AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಮೊಮ್ಮಗುವಿನ ಅಂತ್ಯಕ್ರಿಯೆಗೆ ಹೋದಾಗ ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿದ ಅಪ್ಪ !

ಘಟನೆಯನ್ನು ವಿವರಿಸಿರುವ ರಾಟಿಬಾದ್​ ಠಾಣೆ ಅಧಿಕಾರಿ ಸುದೇಶ್​ ತಿವಾರಿ,  ಈಗೆರಡು ದಿನಗಳ ಹಿಂದೆ ಸಂಸಗಡ್​ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಮಗುವಿನ ಮೃತದೇಹ ಸಿಕ್ಕಿದೆ. ಅದು ಪತ್ತೆಯಾದ ನಂತರ ತನಿಖೆ ಶುರು ಮಾಡಲಾಯಿತು ಎಂದಿದ್ದಾರೆ.

Shocking News: ಮೊಮ್ಮಗುವಿನ ಅಂತ್ಯಕ್ರಿಯೆಗೆ ಹೋದಾಗ ಮಗಳ ಮೇಲೆ ಅತ್ಯಾಚಾರ ಮಾಡಿ, ಹತ್ಯೆ ಮಾಡಿದ ಅಪ್ಪ !
ಸಾಂಕೇತಿಕ ಚಿತ್ರ
TV9 Web
| Edited By: |

Updated on:Nov 17, 2021 | 8:44 AM

Share

ಮಗಳು ಬೇರೆ ಜಾತಿಯವನನ್ನು ಮದುವೆಯಾದಳು ಎಂಬ ಕೋಪದಿಂದ ತಂದೆ ಆಕೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಹೀನ ಘಟನೆ ಮಧ್ಯಪ್ರದೇಶದ ರಾಟಿಬಾದ್​​ನಲ್ಲಿ ನಡೆದಿದೆ. ಆ ಮಹಿಳೆಗೆ 8 ತಿಂಗಳ ಮಗು ಕೂಡ ಇತ್ತು. ಆದರೆ ಆ ಮಗು ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿತ್ತು. ಘಟನೆ ಬಗ್ಗೆ ಕುಟುಂಬದವರು ಮಾಹಿತಿ ನೀಡಿದ ಪ್ರಕಾರ, ಮೃತ ಮಗುವಿನ ಅಂತ್ಯಕ್ರಿಯೆಗಾಗಿ ಮಗಳನ್ನು ಕಾಡಿನ ಸಮೀಪ ಕರೆದುಕೊಂಡು ಹೋದ ಅಪ್ಪ, ಅಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯನ್ನು ವಿವರಿಸಿರುವ ರಾಟಿಬಾದ್​ ಠಾಣೆ ಅಧಿಕಾರಿ ಸುದೇಶ್​ ತಿವಾರಿ,  ಈಗೆರಡು ದಿನಗಳ ಹಿಂದೆ ಸಂಸಗಡ್​ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಮಗುವಿನ ಮೃತದೇಹ ಸಿಕ್ಕಿದೆ. ಅದು ಪತ್ತೆಯಾದ ನಂತರ ತನಿಖೆ ಶುರು ಮಾಡಲಾಯಿತು. ನಂತರ ಆ ಮಹಿಳೆ ಸೆಹೋರ್​ ಜಿಲ್ಲೆಯ ಬಿಲ್ಕಿಸ್​ಗಂಜ್​ನವರು ಎಂಬುದು ಗೊತ್ತಾಯಿತು. ನಂತರ ಅವರ ಕುಟುಂಬದವರನ್ನೆಲ್ಲ ವಿಚಾರಣೆ ಮಾಡಿದ ಸತ್ಯ ಬೆಳಕಿಗೆ ಬಂತು. ಆಕೆ  ಬೇರೆ ಜಾತಿಯವನೊಬ್ಬನನ್ನು ಪ್ರೀತಿಸಿದ್ದಳು. ಆದರೆ ಆತನೊಂದಿಗೆ ಮದುವೆ ಮಾಡಿಕೊಡಲು ಆಕೆಯ ಪಾಲಕರಿಗೆ, ಅದರಲ್ಲೂ ಕೂಡ ತಂದೆಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ನಂತರ ಆಕೆ ಓಡಿಹೋಗಿ ಮದುವೆಯಾದಳು.  ಇಷ್ಟು ದಿನಗಳಲ್ಲಿ ಒಮ್ಮೆಯೂ ಮಹಿಳೆ ತನ್ನ ತವರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಅಕ್ಕ-ಪಕ್ಕದ ಮನೆಯವರು ಆಡಿಕೊಳ್ಳುತ್ತಿದ್ದರು. ಕೊನೆಗೆ ಮೊನ್ನೆ ನಡೆದ ದೀಪಾವಳಿ ಹಬ್ಬಕ್ಕೆ ಮಹಿಳೆ ತನ್ನ 8 ತಿಂಗಳ ಮಗುವೊಂದಿಗೆ ಅಕ್ಕನ ಮನೆಗೆ ಬಂದಿದ್ದಳು. ಆದರೆ ಅಲ್ಲೇ ಆಕೆಯ ಮಗು ಅನಾರೋಗ್ಯದಿಂದ ತೀರಿಕೊಂಡಿತು.  ಆಗ ಅಕ್ಕ ಏನೂ ಮಾಡಲು ತೋಚದೆ ತಂದೆಗೆ ವಿಷಯ ತಿಳಿಸಿದಳು. ಆತ ತನ್ನ ಮಗನೊಂದಿಗೆ ರಾಟಿಬಾದ್​ಗೆ ತಲುಪಿ, ಮಗುವಿನ ಅಂತ್ಯಕ್ರಿಯೆಗೆಂದು ಮಗಳನ್ನೂ ಕರೆದುಕೊಂಡು ಅರಣ್ಯಕ್ಕೆ ಹೋಗಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾನೆ. ಎಲ್ಲ ರೀತಿಯ ವಿಚಾರಣೆಯ ಬಳಿಕ 55ವರ್ಷದ ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರ ವಶದಲ್ಲಿಯೇ ಇದ್ದಾನೆ.

ಇದನ್ನೂ ಓದಿ: Hair Care Tips: ಕೂದಲು ಬೆಳ್ಳಗಾಗುತ್ತಿದೆಯೇ? ಪರಿಹಾರಕ್ಕೆ ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ

Published On - 8:44 am, Wed, 17 November 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ