Car Driver : ಅನುಭವಿ ಮತ್ತು ವೃತ್ತಿಪರ ಕಾರ್ ಡ್ರೈವರ್ಗಳು ಸದಾ ಪ್ರಯಾಣದಲ್ಲಿರುತ್ತಾರೆ. ಅವರಳ ಬಳಿ ಟೂತ್ಪೇಸ್ಟ್ ಇರುತ್ತದೆ. ಯಾಕೆ? ಅವರಿಗೆ ಹಲ್ಲುಜ್ಜಲು ಟೂತ್ಪೇಸ್ಟ್ (Toothpaste) ಬೇಕು ಎಂಬ ಉತ್ತರ ಯಾರಿಗಾದರೂ ಹೊಳೆಯುವಂಥದ್ದು. ಆದರೆ ಅದು ತಪ್ಪು. ಹೇಗೆ ತಪ್ಪು ಎಂದು ನೀವು ಹುಬ್ಬೇರಿಸಬಹುದು. ಟೂತ್ಪೇಸ್ಟ್ ಅನ್ನು ಹಲ್ಲಿಗೆ ಉಜ್ಜದೇ ಇನ್ನು ಕಾರಿನ ಮೂತಿಗೆ ಉಜ್ಜೋದಕ್ಕಾಗುತ್ತದೆಯೇ? ಎಂದು ಹುಸಿಕೋಪ ಮತ್ತು ತುಸು ಕೊಂಕಿನಿಂದ ನೀವು ಕೇಳಬಹುದು. ಆದರೆ ಇದೇ ನಿಜವಾದ ಉತ್ತರ! ಅದು ಹೇಗೆ ಎನ್ನುತ್ತೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಕೆಳಗಿನ ವಿಡಿಯೋ ನೋಡಿ.
ನಿಮ್ಮ ತಪ್ಪಿನಿಂದಲೋ ಅಥವಾ ಬೇರೆಯವರ ತಪ್ಪಿನಿಂದಲೋ ನಿಮ್ಮ ಕಾರ್ ಸ್ಕ್ರ್ಯಾಚ್ಗೆ ಒಳಗಾಗುತ್ತದೆ ಎಂದುಕೊಳ್ಳಿ. ಅಯ್ಯೋ ಇದಕ್ಕಿನ್ನು ಸಾವಿರಾರು ರೂಪಾಯಿ ಖರ್ಚು ಮಾಡಬೇಕು, ಅಲ್ಲದೇ ಆ ಪ್ಯಾಚ್ ಬೇರೆ ಹಾಗೆಯೇ ಉಳಿದುಕೊಂಡುಬಿಡುತ್ತದೆ ಎಂದು ಚಿಂತಿಸಬೇಕಿಲ್ಲ. ಹಾಗಿದ್ದರೆ ಏನು ಮಾಡಬೇಕು ಎಂದು ಮೇಲಿನ ವಿಡಿಯೋದಲ್ಲಿ ನೋಡಿದಿರಿ. ಹಾಗೆಯೇ ತುಂಬಾ ದಿನಗಳ ಮೇಲೆ ಕಾರಿನ ಗಾಜನ್ನು ಒರೆಸಬೇಕೆಂದರೆ ವೈಪರ್ನ ಒಳಮೈತುಂಬಾ ಪೇಸ್ಟ್ ಹಚ್ಚಿಬಿಡುವುದು. ಹಾಗೆ ಇಲಿಗಳು ಎಂಜಿನ್ ವಯರ್ ಕತ್ತರಿಸುತ್ತಿರುತ್ತವೆ, ಅದಕ್ಕೂ ಪೇಸ್ಟ್ ಮದ್ದು!
ಇದನ್ನೂ ಓದಿ : Viral Video: ಮಟಮಟ ಮಧ್ಯಾಹ್ನ ಮಟನ್ ಮ್ಯಾಗೀ, ಬೆಲೆ ಕೇವಲ ರೂ. 600!
ಈ ವಿಡಿಯೋ ಎಷ್ಟು ಉಪಯುಕ್ತವಾಗಿದೆಯಲ್ಲ ಎಂದು ಅನ್ನಿಸಿದಾಗೆಲ್ಲ ವಿಷಯದ ಬಗ್ಗೆ ಖಚಿತಪಡಿಸಿಕೊಳ್ಳಲು ಕಮೆಂಟ್ ಸೆಕ್ಷನ್ಗೆ ಹೋಗುತ್ತೇನೆ ಎಂದಿದ್ದಾರೆ ಒಬ್ಬರು. ಹೌದು ಹೌದು ನಾವೂ ಹಾಗೇ ಎಂದಿದ್ದಾರೆ ಹಲವಾರು ಜನ. ನಾ ಕೂಡ ಹೀಗೆ ಟೂತ್ಪೇಸ್ಟ್ ಬಳಸುತ್ತೇನೆ ಕಾರಿಗೆ ಎಂದಿದ್ದಾರೆ ಕೆಲವರು. ಯಾವುದೇ ಬಗೆಯ ಟೂತ್ಪೇಸ್ಟ್ ಪರವಾಗಿಲ್ವಾ ಎಂದು ಕೇಳಿದ್ದಾರೆ ಕೆಲವರು. ನನ್ನ ಕಾರಿನ ವಯರುಗಳನ್ನು ಇಲಿಗಳು ಕಡೆಯದಂತೆ ದಾಲ್ಚಿನ್ನಿ ದ್ರಾವಣ ಸಿಂಪಡಿಸುತ್ತಿದ್ದೆ, ಇನ್ನು ಪೇಸ್ಟ್ ಹಚ್ಚಿ ನೋಡುವೆ ಎಂದಿದ್ದಾರೆ ಮತ್ತೊಬ್ಬರು. ಮಂಜಿನಿಂದ ಮಬ್ಬಾದ ಗಾಜುಗಳನ್ನು ಇದು ಬೇಗನೆ ಸ್ವಚ್ಛಗೊಳಿಸುತ್ತದೆ ಎಂದಿದ್ಧಾರೆ ಇನ್ನೂ ಒಬ್ಬರು. ಹಲ್ಲುಜ್ಜುವುದನ್ನು ಬಿಟ್ಟು ಟೂತ್ಪೇಸ್ಟ್ನಿಂದ ಏನೇನೆಲ್ಲ ಪ್ರಯೋಜನ ಇದೆ ಎಂಬ ಮಾಹಿತಿಯ ಮಹಾಪೂರವೇ ಈ ಪೋಸ್ಟಿಗೆ ಹರಿದು ಬಂದಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:06 pm, Mon, 3 July 23