ಬೆಡ್​​ರೂಮ್​​ನಲ್ಲಿ ಪ್ರಿಯಕರನ ಜತೆ ಪತ್ನಿ ರೋಮ್ಯಾನ್ಸ್​​​, ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಕೊಂದ ಪತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 20, 2024 | 12:36 PM

ಪತ್ನಿಯೂ ಪತಿಯನ್ನು ತರಕಾರಿ ತರಲು ಮಾರುಕಟ್ಟೆಗೆ ಕಳುಹಿಸಿದ್ದಾಳೆ. ಆದರೆ ತನ್ನ ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನ ಬಂದ ಕಾರಣ ಪತಿಯು ಅರ್ಧ ದಾರಿಯಿಂದಲೇ ವಾಪಸ್ಸಾಗಿದ್ದಾನೆ. ಮನೆಗೆ ಬಂದ ಪತಿಗೆ ಪ್ರಿಯಕರನೊಂದಿಗೆ ಬೆಡ್ ರೂಮ್​​​ನಲ್ಲಿ ತನ್ನ ಪತ್ನಿಯು ಇರುವುದು ಗೊತ್ತಾಗಿದೆ. ಆ ಕೋಪದಲ್ಲಿಯೇ ಇಬ್ಬರನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆಯು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ನಡೆದಿದೆ.

ಬೆಡ್​​ರೂಮ್​​ನಲ್ಲಿ ಪ್ರಿಯಕರನ ಜತೆ ಪತ್ನಿ ರೋಮ್ಯಾನ್ಸ್​​​, ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಕೊಂದ ಪತಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಿನ ದಿನಗಳಲ್ಲಿ ವಿವಾಹೇತರ ಸಂಬಂಧಪಟ್ಟ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಹೌದು, ಈ ಅಕ್ರಮ ಸಂಬಂಧಗಳು ಸಂಸಾರವನ್ನೇ ಹಾಳು ಮಾಡುತ್ತಿದೆ. ಇಂತಹದೊಂದು ಘಟನೆಯು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಖತಿ ಬಾಬಾ ಕಾಲೋನಿಯಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿಯೇ ಇಬ್ಬರನ್ನು ಕೊಲೆ ಮಾಡಿದ್ದಾನೆ. ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದಿರುವುದಾಗಿ ಆರೋಪಿ ರವಿಯು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಖಾತಿ ಬಾಬಾ ಕಾಲೋನಿ ನಿವಾಸಿಯು ರವಿ ವಂಶಕರ್ ವೃತ್ತಿಯಲ್ಲಿ ಚಾಲಕನಾಗಿದ್ದನು. ಪತ್ನಿ ಪೂಜಾಳ ನಡವಳಿಕೆಯ ಬಗ್ಗೆ ಅನುಮಾನವಿದ್ದ ಕಾರಣ ಆಕೆಯ ಮೇಲೆ ಕಣ್ಣಿಟ್ಟಿದ್ದನು. ಹೀಗಿರುವಾಗ ಶುಕ್ರವಾರದಂದು ಆತನ ಪತ್ನಿ ಮಾರುಕಟ್ಟೆಯಿಂದ ತರಕಾರಿ ತರುವಂತೆ ಹೇಳಿದ್ದಾಳೆ. ಇತ್ತ ಪತ್ನಿಯು ಇಲ್ಲದ್ದನ್ನು ನೋಡಿ ಪೂಜಾ ತನ್ನ ಪ್ರಿಯಕರ ರವಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ.

ಆದರೆ ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಗಂಡನಿಗೆ ಪೂಜಾಳ ಮೇಲೆ ಅನುಮಾನವಿದ್ದ ಕಾರಣ ಅರ್ಧ ದಾರಿಯಿಂದಲೇ ಮನೆಗೆ ವಾಪಾಸ್ಸಾಗಿದ್ದಾನೆ. ಆದರೆ ಪತಿ ರವಿಯು ಮನೆಗೆ ಹಿಂದಿರುಗಿದಾಗ ಪೂಜಾಳು ಪ್ರಿಯಕರನ ಜೊತೆಗೆ ಕೋಣೆಯಲ್ಲಿರುವುದನ್ನು ಕಂಡಿದ್ದಾನೆ. ಇದನ್ನು ಕಣ್ಣಾರೆ ಕಂಡ ಕೋಪದಿಂದ ಪತ್ನಿ ಪೂಜಾಳ ಬಳಿ ಬಾಗಿಲು ತೆರೆಯುವಂತೆ ಹೇಳಿದ್ದಾನೆ. ಆದರೆ ಹೆಂಡತಿ ಬಾಗಿಲು ತೆರೆಯದ ಕಾರಣ ರವಿಯ ಕೋಪವು ನೆತ್ತಿಗೇರಿದೆ.

ಮನೆಯ ಅಂಗಳದಲ್ಲಿಯೇ ಇದ್ದ ಕೊಡಲಿಯನ್ನು ಎತ್ತಿಕೊಂಡು ಜೋರಾಗಿ ಕೂಗಾಡಲು ಆರಂಭಿಸಿದ್ದಾನೆ. ಆ ಬಳಿಕ ಪೂಜಾಳ ಪ್ರಿಯಕರ ಬಾಗಿಲು ತೆರೆದಾಗ ರವಿ ಕೊಡಲಿಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇತ್ತ ಪತ್ನಿ ಪೂಜಾಳ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದು, ಕೊಡಲಿಯಿಂದ ಆಕೆಯ ಕತ್ತು ಕಡಿದಿದ್ದಾನೆ. ಇಬ್ಬರೂ ಮನೆಯ ಅಂಗಳದಲ್ಲಿ ವಿಲವಿಲ ಒದ್ದಾಡಿ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಫೋನ್‌ ಪಾಸ್‌ವರ್ಡ್‌ ಕೇಳಿದ್ದಕ್ಕೆ ಸೀದಾ ಹೋಗಿ ಸಮುದ್ರಕ್ಕೆ ಹಾರಿದ ಭೂಪ

ಕೃತ್ಯವೆಸಗಿದ ವ್ಯಕ್ತಿಯು ರಕ್ತದಿಂದ ಕೂಡಿದ ಬಟ್ಟೆಯಲ್ಲೇ ಕೈಯಲ್ಲಿ ಕೊಡಲಿಯನ್ನು ಹಿಡಿದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಪೊಲೀಸರಿಗೆ ತಾನು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸುತ್ತಿದ್ದಂತೆ ಗಾಬರಿಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಕ್ಷಣವೇ ಪೊಲೀಸರ ತಂಡವು ಆತನ ಮನೆಗೆ ತೆರಳಿ ಮನೆಯ ಅಂಗಳದಲ್ಲಿ ಬಿದ್ದಿದ್ದ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ