ಜಗತ್ತಿನಾದ್ಯಂತ ಅನೇಕ ಆಹಾರ (Food) ಪದ್ಧತಿಗಳಿವೆ. ವಿವಿಧ ದೇಶಗಳಲ್ಲಿ ವಿವಿಧ ರೀತಿಯ ಆಹಾರಗಳನ್ನು ಸೇವಿಸಲಾಗುತ್ತದೆ. ಪುರಾತನ ಪದ್ಧತಿಯ ಆಹಾರ ಶೈಲಿ ಇಂದಿಗೂ ಹಲವು ಜನಾಂಗಗಳಲ್ಲಿ ಜಾರಿಯಲ್ಲಿದೆ. ಥಾಯ್ (Thai ) ಮತ್ತು ಲಾವೂ (Lao) ಸಂಸ್ಕೃತಿಯ ಆಹಾರ ಪದ್ಧತಿಯಲ್ಲಿ 100 ವರ್ಷದ ಹಿಂದಿನ ಮೊಟ್ಟೆಯನ್ನು ಸಂರಕ್ಷಿಸಿ ಸೇವಿಸಲಾಗುತ್ತದೆ ಎನ್ನು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ಈ ಮೊಟ್ಟೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು ಜಗತ್ತಿನಾದ್ಯಂತ ವೈರಲ್ ಆಗಿದೆ. ಇದನ್ನು ಶತಮಾನದ ಮೊಟ್ಟೆ(Century Egg) ಎಂದು ಕರೆಯಲಾಗುತ್ತದೆ. ಸುಣ್ಣ , ಉಪ್ಪು, ಜೇಡಿಮಣ್ಣು ಹಾಗೂ ಬೂದಿಗಳನ್ನು ಬಳಸಿ ಈ ಮೊಟ್ಟೆಯನ್ನು ಸುರಕ್ಷಿತವಾಗಿ ಇಡಲಾಗಿದೆ ಎಂದು ವರದಿ ತಿಳಿಸಿದೆ. ಈ ಕುರಿತು ಎನ್ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವಿಶಿಷ್ಟ ಬಗೆಯ ಮೊಟ್ಟೆಯ ಬಳಕೆ ಏಷ್ಯನ್ ಆಹಾರ ಪದ್ಧತಿಯಲ್ಲಿ ಸಾಮಾನ್ಯವಾಗಿದೆ. ಇದನ್ನು ತೋಪು, ರಮೇನ್ ಸೇರಿದಂತೆ ಹಲವು ಆಹಾರಗಳೊಂದಿಗೆ ಸೈಡ್ ಡಿಶ್ ಆಗಿ ಬಳಸಿಕೊಳ್ಳಲಾಗುತ್ತದೆ. ಇದರ ರುಚಿಯ ಬಗ್ಗೆ ವಿಡಿಯೋ ಹಂಚಿಕೊಂಡ ಮಹಿಳೆಯು ವಿವರಿಸಿದ್ದಾರೆ. ಮೊಟ್ಟೆಯ ಬಿಳಿಯ ಭಾಗವು ಕಂದು ಮತ್ತು ಜಿಲಾಟಿನಸ್ ಬಣ್ಣದಿಂದ ಕೂಡಿದೆ. ಮೊಟ್ಟೆಯ ಹಳದಿ ಭಾಗವು ಹಸಿರು ಮತ್ತು ಕೆನೆ ಬಣ್ಣದಿಂದ ಕೂಡಿದೆ. ಈ ಶತಮಾನದ ಮೊಟ್ಟೆಯ ರಚನೆ ಬಗ್ಗೆ ಇನ್ನೂ ಕುತೂಹಲವಿದೆ ಎನ್ನುತ್ತಾರೆ ಮಹಿಳೆ.
ವಿಡಿಯೋ ನೋಡಿದ ನೆಟ್ಟಿಗರು, ಅನುಮಾನ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಈ ಮೊಟ್ಟೆಯನ್ನು ನೂರು ವರ್ಷಗಳವರೆಗೆ ತಿನ್ನದೇ ಉಳಿಸಿಕೊಂಡ ಕಾರಣವೇನು? ಅಷ್ಟಕ್ಕೂ ಇದು ಕಪ್ಪು ಬಣ್ಣದಲ್ಲಿರಲು ಕಾರಣವೇನು , ನಂಬಲು ಅಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ಕಾಮೆಂಟ್ಗಳಲ್ಲಿ ಶತಮಾನದ ಮೊಟ್ಟೆಯಂತೆ ಕಾಣುವ ಮೊಟ್ಟೆ ಶತಮಾನಗಳ ಹಿಂದಿನದ್ದಲ್ಲ. ಅದನ್ನು ಕೆಲವು ತಿಂಗಳುಗಳ ಕಾಲ ಸಂರಕ್ಷಿಸಲಾಗುತ್ತದೆ. ಅದಕ್ಕೆ ಬಾತುಕೊಳಿಯ ಮೊಟ್ಟೆಯನ್ನು ಬಳಸಲಾಗುತ್ತದೆ ಅದಕ್ಕೆ ಆ ರೀತಿ ಕಾಣುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವು ಕಾಮೆಂಟ್ಗಳಲ್ಲಿ ಏಷ್ಯನ್ ಆಹಾರ ಪದ್ಧತಿಗಳಲ್ಲಿ ಸಿಗುವ ಈ ಶತಮಾನದ ಮೊಟ್ಟೆಗಳು ಅತ್ಯಂತ ರುಚಿಕರವಾಗಿರುತ್ತದೆ. ಅನ್ನದ ಜತೆ, ಸೋಯಾಗಳೊಂದಿಗೆ ಉತ್ತಮ ಕಾಂಬಿನೇಷನ್ ಆಗಿದೆ. ಹೀಗಾಗಿ ಈ ಮೊಟ್ಟೆಯು ರುಚಿಕರ ಆಹಾರವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:
ಶ್ರೀವಲ್ಲಿ ಹಾಡಿಗೆ ಕೊರಿಯನ್ ಮಹಿಳೆಯ ಸಖತ್ ಸ್ಟೆಪ್; ವಿಡಿಯೋ ವೈರಲ್