ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯೊಂದಿಗೆ ಬೀಚ್ನಲ್ಲಿ ಏಕಾಂತದ ಸಮಯ ಕಳೆಯುತ್ತಿರುವ ವೇಳೆ ಆತನ ಗರ್ಭಿಣಿ ಹೆಂಡತಿ ಎಂಟ್ರಿ ಕೊಟ್ಟಿದ್ದು, ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬೇರೊಂದು ಯುವತಿಯ ಜೊತೆ ಅರೆಬರೆ ಬಟ್ಟೆಯಲ್ಲಿ ಪತಿ ಎಂಜಾಯ್ ಮಾಡುತ್ತಿರುವುದನ್ನು ಕಂಡು ಪತ್ನಿ ಶಾಕ್ ಆಗಿದ್ದಾನೆ. ಈ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ವ್ಯಕ್ತಿ ತನ್ನ ತುಂಬು ಗರ್ಭಿಣಿ ಹೆಂಡತಿಗೆ ಮೋಸ ಮಾಡಿ, ಇನ್ನೊಬ್ಬ ಮಹಿಳೆಯೊಂದಿಗೆ ವಾಸವಾಗಿದ್ದನು. ಆದರೆ ಆತನ ಪತ್ನಿ ಆತನನ್ನು ಸಖತ್ ಪ್ಲಾನಿಂಗ್ ಮಾಡಿ ಮತ್ತೊಬ್ಬ ಮಹಿಳೆಯೊಂದಿಗೆ ಕಾಲ ಕಳೆಯುತ್ತಿರುವ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದ್ದಿದ್ದಾಳೆ. ಇದಲ್ಲದೇ ಪತ್ನಿ ಸಂಪೂರ್ಣ ಘಟನೆಯನ್ನು ಮೊಬೈಲ್ ಮೂಲಕ ಸೆರೆಹಿಡಿದ್ದಿದ್ದಾಳೆ.
Woman is pregnant with her child (9 months) and catches her husband cheating on the beach with the side piece pic.twitter.com/lW6tQim1yR
— Winnie Schola (@WinnieSchola) July 16, 2024
ಇದನ್ನೂ ಓದಿ: Aanvi Kamdar: ರೀಲ್ಸ್ ಮಾಡುವ ವೇಳೆ 300 ಅಡಿ ಜಲಪಾತಕ್ಕೆ ಬಿದ್ದು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾವು
9 ತಿಂಗಳ ಗರ್ಭಿಣಿ ಕೆಲ್ಲಿ ಸ್ಮಿತ್ ಸ್ವತಃ ಈ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ನೋಡಿದ್ದು, ಗರ್ಭಿಣಿಯನ್ನು ಬೆಂಬಲಿಸಿದ್ದಾರೆ. ಪುರುಷನ ಈ ಕೃತ್ಯವನ್ನು ಖಂಡಿಸಿದ ಜನರು ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Fri, 19 July 24