WHO Report: ಈ ರಾಜ್ಯದಲ್ಲಿ ಅತೀ ಹೆಚ್ಚು ಕಾಂಡೋಮ್ ಬಳಸುತ್ತಾರಂತೆ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಕಾಂಡೋಮ್ ಬಳಕೆಯ ವರದಿಯನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಭಾರತದ ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

WHO Report: ಈ ರಾಜ್ಯದಲ್ಲಿ ಅತೀ ಹೆಚ್ಚು ಕಾಂಡೋಮ್ ಬಳಸುತ್ತಾರಂತೆ,  ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಹೆಚ್ಚು ಕಾಂಡೋಮ್ ಬಳಸುವ ರಾಜ್ಯ

Updated on: Sep 20, 2024 | 4:36 PM

ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚಿಗಷ್ಟೇ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಡೋಮ್ ಇಲ್ಲದೆ ಲೈಂಗಿಕತೆಯನ್ನು ಹೊಂದುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಇದಲ್ಲದೇ ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ . ಹಿಂದಿನದಕ್ಕೆ ಹೋಲಿಸಿದರೆ ಈಗ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ . ಆರೋಗ್ಯ ಇಲಾಖೆ ಜನರಿಗೆ ಕಾಂಡೋಮ್ ಬಳಕೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಅದರ ಬಳಕೆ ಕಡಿಮೆಯಾಗುತ್ತಿದೆ ಎಂದು ತಿಳಿದುಬಂದಿದೆ.

ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸಲಾಗುತ್ತದೆ ?

ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ (2021-22) ನಡೆಸಿದ ಸಮೀಕ್ಷೆಯ ಪ್ರಕಾರ ದಾದ್ರಾ ನಗರ ಹವೇಲಿಯು ಭಾರತದಲ್ಲಿ ಅತೀ ಹೆಚ್ಚು ಕಾಂಡೋಮ್‌ ಬಳಸುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ನಂತರ ಆಂಧ್ರಪ್ರದೇಶ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪೈಕಿ ಕರ್ನಾಟಕ 15ನೇ ಸ್ಥಾನದಲ್ಲಿದೆ . ಈ ರಾಜ್ಯದಲ್ಲಿ, 10 ಸಾವಿರ ದಂಪತಿಗಳಲ್ಲಿ 307 ದಂಪತಿಗಳು ಮಾತ್ರ ಕಾಂಡೋಮ್ಗಳನ್ನು ಬಳಸುತ್ತಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೃದಯ ಶ್ರೀಮಂತ, ಬೆಂಗಳೂರಿನ ಬೀದಿ ಬದಿ ಪ್ರಾಣಿಗಳಿಗೆ ಹೊಸ ಬದುಕು ಕಟ್ಟಿ ಕೊಟ್ಟ ಚಮ್ಮಾರ

ಕಾಂಡೋಮ್‌ ಬಳಕೆ:

ದರ್ದಾ ನಗರ ಹವೇಲಿಯಲ್ಲಿ 10 ಸಾವಿರ ಜೋಡಿಗಳಲ್ಲಿ 993 ಜೋಡಿಗಳು ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ . ಇದರ ನಂತರ, ಇತರ ರಾಜ್ಯಗಳ ಸಮೀಕ್ಷೆಯನ್ನು ಸಹ ನಡೆಸಲಾಯಿತು , ಇದರಲ್ಲಿ ಪ್ರತಿ ರಾಜ್ಯದಿಂದ ವಿವಿಧ ವಯೋಮಾನದ 10 ಸಾವಿರ ದಂಪತಿಗಳನ್ನು ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಆಂಧ್ರಪ್ರದೇಶದಲ್ಲಿ 10 ಸಾವಿರ ದಂಪತಿಗಳಲ್ಲಿ 978 ಮಂದಿ ಕಾಂಡೋಮ್ ಬಳಸುತ್ತಾರೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Fri, 20 September 24