AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಏರ್ ಫ್ರೈಯರ್ ನಲ್ಲಿ ಚಹಾ ಮಾಡಿದ ಮಹಿಳೆ, ಏನ್ ತಲೆ ಗುರು ಈಕೆಯದು ಎಂದ್ರು ನೆಟ್ಟಿಗರು

ಟೀ ಬಹುತೇಕರ ಫೇವರಿಟ್‌, ಹೀಗಾಗಿ ದಿನಕ್ಕೆ ಎಷ್ಟು ಬಾರಿ ಟೀ ಕೊಟ್ಟರೂಖುಷಿಯಿಂದಲೇ ಕುಡಿಯುವ ಟೀ ಪ್ರಿಯರು ಇದ್ದಾರೆ. ಕೆಲವೊಮ್ಮೆ ಖುಷಿಯಾದಾಗ,, ತಲೆನೋವಾದಾಗ, ಟೆನ್ಶನ್‌ ಆದಾಗ ಒಂದು ಕಪ್ ಟೀ ಕೊಟ್ರೆ ಎಲ್ಲವೂ ಮರೆತೇ ಹೋಗುತ್ತದೆ. ಎಲ್ಲರೂ ಗ್ಯಾಸ್ ಅಥವಾ ಕಟ್ಟಿಗೆ ಒಲೆ ಮೇಲೆ ಟೀ ಮಾಡುವುದು ಸಹಜ..ಆದರೆ ಇಲ್ಲೊಬ್ಬಳು ಮಹಿಳೆಯೂ ಏರ್ ಫ್ರೈಯರ್ ನಲ್ಲಿ ಟೀ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದು, ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

Viral Video : ಏರ್ ಫ್ರೈಯರ್ ನಲ್ಲಿ ಚಹಾ ಮಾಡಿದ ಮಹಿಳೆ, ಏನ್ ತಲೆ ಗುರು ಈಕೆಯದು ಎಂದ್ರು ನೆಟ್ಟಿಗರು
ಸಾಯಿನಂದಾ
| Edited By: |

Updated on: Oct 19, 2024 | 6:17 PM

Share

ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಕಾಫಿ ಕುಡಿದರೇನೇ ಮನಸ್ಸಿಗೆ ನೆಮ್ಮದಿ ಎನ್ನುವವರು ಇದ್ದಾರೆ.ಚಹಾಪ್ರಿಯರು ಬಗೆಬಗೆಯ ಚಹಾಗಳನ್ನು ಹುಡುಕುತ್ತಲೇ ಇರುತ್ತಾರೆ. ಚಹಾದಲ್ಲಿ ಹಲವು ವೆರೈಟಿಗಳಿವೆ. ಮಿಲ್ಕ್ ಟೀ, ಜಿಂಜರ್ ಟೀ, ಲೆಮನ್ ಟೀ, ರೋಸ್ ಟೀ, ಮ್ಯಾಂಗೋ ಟೀ, ಕೇಸರ್ ಟೀ ಹೀಗೆ ಹಲವು ವೈರಂಟಿ ಚಹಾಗಳಿವೆ. ಅದಲ್ಲದೇ ಒಬ್ಬ ವ್ಯಕ್ತಿಗೆ ಹೋಲಿಸಿದರೆ ಮತ್ತೊಬ್ಬ ವ್ಯಕ್ತಿಯೂ ಚಹಾ ಮಾಡುವ ರೀತಿಯೇ ಭಿನ್ನವಾಗಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗ್ಯಾಸ್ ಬದಲಿಗೆ ಏರ್ ಫ್ರೈಯರ್ ನಲ್ಲಿ ಚಹಾ ಮಾಡಿದ್ದಾಳೆ.

ಇನ್ಸ್ಟಾಗ್ರಾಮ್ ಬಳಕೆದಾರ ವಿಟ್ನಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಏರ್ ಫ್ರೈಯರ್‌ನಲ್ಲಿ ಚಹಾ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೂ, ಏರ್ ಫೈಯರ್‌ನಲ್ಲಿ ಕಪ್ ಇಡುತ್ತಿರುವುದನ್ನು ಕಾಣಬಹುದು. ನಂತರದಲ್ಲಿ ಆಕೆ ಚಹಾದ ಬ್ಯಾಗ್‌ವೊಂದನ್ನು ಅದರಲ್ಲಿ ಹಾಕುತ್ತಾರೆ. ಆ ಬಳಿಕ ಒಂದು ಲೋಟದಲ್ಲಿ ನೀರನ್ನು ಹಿಡಿದು ಕಪ್‌ಗೆ ಹಾಕುತ್ತಾರೆ.

ರುಚಿಗೆ ತಕ್ಕಂತೆ ಒಂದು ಚಮಚ ಸಕ್ಕರೆಯನ್ನು ಸೇರಿಸಿ, ಏರ್ ಫೈಯರ್‌ನಲ್ಲಿ ಸಮಯವನ್ನು ಸೆಟ್ ಮಾಡುತ್ತಾರೆ. ಸಮಯವು ಪೂರ್ಣಗೊಂಡ ಬಳಿಕ ತೆಗೆದು ಕಪ್‌ಗೆ ಹಾಲನ್ನು ಸೇರಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಮಹಿಳೆಯ್ಯ್ ಮತ್ತೆ ಕಪ್ ತೆಗೆದಾಗ ಚಹಾ ಸಿದ್ಧವಾಗಿದೆ ಎಂದು ತೋರಿಸಿದ್ದಾರೆ. ಈ ವಿಡಿಯೋವು1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! ಈ ಪೋರನ ಸ್ಟಂಟಿಂಗ್ ಟ್ಯಾಲೆಂಟ್ ನೋಡಿ, ವಿಡಿಯೋ ವೈರಲ್

ನೆಟ್ಟಿಗರೊಬ್ಬರು, “ದಯವಿಟ್ಟು ಆ ಏರ್ ಫ್ರೈಯರ್ ಅನ್ನು ಸ್ವಚ್ಛಗೊಳಿಸಿ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ಟೀ ಕುಡಿದ ತಕ್ಷಣ ವಾಂತಿಯಾಗುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ಈ ಮಹಿಳೆಯ ಹೊಸ ಚಹಾ ಮಾಡುವ ವಿಧಾನವನ್ನು ಇಷ್ಟವಾಗಿಲ್ಲ, ಶಾರ್ಟ್‌ಕಟ್ ಉತ್ತಮವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮಗದೊಬ್ಬರು, ಏನ್ ತಲೆ ಗುರು ಈಕೆಯದ್ದು, ಹೀಗೆ ತರಹೇವಾರಿ ಕಾಮೆಂಟ್ ಗಳು ಬಂದಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ