Viral Video: ಸಿಪಿಆರ್ ಮೂಲಕ ಕಪ್ಪೆಯನ್ನು ಬದುಕಿಸಲು ಹರಸಾಹಸ ಪಡುತ್ತಿರುವ ಮಹಿಳೆ! ಮುಂದೆನಾಯ್ತು? ವಿಡಿಯೋ ನೋಡಿ​

ಈಜುಕೊಳದಲ್ಲಿದ್ದ ಕಪ್ಪೆ ತಲೆಕೆಳಗಾಗಿ ಬಿದ್ದಿರುವುದನ್ನು ಮಹಿಳೆ ನೋಡುತ್ತಾರೆ. ಸ್ಥಿತಿ ನೋಡಿದಾಕ್ಷಣ ಕಪ್ಪೆ ಸತ್ತಿರಬಹುದು ಎಂದು ಭಾವಿಸುತ್ತಾರೆ. ಸಿಪಿಆರ್ ಮೂಲಕ ಕಪ್ಪೆಯನ್ನು ಬದುಕಿಸಲು ಹರಸಾಹಸ ಪಡುತ್ತಿದ್ದಾರೆ.. ವಿಡಿಯೋ ನೋಡಿ.

Viral Video: ಸಿಪಿಆರ್ ಮೂಲಕ ಕಪ್ಪೆಯನ್ನು ಬದುಕಿಸಲು ಹರಸಾಹಸ ಪಡುತ್ತಿರುವ ಮಹಿಳೆ! ಮುಂದೆನಾಯ್ತು? ವಿಡಿಯೋ ನೋಡಿ​
ಸಿಪಿಆರ್ ಮೂಲಕ ಕಪ್ಪೆಯನ್ನು ಬದುಕಿಸಲು ಹರಸಾಹಸ ಪಡುತ್ತಿರುವ ಮಹಿಳೆ!
Edited By:

Updated on: Jul 07, 2021 | 4:23 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಬಹಳ ವಿಚಿತ್ರವೆನಿಸಿದರೂ ಸಹ ವಿಡಿಯೋ ನೋಡಿದಾಕ್ಷಣ ನಂಬಲೇಬೇಕಾದ ಪರಿಸ್ಥಿತಿ. ಇಲ್ಲೊಂದು ವಿಡಿಯೋ ಕೂಡಾ ಹಾಗೆಯೇ ಇದೆ. ಇಲ್ಲೋರ್ವ ಯುವತಿ ಕಪ್ಪೆಯನ್ನು ಬಹುಕಿಸಲು ಸಿಪಿಆರ್​ ನೀಡುತ್ತಿದ್ದಾರೆ. ಕಡ್ಡಿಯಿಂದ ಶ್ವಾಸಕೋಶವನ್ನು ಒತ್ತುವ ಮೂಲಕ ನೀರನ್ನು ಆಚೆ ಹಾಕುತ್ತಿದ್ದೀನಿ ಎಂಬ ಭಾವನೆ ಅವರದ್ದು. ಉಭಯಚರವನ್ನು ಬದುಕಿಸಲು ಸಿಪಿಆರ್​ ನೀಡುತ್ತಿರುವ ವಿಲಕ್ಷಣ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ಕೆಲವೇ ಸೆಂಕೆಂಡುಗಳಿದ್ದರೂ ಸಹ ಜನರ ಹೃದಯ ಕೆರಳುವಂತಿದೆ. 

ಈಜುಕೊಳದಲ್ಲಿದ್ದ ಕಪ್ಪೆ ತಲೆಕೆಳಗಾಗಿ ಬಿದ್ದಿರುವುದನ್ನು ಮಹಿಳೆ ನೋಡುತ್ತಾಳೆ. ಸ್ಥಿತಿ ನೋಡಿದಾಕ್ಷಣ ಕಪ್ಪೆ ಸತ್ತಿರಬಹುದು ಎಂದು ಭಾವಿಸುತ್ತಾಳೆ. ನೋರಿನೊಳಗೆ ಆಮ್ಲಜನಕವನ್ನು ಹೀರಿಕೊಳ್ಳಲು ಕಪ್ಪೆಗಳು ತಮ್ಮ ಚರ್ಮವನ್ನು ಬಳಸಿಕೊಳ್ಳುತ್ತವೆ. ಕಪ್ಪೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಏಕೆ ಮಲಗಿದೆ ಎಂಬುದು ನಿಗೂಢವಾಗಿದೆ. ಆದರೆ ಕಪ್ಪೆಯ ಶ್ವಾಸಕೋಶ ನೀರಿನಿಂದ ತುಂಬಿದ್ದರೆ ಅಥವಾ ಆಮ್ಲಜನಕದ ಕೊರತೆ ಕಾಣಿಸಿಕೊಂಡಾಗ ನೀರಿನಲ್ಲಿ ಮುಳುಗುತ್ತವೆ ಎಂದು ಬರ್ಕ್​ ಮ್ಯೂಸಿಯಂ ತಿಳಿಸಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಪ್ಪೆಯನ್ನು ನೋಡಿದ ಕಾರ್ಲಾ ಅವರು, ಕೊಳದಿಂದ ಕಪ್ಪೆಯನ್ನು ಹೊರತೆಗೆದಿದ್ದಾರೆ. ಬಳಿಕ ಸಿಪಿಆರ್​ ನೀಡುವ ಮೂಲಕ ಕಪ್ಪೆಯನ್ನು ಬದುಕಿಸಲು ಪ್ರಯತ್ನಿಸುತ್ತಿದ್ದಾರೆ. ಕಪ್ಪೆಯನ್ನು ತಿರುಗಿಸಿ ಶ್ವಾಸ ಕೋಶದಿಂದ ನೀರು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಡಿಯೋದಲ್ಲಿ ಗನಿಸುವಂತೆ, ನಾನು ಏನು ಮಾಡುತ್ತಿದ್ದೆ ಎಂಬುದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಳಿಕ ಕಪ್ಪೆಯನ್ನು ಸರಿಯಾಗಿ ತಿರುಗಿಸಿಸುತ್ತಾರೆ. ತಕ್ಷಣವೇ ಕಪ್ಪೆಯ ಕಾಲುಗಳು ಚಲಿಸಲು ಪ್ರಾರಂಭಿಸಿದೆ. ಬಳಿಕ ಪುನಃ ತನ್ನ ಕಾರ್ಯವಿಧಾನವನ್ನು ಮುಂದುವರೆಸುತ್ತೇನೆ.. ಮೇಜಿನ ಮೇಲೆ ಬಿಟ್ಟು ಕಪ್ಪೆಯನ್ನು ನೋಡುತ್ತೇನೆ ಎಂದು ಹೇಳುವಷ್ಟರಲ್ಲಿ ಕಪ್ಪೆ ಸ್ಥಳದಿಂದ ಕಣ್ಮರೆಯಾಗಿದೆ.

ಕಾರ್ಲಾ ಅವರು ಎರಡು ರೀತಿಯ ತೀರ್ಮಾನಗಳನ್ನು ತಿಳಿಸಿದ್ದಾರೆ ಒಂದು ಮೇಜಿನ ಮೇಲೆ ಹಕ್ಕಿಯ ರೆಕ್ಕೆ ಬಿದ್ದಿರುವದರಿಂದ ಹಕ್ಕಿ ಬಂದು ಕಪ್ಪೆಯನ್ನು ಬೇಟೆಯಾಡಿರಬಹುದು. ಇಲ್ಲವೆ ಕಪ್ಪೆಗೆ ಜೀವ ಬಂದು ಅದು ಸಂಚರಿಸಿರಬಹುದು ಎಂದು ಹೇಳಿದ್ದಾರೆ. ಕಪ್ಪೆಯನ್ನು ರಕ್ಷಿಸಲು ಸುರಕ್ಷಿತ ಮಾರ್ಗಗಳಿವೆ ಎಂದು ನೆಟ್ಟಿಗರೋರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕೆ ಉತ್ತರಿಸಿದ ಕಾರ್ಲಾ, ಕಪ್ಪೆಗೆ ಚಿಕಿತ್ಸೆ ನೀಡುವ ಕುರಿತು ನಾನು ಜ್ಞಾನವನ್ನು ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ

Viral Video: ದಾರಿ ತಪ್ಪಿ ರಸ್ತೆಗೆ ಬಂದು ಅಲೆದಾಡುತ್ತಿರುವ 5 ಸಿಂಹಗಳು; ದೃಶ್ಯ ಕ್ಯಾಮರಾದಲ್ಲಿ ಸೆರೆ