Viral Video: ಮಲಗಿದ್ದ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವ್ಯಕ್ತಿ; ಅಮಾನವೀಯ ಘಟನೆಯ ವಿಡಿಯೋ ವೈರಲ್‌

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮಧ್ಯಾಹ್ನ ಊಟ ಮಾಡಿ ನಿದ್ದೆಗೆ ಜಾರಿದಂತಹ ಕಾರ್ಮಿಕನನ್ನು ಎಚ್ಚರಗೊಳಿಸುವ ಸಲುವಾಗಿ ವ್ಯಕ್ತಿಯೊಬ್ಬ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Viral Video: ಮಲಗಿದ್ದ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವ್ಯಕ್ತಿ; ಅಮಾನವೀಯ ಘಟನೆಯ ವಿಡಿಯೋ ವೈರಲ್‌
Follow us
| Updated By: ಅಕ್ಷತಾ ವರ್ಕಾಡಿ

Updated on: Jun 04, 2024 | 12:11 PM

ಸಮಾಜ ಎಷ್ಟೇ ಮುಂದುವರೆದಿದ್ದರೂ ಆಗೊಮ್ಮೆ ಈಗೊಮ್ಮೆ ಈ ನಾಗರಿಕ ಸಮಾಜ ತಲೆತಗ್ಗಿಸುವ ಹಾಗೂ ಅಮಾನವೀಯ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹದೇ ಅಮಾನವೀಯ ಘಟನೆಯೊಂದು ನಡೆದಿದ್ದು, ಮಧ್ಯಾಹ್ನ ಊಟ ಮಾಡಿ ಹಾಯಾಗಿ ಮಲಗಿದ್ದಂತಹ ಕಾರ್ಮಿಕನನ್ನು ಎಬ್ಬಿಸಲು ವ್ಯಕ್ತಿಯೊಬ್ಬ ಆತನ ಮುಖದ ಮೇಲೆಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ವರದಿಗಳ ಪ್ರಕಾರ, ಈ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿನ ದುಬಗ್ಗಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಲೋಡ್‌ ಮಾಡುವ ಮತ್ತು ಇಳಿಸುವ ಕಾಯಕವನ್ನು ಮಾಡುತ್ತಿದ್ದ ರಾಜ್‌ಕುಮಾರ್‌ ರಾವತ್‌ ಮಧ್ಯಾಹ್ನ ಊಟ ಮಾಡಿ ಹಾಯಾಗಿ ಮಲಗಿದ್ದನು. ನಿದ್ದೆಯಿಂದ ಈತ ಎಚ್ಚರಗೊಳ್ಳದಿದ್ದಾಗ ಸಂಜಯ್‌ ಮೌರ್ಯ ಎಂಬಾತ ಕೋಪದಿಂದ ಈತನ ಮುಖದ ಮೇಲೆಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ. ಜೊತೆಗೆ ದೈಹಿಕ ಹಲ್ಲೆಯನ್ನು ಕೂಡಾ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಅಮಾನವೀಕ ಘಟನೆಯ ಬಳಿಕ ಜೂನ್‌ 02 ರಂದು ರಾಜ್‌ಕುಮಾರ್‌ ಪತ್ನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕ್ಷಿಪ್ರಗತಿಯಲ್ಲಿ ತನಿಖೆಯನ್ನು ಆರಂಭಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್‌ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ ಕರೆಂಟ್‌ ಶಾಕ್‌ ಕೊಟ್ಟ ಪತ್ನಿ

ರಾಜ್‌ಕುಮಾರ್‌ ರಾವತ್‌ ಮತ್ತು ಸಂಜಯ್‌ ಮೌರ್ಯ ಇಬ್ಬರೂ ಪರಿಚಿತರು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಮಧ್ನಾಹ್ಯದ ಮೇಲೆ ಮದ್ಯ ಕುಡಿದು ಇಬ್ಬರೂ ಮಲಗಿದ್ದರು. ಇದೇ ನಶೆಯಲ್ಲಿ ಮೌರ್ಯ ಹಾಯಾಗಿ ಮಲಗಿದ್ದ ರಾವತ್‌ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ