ಉತ್ತರ ಪ್ರದೇಶದ (Uttara Pradesh) ಮಹೋಬಾ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ, ಇಬ್ಬರು ಮಹಿಳೆಯರು ಅಮಾನುಶವಾಗಿ ನಡುರಸ್ತೆಯಲ್ಲಿ ಹೊಡೆದು, ಕಾಲಿನಿಂದ ಒದ್ದು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಕರಣ ಸಂಬಂಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಮಹಿಳೆ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ಈ ಇಬ್ಬರು ಮಹಿಳೆಯರು ಥಳಿಸಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಗು ಬೇಕೆಂದು ಪತಿ ಮತ್ತು ಅತ್ತೆಯಂದಿರು ಪದೇ ಪದೇ ಕಿರುಕುಳ ಮತ್ತು ಹಲ್ಲೆ ನಡೆಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನು ಓದಿ: ‘ಅಮೃತಧಾರೆ’ಯ ನಂತರ ಎಷ್ಟು ಸಿನೆಮಾ ಹಾಡು ಹಾಡಿದಿರಿ’ ಎಸ್ಪಿಬಿ ಸುಪ್ರಿಯಾಗೆ ಕೇಳಿದಾಗ
A woman was mercilessly beaten for not giving birth to a son by her family members in Ramnagar Jukha area of UP's Mahoba district. All the residents of the area stood as spectators saying that it's a family matter.
Warning: sensitive content@NCWIndia @Uppolice pic.twitter.com/TKeNd0nP1A— Kanwardeep singh (@KanwardeepsTOI) June 4, 2022
ಗಂಡ ಮತ್ತು ಅತ್ತೆ-ಮಾವಂದಿರು ನನಗೆ ಗಂಡು ಮಗುವಾಗಲಿಲ್ಲ ಎಂದು ಚಿತ್ರಹಿಂಸೆ ನೀಡುತ್ತಿದ್ದರು. ಎರಡನೇ ಮಗಳು ಹುಟ್ಟಿದ ನಂತರ ಕಿರುಕುಳ ಹೆಚ್ಚಾಯಿತು’ ಎಂದು ಮಹಿಳೆ ಹೇಳಿದ್ದಾರೆ. ಘಟನೆಯ ವೀಡಿಯೋ ಇಬ್ಬರು ಮಹಿಳೆಯರು ಆಕೆಯನ್ನು ನಿಂದಿಸುವುದನ್ನು, ಒದೆಯುವುದು ಮತ್ತು ಹೊಡೆಯುವುದನ್ನು ತೋರಿಸುತ್ತದೆ ಮತ್ತು ಅವಳು ಅಳುತ್ತಾಳೆ ಮತ್ತು ನಿಲ್ಲಿಸುವಂತೆ ಬೇಡಿಕೊಂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಕುಸಿದು ಬಿದ್ದ ನಾಯಿಗೆ ಮರುಜೀವ ತುಂಬಿದ ಆಪತ್ಭಾಂದವ, ವಿಡಿಯೋ ನೋಡಿ
ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹೋಬಾದ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ಹೇಳಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Sat, 4 June 22