ಹುಟ್ಟುಹಬ್ಬದ ಪಾರ್ಟಿಯಾಗಿರಲಿ, ಆನಿರ್ಸರಿ ಸೆಲೆಬ್ರೇಷನ್ ಆಗಿರಲಿ ಕೇಕ್ ಕಟ್ಟಿಂಗ್ ಮಾಡದೇ ಈ ಸೆಲೆಬ್ರೇಷನ್ ಪರಿಪೂರ್ಣವಾಗುವುದಿಲ್ಲ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ವಿವಿಧ ಥೀಮ್‌ಗಳಲ್ಲಿ ಕೇಕ್ ತಯಾರಿಸಿ ಬಳಿಕ ತಮ್ಮ ಸಂಪೋಷದ ಕ್ಷಣವನ್ನು ಈ ಕೇಕ್ ಕಟ್ ಮಾಡುವ ಮೂಲಕ ಆಚರಿಸುತ್ತಾರೆ. ತಿನ್ನಲು ತುಂಬಾನೇ ರುಚಿಕರವಾಗಿರುವ ಕೇಕ್ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಹೀಗಿರುವಾಗ ಅನಾರೋಗ್ಯಕರ ಕೇಕ್ ತಿನ್ನುವ ಬದಲು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಆರೋಗ್ಯಕರ ಫ್ರೂಟ್ಸ್ ಕೇಕ್ ತಯಾರಿಸಿ ತಿನ್ನಬಹುದು ಎಂಬುದನ್ನು ಇಲ್ಲೊಂದು ವೈರಲ್ ವಿಡಿಯೋದಲ್ಲಿ ತೋರಿಸಿಕೊಡಲಾಗಿದೆ.
ಈ ಕುರಿತ ವಿಡಿಯೋವನ್ನು cutty_lilly_flower ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ತಾಜಾ ಹಣ್ಣುಗಳಿಂದ ಆರೋಗ್ಯಕರ ಕೇಕ್ ತಯಾರಿಸುವುದನ್ನು ಕಾಣಬಹುದು. ಮೂರು ಲೇಯರ್ ಕೇಕ್ ತಯಾರಿಸಿಲು ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆ ಸುಳಿದು ಬಳಿ ಅದನ್ನು ಮೂರು ಅಂತರದಲ್ಲಿ ಜೋಡಿಸಿ ಅನಾನಸ್, ಸ್ಟ್ರಾಬೆರಿ, ದ್ರಾಕ್ಷಿ ಹಾಗೂ ಬ್ಲೂಬೆರಿ ಹಣ್ಣುಗಳಿಂದ ಅಲಂಕರಿಸಿದ್ದಾರೆ.
ಇದನ್ನೂ ಓದಿ: ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ; ಇದು ಏಷ್ಯಾದಲ್ಲೇ ಮೊದಲು!
ಮೇ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 41.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.7 ಮಿಲಿಯನ್ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು, ಇದಂತೂ ಎಲ್ಲರೂ ತಿನ್ನಬಹುದಾದ ಆರೋಗ್ಯಕರ ಕೇಕ್ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ