Viral Video: ‘ನಿನ್ನ ಮಗೂನ್ನೂ ಎತ್ಕೋ!’ ನಾಯಿಯನ್ನು ಒದ್ದವಳ ಮೇಲೆ ಕೋಪಗೊಂಡ ನೆಟ್ಟಿಗರು

Dog Lovers : ಒದ್ದು ಹೇಳಬೇಕಾಗಿಲ್ಲ, ಸಭ್ಯವಾಗಿ ವರ್ತಿಸಿ ಎಂದು ಕೆಲವರು, ಆಕೆ ಒದ್ದಿಲ್ಲ ಮೈದಡವಿದ್ದಾಳೆ ಎಂದು ಒಂದಿಷ್ಟು ಜನ. ಏಷಿಯಾದಲ್ಲೆಲ್ಲ ಹೀಗೇ ಎಂದು ಕೆಲವರು, ಜನರಲೈಸ್ ಮಾಡಬೇಡಿ ಎಂದು ಹಲವರು. ನೀವೇನಂತೀರಿ?

Viral Video: ನಿನ್ನ ಮಗೂನ್ನೂ ಎತ್ಕೋ! ನಾಯಿಯನ್ನು ಒದ್ದವಳ ಮೇಲೆ ಕೋಪಗೊಂಡ ನೆಟ್ಟಿಗರು
ಕಾಲಿನಿಂದ ಒದ್ದು ಮಲಗಿದ್ದ ನಾಯಿಯನ್ನು ಎಬ್ಬಿಸಿದ ಮಹಿಳೆ

Updated on: Jul 01, 2023 | 12:45 PM

Dogs : ನೆಲ ಒರೆಸುತ್ತಿದ್ದೇನೆ ಕಣ್ಣು ಕಾಣಲ್ವಾ? ಎಂದು ಮನೆಮಂದಿಯೊಬ್ಬರನ್ನು ಈಕೆ ಒದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಊಹಿಸಿಕೊಳ್ಳಿ. ಸಾಕಿದ ಹಸ್ಕಿ ನಾಯಿ (Husky) ತನ್ನ ಪಾಡಿಗೆ ನೆಲದ ಮೇಲೆ ಕುಳಿತಿದೆ. ಚಪ್ಪಲಿಗಾಲಿಯಿಂದ ಅದಕ್ಕೆ ಒದ್ದು ಎಚ್ಚರಿಸುತ್ತಾಳೆ, ಅದು ಆಸನದ ಮೇಲೆ ಕುಳಿತುಕೊಳ್ಳುತ್ತದೆ. ನಿನ್ನ ಮಗೂನ್ನ ಯಾರೋ ಎತ್ಕೋಬೇಕು? ಎಂಬಂತೆ ಸನ್ನೆ ಮಾಡುತ್ತಾಳೆ. ಬಾಸ್ಕೆಟ್​ನಲ್ಲಿದ್ದ ಮಗುವನ್ನು ಬಾಯಿಯಲ್ಲಿ ಕಚ್ಚಿಕೊಂಡು ಮೇಲೆ ಹಿಡಿದುಕೊಳ್ಳುತ್ತದೆ ಅಮ್ಮಹಸ್ಕಿ! ಇಷ್ಟೊಂದು ತಿಳಿವಳಿಕೆಯುಳ್ಳ ನಾಯಿಯೊಂದಿಗೆ ಹೀಗೆ ದುರ್ನಡತೆ ಪ್ರದರ್ಶಿಸಿದ ಈಕೆಯ ಬಗ್ಗೆ ನೆಟ್ಟಿಗರು ಕೋಪಗೊಂಡಿದ್ದಾರೆ.

ಮೂರು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 71,000ಕ್ಕೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದು, ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಏಷಿಯನ್ನರು ಸಾಮಾನ್ಯವಾಗಿ ಸಾಕುಪ್ರಾಣಿಗಳೊಂದಿಗೆ ಸ್ನೇಹಪೂರ್ವಕವಾಗಿರುವುದಿಲ್ಲ, ಯಾಕೆ ಹೀಗೆ ನಡೆದುಕೊಳ್ಳುತ್ತಾರೋ ಕಾಣೆ ಎಂದು ಒಬ್ಬರು ಹೇಳಿದ್ದಕ್ಕೆ ಇನ್ನೊಬ್ಬರು, ಅವರು ತಮ್ಮ ಮಕ್ಕಳಂತೆಯೇ ಸಾಕುಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ ಎಂದರೆ ಅರ್ಥ ಮಾಡಿಕೊಳ್ಳಿ! ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : Viral Video: ವಿಶ್ರಾಂತಿಯಲ್ಲಿದ್ದ ಪ್ರಯಾಣಿಕರ ಮುಖದ ಮೇಲೆ ನೀರು ಸುರಿಯುತ್ತಿರುವ ಪೊಲೀಸ್; ಆಕ್ರೋಶಗೊಂಡ ನೆಟ್ಟಿಗರು

ಜಗತ್ತಿನಾದ್ಯಂತ ಇಂಥದ್ದು ನಡೆಯುತ್ತಲೇ ಇರುತ್ತದೆ. ಆದರೆ ಏಷಿಯಾದ ಅನೇಕ ದೇಶಗಳಲ್ಲಿ ಇದು ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿದೆ. ಉತ್ತರ ಅಮೇರಿಕಾ ಮತ್ತು ಯುರೋಪ್​ ದೇಶಗಳಲ್ಲಿನ ನಾಯಿಗಳು ಅತ್ಯಂತ ಉತ್ತಮ ನಡೆವಳಿಕೆಯನ್ನು ಪ್ರದರ್ಶಿಸುತ್ತವೆ. ಇದಕ್ಕೆ ಕಾರಣ ಅವುಗಳ ಪೋಷಕರು ಅವುಗಳನ್ನು ಮಕ್ಕಳಂತೆ ಸಾಕುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ತನ್ನ ಹುಟ್ಟುಹಬ್ಬಕ್ಕೆ ಪ್ರತೀ ಗ್ರಾಹಕರಿಗೂ ಚಾಕೋಲೇಟ್ ಕೊಟ್ಟ ಝೊಮ್ಯಾಟೋ ಉದ್ಯೋಗಿ

ರಾಶಿಗಟ್ಟಲೆ ಪ್ರತಿಕ್ರಿಯೆಗಳು ಬಂದು ಬೀಳಲಿ ಎಂಬ ಉದ್ದೇಶದಿಂದಲೇ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನಿಸುತ್ತದೆ. ನನಗೆ ಅರ್ಥವಾಗುವ ಏಕೈಕ ಭಾಷೆ ಮಾನವೀಯತೆ. ಇಂಥ ವಿಡಿಯೋಗಳನ್ನು ನಾನು ನೋಡಬಯಸುವುದಿಲ್ಲ ಎನ್ನುವುದನ್ನು ತಿಳಿಸಲು ಇಲ್ಲಿ ಪ್ರತಿಕ್ರಿಯಿಸಿದ್ದೇನೆ ಎಂದು ಇನ್ನೂ ಒಬ್ಬರು. ಅರೆ! ಆಕೆ ಮೈದಡವಿದ್ದಾಳೆ, ಒದ್ದಿಲ್ಲ! ಎಂದು ಒಂದಿಷ್ಟು ಜನ ಆಕೆಯನ್ನು ವಹಿಸಿಕೊಂಡು ಮುಗಿಬಿದ್ದಿದ್ದಾರೆ. ಇದು ಮೈದಡವಿದ್ದಲ್ಲ, ಒದ್ದಿದ್ದು. ಸರಿಯಾಗಿ ನೋಡಿ ಎಂದು ಅನೇಕರು ಕಿಡಿಕಾರಿದ್ದಾರೆ.

ಸಾಕುನಾಯಿಗಳು ಮೌನದಲ್ಲಿ, ಕಣ್ಸನ್ನೆಯಲ್ಲಿ ಮತ್ತು ಒಂದೇ ಮಾತಿನಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತವೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:44 pm, Sat, 1 July 23