲ್ಲಿ ಬ್ಯುಸಿ ಈ ಮರಿಯಾನೆಗಳು, ಈ ಕ್ಯೂಟ್ ದೃಶ್ಯ ನೋಡಿ
ಮಹಿಳೆಯ ಹಾಡಿಗೆ ಮನಸೋತ ಗಜರಾಜ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ತಾಯಿಯನ್ನು ಹಿಂಬಾಲಿಸಿ ರಸ್ತೆ ದಾಟಿದ ಮರಿಯಾನೆ

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು, ಇಂತಹ ಮುಗ್ಧ ಹಾಗೂ ಮುದ್ದಾದ ಪ್ರಾಣಿಗಳ ಭಾವನಾತ್ಮಕ ವಿಡಿಯೋ ಕಂಡಾಗ ನಮ್ಮ ಮನಸ್ಸು ಕರಗುತ್ತದೆ ಎಂದಿದ್ದಾರೆ. ಇನ್ನೊಬ್ಬರು ಈ ಮರಿಯಾನೆಯೂ ತಾಯಿಯತ್ತ ಓಡಿ ಬರುವ ರೀತಿಯೇ ಆಕೆಗೆ ಎಷ್ಟು ಖುಷಿಯಾಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ತಾಯಿ ಮಗುವಿನ ಪುನರ್ಮಿಲನದ ಕ್ಷಣ, ಎಷ್ಟು ಸುಂದರವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ