Shocking News: ಮಾತ್ರೆ ಎಂದು ತಪ್ಪಾಗಿ ತಿಳಿದು​ ಏರ್​-ಪಾಡ್​ ನುಂಗಿದ ಯುವತಿ!

| Updated By: shruti hegde

Updated on: Nov 19, 2021 | 3:54 PM

Viral News: ಇಲ್ಲೋರ್ವ ಯುವತಿಯು ಮಾತ್ರೆಯೆಂದು ತಪ್ಪಾಗಿ ತಿಳಿದು ಏರ್​-ಪಾಡ್​ ನುಂಗಿದ್ದಾಳೆ. ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Shocking News: ಮಾತ್ರೆ ಎಂದು ತಪ್ಪಾಗಿ ತಿಳಿದು​ ಏರ್​-ಪಾಡ್​ ನುಂಗಿದ ಯುವತಿ!
Follow us on

ಕೆಲವು ಬಾರಿ ಗಡಿಬಿಡಿಯಲ್ಲಿ ಏನೆಲ್ಲಾ ನಡೆದು ಬಿಡುತ್ತವೆ. ಇನ್ನು ಕೆಲವು ಬಾರಿ ಗೊತ್ತಿದ್ದೂ ತಪ್ಪು ಮಾಡುತ್ತೇವೆ. ಗೊಂದಲದಲ್ಲಿದ್ದಾಗ ಮಾಡುವ ಕೆಲವು ತಪ್ಪುಗಳು ಯಾವ ಮಟ್ಟಿಗೆ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೊ ಹರಿದಾಡುತ್ತಿದೆ. ಮಾತ್ರೆಯೆಂದು ತಪ್ಪಾಗಿ ಭಾವಿಸಿದ ಯುವತಿ ಏರ್-ಪಾಡ್ಅನ್ನು ನುಂಗಿಯೇ ಬಿಟ್ಟಿದ್ದಾರೆ. ಯುವತಿಯ ಹೆಸರು ಕಾರ್ಲಿ ಬೆಲ್ಲರ್. ಅವರಿಗೆ 27 ವರ್ಷ ವಯಸ್ಸು. ಗೊಂದಲದಲ್ಲಿದ್ದ ಯುವತಿ ಮಾತ್ರೆ ಅಂದಕೊಂಡು ಆಪಲ್ ಏರ್-ಪಾಡ್ಅನ್ನೇ ನುಂಗಿದ್ದಾರೆ. ಈ ಕುರಿತಂತೆ ಟಿಕ್ ಟಾಕ್​ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. 

ಕಾರ್ಲಿ ಅವರು ವಿಡಿಯೊದಲ್ಲಿ ಹೇಳಿರುವಂತೆ, ನಾನು ನೋವು ನಿವಾರಕ ಮಾತ್ರೆ ತಿನ್ನುವುದನ್ನು ಬಿಟ್ಟು ಏರ್-ಪಾಡ್ಅನ್ನು ತಿಂದಿದ್ದೆ. ತುಂಬಾ ಚಿಂತೆಯಾಗುತ್ತಿತ್ತು. ಅದನ್ನು ಹೊರ ಹಾಕಲು ಎಷ್ಟು ಪ್ರಯತ್ನಿಸಿದರೂ ಪ್ರಯತ್ನ ವ್ಯರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.

ಘಟನೆಯನ್ನು ವಿವರಿಸಿದ ಕಾರ್ಲಿ ಅವರು, ನನ್ನ ಒಂದು ಕೈಯಲ್ಲಿ ಮಾತ್ರೆಯಿತ್ತು. ಮತ್ತೊಂದು ಕೈಯಲ್ಲಿ ಏರ್-ಪಾಡ್ ಇತ್ತು. ನಾನು ಮಾತ್ರೆಯನ್ನು ನುಂಗಲು ಹೋದೆ ಆದರೆ ಏರ್-ಪಾಡ್ ನುಂಗಿದ್ದೇನೆ. ನನಗೆ ಎಲ್ಲವೂ ಮಸುಕಾಗಿ ಕಾಣಿಸುತ್ತಿತ್ತು. ಏಕೆಂದರೆ ನಾನು ಈ ಘಟನೆಯಿಂದ ಹುಚ್ಚನಾಗಿದ್ದೇನೆ ಅನ್ನುವಷ್ಟರ ಮಟ್ಟಿಗೆ ತಲೆಕೆಟ್ಟಿತು ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಏರ್​-ಪಾಡ್​ ನುಂಗಿದ ಯುವತಿ ಫೋನ್ ಫೋನ್​ಗೆ ಕನೆಕ್ಟ್ ಆಗಿದ್ದ ಏರ್​-ಪಾಡ್​ನಿಂದ ಧ್ವನಿಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಅವರ ಹೊಟ್ಟೆಯಲ್ಲಿ ಏರ್ಪಾ-ಪಾಡ್ ಇರುವುದು ತಿಳಿದು ಬಂದಿತು. ರೆಕಾರ್ಡ್​ನಲ್ಲಿ ಅವರು ಮಾತನಾಡಿರುವುದು ಕೇಳಿಸುತ್ತಿತ್ತು. ಏರ್-ಪಾಡ್ ತಾನಾಗಿಯೇ ದೇಹದಿಂದ ಹೊರ ಹೋಗಲು ಯುವತಿ ಕಾದಳು. ಬಳಿಕ ಏರ್-ಪಾಡ್ ಹೊಟ್ಟೆಯಲ್ಲಿದೆಯೇ? ಇಲ್ಲವೇ? ಎಂಬುದನ್ನು ಖಚಿತ ಪಡಿಸಿಕೊಳ್ಳಲು ಎಕ್ಸ್-ರೇ ಮಾಡಿಸಿಕೊಂಡರು.

ಏರ್-ಪಾಡ್ ನನ್ನಿಂದ ಹೊರ ಹೋಗಿದೆ ಎಂಬ ಭಾವನೆ ಇತ್ತು. ಆದರೂ ಸ್ಪಷ್ಟಪಡಿಸಿಕೊಳ್ಳಲು ಎಕ್ಸ-ರೇ ಮಾಡಿಸಿದೆ. ಇದೀಗ ನನ್ನ ಒಳಗೆ ಏರ್-ಪಾಡ್ ಇಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆನ್ಲೈನ್​ನಲ್ಲಿ ವಿಡಿಯೊ ಫುಲ್ ವೈರಲ್ ಆಗಿದ್ದು, ಹಲವರು ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು ಭಯಾನಕ ಎಂದು ಪ್ರತಿಕ್ರಿಯಿದ್ದಾರೆ. ಇನ್ನು ಕೆಲವರು ಆಕೆ ತನ್ನೊಳಗೆಯೇ ಸಂಗೀತವನ್ನು ನುಡಿಸಬಹುದು ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಮಾತ್ರೆ ಯಾವುದು? ಏರ್-ಪಾಡ್ ಯಾವುದು? ಎಂಬುದು ತಿಳಿದಿಲ್ಲವೇ ಎಂದು ಮತ್ತೋರ್ವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:

Shocking News: ಮೊಮ್ಮಗುವಿನ ಅಂತ್ಯಕ್ರಿಯೆಗೆ ಹೋದಾಗ ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿದ ಅಪ್ಪ !

Shocking Video: ಪ್ಯಾರಾಸೈಲಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ; ಶಾಕಿಂಗ್ ವಿಡಿಯೊ ವೈರಲ್

Published On - 3:39 pm, Fri, 19 November 21