Viral: ಗರ್ಲ್‌ಫ್ರೆಂಡ್ ಫೋನ್ ಪಾಸ್‌ವರ್ಡ್ ಕೇಳಿದ್ದಕ್ಕೆ ಸೀದಾ ಹೋಗಿ ಸಮುದ್ರಕ್ಕೆ ಹಾರಿದ ಭೂಪ
ಕೆಲವು ಚಿತ್ರ ವಿಚಿತ್ರ ಘಟನೆಗಳ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಸುದ್ದಿಯೊಂದು ವೈರಲ್ ಆಗಿದ್ದು, ಯುವಕನೊಬ್ಬ ತನ್ನ ಗೆಳತಿ ಫೋನ್ ಪಾಸ್‌ವರ್ಡ್ ಕೇಳಿದಾಗ, ಯಾವುದೇ ಕಾರಣಕ್ಕೂ ಆಕೆಗೆ ಪಾಸ್‌ವರ್ಡ್ ಗೊತ್ತಾಗಬಾರದೆಂದು ಉಪಾಯವೊಂದನ್ನು ಹೂಡಿ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ಈ ಕುರಿತ ಪೋಸ್ಟ್ ಒಂದು ಇದೀಗ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಜನರು ತಮ್ಮ ಮೊಬೈಲ್ ಪಾಸ್‌ವರ್ಡ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದ್ರೆ ಈ ಪ್ರೇಮಿಗಳು ಮಾತ್ರ ಪರಸ್ಪರ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬಳು ಯುವತಿ ಕೂಡಾ ತನ್ನ ಪ್ರಿಯಕರನ ಬಳಿ ಮೊಬೈಲ್ ಪಾಸ್‌ವರ್ಡ್ ಕೇಳಿದ್ದು, ಆಕೆಯೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಲು ಇಷ್ಟಪಡದ ಆ ಯುವಕ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು, ಗರ್ಲ್‌ಫ್ರೆಂಡ್ ಪಾಸ್‌ವರ್ಡ್ ಕೇಳಿದ್ದಕ್ಕೆ ಯುವಕನೊಬ್ಬ ಪೊಲೀಸರ ಮುಂದೆಯೇ ಸೀದಾ ಹೋಗಿ ಸಮುದ್ರಕ್ಕೆ ಹಾರಿದ್ದಾನೆ. ವರದಿಗಳ ಪ್ರಕಾರ ಫ್ಲೋರಿಡಾದ ಕೀ ವೆಸ್ಟ್ ಬಳಿಯ ಸಮುದ್ರದಲ್ಲಿ ಎ.ಜೆ ಎಂಬಾತ ಆತನ ಗರ್ಲ್‌ಫ್ರೆಂಡ್ ಜೊತೆ ಮೀನುಗಾರಿಕಾ ದೋಣಿಯಲ್ಲಿ ಕುಳಿತು ವಿಹರಿಸುತ್ತಿದ್ದ. ಆ ಸಂದರ್ಭದಲ್ಲಿ ಪೊಲೀಸರು ಈ ಜೋಡಿ ಬೋಟ್‌ನಲ್ಲಿ ಕೆಲವು ಕೋಡ್ ಉಲ್ಲಂಘನೆ ಮಾಡಿರುವುದನ್ನು ಗಮನಿಸುತ್ತಾರೆ. ತಕ್ಷಣ ಬೋಟ್ ಬಳಿ ಬಂದ ಪೊಲೀಸರು ಗುರುತಿನ ಚೀಟಿಯನ್ನು ಕೇಳುತ್ತಾರೆ. ಆದರೆ ಎಜೆ ಮತ್ತು ಆಕೆಯ ಗೆಳತಿ ಬಳಿ ಯಾವುದೇ ಐಡಿ ಇರಲಿಲ್ಲ. ಈ ಕಾರಣದಿಂದ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳುತ್ತಾರೆ. ಇದರಿಂದ ಭಯಗೊಂಡ ಎಜೆ ಗೆಳತಿ, ಸರಿಯಾದ ಪ್ರೂಫ್ ತೋರಿಸಲು ಎಜೆಯ ಮೊಬೈಲ್ ತೆಗೆದುಕೊಂಡು, ನಂತರ ಅದರ ಪಾಸ್‌ವರ್ಡ್ ಕೇಳಿದ್ದಾಳೆ.
ಇದನ್ನೂ ಓದಿ: ಟ್ವೀಟ್-ರೀಟ್ವೀಟ್ನಿಂದ ಪ್ರಾರಂಭವಾದ ಲವ್, ನವ ದಂಪತಿಗಳ ಎಕ್ಸ್ ಲವ್ ಕಹಾನಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Florida man jumps in ocean to avoid giving cops, girlfriend his phone’s passcode: ‘You’re telling me I’m resisting’ https://t.co/zcSqxdzqlo pic.twitter.com/EpUivFbpDE
— New York Post (@nypost) July 17, 2024
ಈ ಸಂದರ್ಭದಲ್ಲಿ ವಾದ ವಿವಾದಗಳು ನಡೆದು ಕೊನೆಯಲ್ಲಿ ಪೊಲೀಸರ ಬಂಧನದಿಂದ ಹಾಗೂ ಗರ್ಲ್‌ಫ್ರೆಂಡ್‌ಗೆ ಪಾಸ್‌ವರ್ಡ್ ನೀಡುವುದನ್ನು ತಪ್ಪಿಸಲು ಎಜೆ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ನಂತರ ಈಜುತ್ತಾ ದಡ ಸೇರಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೋಸ್ಟ್ ಒಂದನ್ನು New York Post ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ