AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದೇ ಕಾಲಿನಲ್ಲಿ 2 ಕಿ.ಮೀ ನಡೆದು ಶಾಲೆಗೆ ಹೋಗುವ ವಿಕಲಚೇತನ ಬಾಲಕ; ವಿಡಿಯೋ ಇಲ್ಲಿದೆ

ಪರ್ವೇಜ್ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಎಡಗಾಲನ್ನು ಬೆಂಕಿ ಅಪಘಾತದಲ್ಲಿ ಕಳೆದುಕೊಂಡಿದ್ದ. ಆತ ಪ್ರಸ್ತುತ ನೌಗಾಮ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.

Viral Video: ಒಂದೇ ಕಾಲಿನಲ್ಲಿ 2 ಕಿ.ಮೀ ನಡೆದು ಶಾಲೆಗೆ ಹೋಗುವ ವಿಕಲಚೇತನ ಬಾಲಕ; ವಿಡಿಯೋ ಇಲ್ಲಿದೆ
ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುವ ಪರ್ವೇಜ್Image Credit source: times now
TV9 Web
| Edited By: |

Updated on: Jun 04, 2022 | 2:31 PM

Share

‘ಮನಸಿದ್ದರೆ ಮಾರ್ಗ’ ಎಂಬ ಮಾತೊಂದಿದೆ. ಎಷ್ಟೋ ಜನರು ತಮಗೆ ಎಷ್ಟೇ ಸೌಕರ್ಯಗಳಿದ್ದರೂ ಇರದಿರುವ ಬಗ್ಗೆಯೇ ಯೋಚಿಸುತ್ತಾ ಕೊರಗುತ್ತಾರೆ. ಆದರೆ, ಇಲ್ಲೊಬ್ಬ ಬಾಲಕನಿಗೆ ಒಂದು ಕಾಲು ಇಲ್ಲದಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಆತ ದಿನವೂ ಒಂದೇ ಕಾಲಿನಲ್ಲಿ 2 ಕಿ.ಮೀ. ದೂರ ನಡೆದು ಶಾಲೆಗೆ ಹೋಗುತ್ತಾನೆ. ಜಮ್ಮು ಕಾಶ್ಮೀರದ (Jammu Kashmir) ಪರ್ವೇಜ್ ಎಂಬ ವಿಕಲಚೇತನ ಬಾಲಕ ಹಂದ್ವಾರದಲ್ಲಿ ಪ್ರತಿದಿನ ತನ್ನ ಕನಸುಗಳನ್ನು ಮುಂದುವರಿಸಲು ಒಂದೇ ಕಾಲಿನಲ್ಲಿ ಶಾಲೆಗೆ ಹೋಗುತ್ತಾನೆ.

ಪರ್ವೇಜ್ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಎಡಗಾಲನ್ನು ಬೆಂಕಿ ಅಪಘಾತದಲ್ಲಿ ಕಳೆದುಕೊಂಡಿದ್ದ. ಆತ ಪ್ರಸ್ತುತ ನೌಗಾಮ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈ 14 ವರ್ಷದ ಬಾಲಕ “ನಾನು ಪ್ರತಿದಿನ ಸುಮಾರು ಎರಡು ಕಿಲೋಮೀಟರ್ ದೂರವನ್ನು ಒಂದೇ ಕಾಲಿನಲ್ಲಿ ಬ್ಯಾಲೆನ್ಸ್ ಮಾಡುತ್ತೇನೆ. ಶಾಲೆಗೆ ಹೋಗುವ ರಸ್ತೆಗಳು ಚೆನ್ನಾಗಿಲ್ಲ. ನನಗೆ ಕೃತಕವಾದ ಕಾಲು ಸಿಕ್ಕರೆ ನಡೆಯಲು ಅನುಕೂಲವಾಗುತ್ತದೆ. ಆದರೆ ನಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ನಾನು ನನ್ನ ಜೀವನದಲ್ಲಿ ಏನನ್ನಾದರೂ ಸಾಧಿಸುವ ಕನಸು ಇದೆ. ಹೀಗಾಗಿ, ಒಂದೇ ಕಾಲಿನಲ್ಲಿ ನಡೆಯುವುದನ್ನು ಕಲಿತಿದ್ದೇನೆ” ಎಂದು ಹೇಳಿದ್ದಾನೆ.

ಈ ಬಾಲಕನಿಗೆ ಸಮಾಜ ಕಲ್ಯಾಣ ಇಲಾಖೆಯು ವೀಲ್​ಚೇರನ್ನು ನೀಡಿದ್ದರೂ ತಮ್ಮ ಗ್ರಾಮದ ರಸ್ತೆ ಹದಗೆಟ್ಟ ಕಾರಣ ಅದನ್ನು ಎಂದಿಗೂ ಬಳಸಲು ಸಾಧ್ಯವಾಗಿಲ್ಲ. ನಾನು ನನ್ನ ಶಾಲೆಯನ್ನು ತಲುಪಲು ದಿನಕ್ಕೆ 2 ಕಿಲೋಮೀಟರ್ ನಡೆಯುತ್ತೇನೆ, ನನ್ನ ಶಾಲೆಗೆ ಹೋಗುವ ರಸ್ತೆ ಹಾಳಾಗಿದೆ, ನನಗೆ ನಡೆಯಲು ಕಷ್ಟವಾಗಿರುವುದರಿಂದ ಶಾಲೆಗೆ ಹೋದ ನಂತರ ನಾನು ತುಂಬಾ ಬೆವರುತ್ತೇನೆ. ಶಾಲೆ ತಲುಪಿದ ನಂತರ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ನನಗೆ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಎಂದರೆ ಇಷ್ಟ. ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಸರ್ಕಾರ ನನಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ, ನನ್ನ ಕನಸುಗಳನ್ನು ನನಸಾಗಿಸಲು ನನ್ನೊಳಗೆ ಹಠವಿದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: Viral Video: ಗರ್ಲ್​ಫ್ರೆಂಡ್​ ಜೊತೆ ಇದ್ದಾಗ ಹೆಂಡತಿ ಕೈಗೆ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ; ಆ ಯುವತಿ ಯಾರು?

ತನ್ನ ಅನುಭವಗಳನ್ನು ಮತ್ತಷ್ಟು ಹಂಚಿಕೊಂಡ 14 ವರ್ಷದ ಈ ಬಾಲಕ, “ನನ್ನ ಸ್ನೇಹಿತರು ಸರಿಯಾಗಿ ನಡೆಯುವುದನ್ನು ನೋಡಿ ನನಗೆ ನೋವಾಗುತ್ತದೆ. ಆದರೆ, ನನಗೆ ಶಕ್ತಿಯನ್ನು ನೀಡಿದ್ದಕ್ಕಾಗಿ ನಾನು ಅಲ್ಲಾನಿಗೆ (ದೇವರಿಗೆ) ಧನ್ಯವಾದ ಹೇಳುತ್ತೇನೆ. ನನ್ನ ಕಾಲು ತುಂಡಾದಾಗ ಚಿಕಿತ್ಸೆಗಾಗಿ ನನ್ನ ಅಪ್ಪ ಆಸ್ತಿಯನ್ನು ಮಾರಬೇಕಾಯಿತು. ನನಗೆ ಸರ್ಕಾರದಿಂದ ಕೃತಕ ಕಾಲು ಸಿಕ್ಕಿದರೆ ಅನುಕೂಲವಾಗುತ್ತದೆ ಎಂದು ಆ ಬಾಲಕ ಹೇಳಿದ್ದಾನೆ. ನೌಗಾಮ್ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಪರ್ವೈಜ್ ವೈದ್ಯನಾಗುವ ಗುರಿ ಹೊಂದಿದ್ದಾನೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ