AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯುವ ನೀರಿಗೆ ಕೋಟಿ ಹಣ ಖರ್ಚು ಮಾಡುತ್ತಾರೆ ನೀತಾ ಅಂಬಾನಿ; ವಾಟರ್ ಬಾಟಲ್​​ ಹೇಗಿದೆ ನೋಡಿ

ಆಗರ್ಭ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್​​ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಕುಡಿಯುವ ನೀರಿಗೆ ಕೋಟಿ ಹಣ ಖರ್ಚು ಮಾಡುತ್ತಿದ್ದು, ಚಿನ್ನದಿಂದ ವಿನ್ಯಾಸಗೊಳಿಸಿದ ಅವರ ವಾಟರ್​​ ಬಾಟಲ್​​​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿತ್ತಿದೆ.

ಕುಡಿಯುವ ನೀರಿಗೆ ಕೋಟಿ ಹಣ ಖರ್ಚು ಮಾಡುತ್ತಾರೆ ನೀತಾ ಅಂಬಾನಿ; ವಾಟರ್ ಬಾಟಲ್​​ ಹೇಗಿದೆ ನೋಡಿ
Nita Ambani
ಅಕ್ಷತಾ ವರ್ಕಾಡಿ
|

Updated on: Jun 04, 2024 | 10:56 AM

Share

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದೇಶದ ಅತ್ಯಂತ ಶ್ರೀಮಂತ ದಂಪತಿ. ನೀತಾ ಅಂಬಾನಿ ಧರಿಸುವ ಬಟ್ಟೆಯಿಂದ ಹಿಡಿದು ವಾಚ್, ಆಭರಣಗಳ ತನಕ ಪ್ರತಿಯೊಂದು ವಸ್ತುವೂ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚಿಗಷ್ಟೇ ಕಿರಿಯ ಪುತ್ರನ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ 600 ಕೋಟಿ ರೂ. ಬೆಲೆ ಬಾಳುವ ಪಚ್ಚೆಗಳಿಂದ ಕೂಡಿದ ವಜ್ರದ ನೆಕ್ಲೇಸ್ ತೊಟ್ಟು ಮಿಂಚಿದ್ದರು. 60ನೇ ವಯಸ್ಸಿನಲ್ಲೂ ಯಂಗ್​​ ಲೇಡಿಯಂತೆ ಕಾಣುವ ನೀತಾ ಅಂಬಾನಿ ಕುಡಿಯುವ ನೀರಿನ ಬೆಲೆ ಇದೀಗ ಭಾರೀ ಸೆನ್ಸೇಷನ್ ಕ್ರಿಯೇಟ್​​ ಮಾಡಿದೆ.

ಆಗರ್ಭ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್​​ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಕುಡಿಯುವ ನೀರಿಗೆ ಕೋಟಿ ಹಣ ಖರ್ಚು ಮಾಡುತ್ತಿದ್ದು, ಚಿನ್ನದಿಂದ ವಿನ್ಯಾಸಗೊಳಿಸಿದ ಅವರ ವಾಟರ್​​ ಬಾಟಲ್​​​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿತ್ತಿದೆ.

ಜನಪ್ರಿಯ ಡಿಸೈನರ್ ಫರ್ನಾಂಡೋ ಅಲ್ಟಾಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ ನೀತಾ ಅಂಬಾನಿ ನೀರು ಕುಡಿಯುತ್ತಾರಂತೆ. ವರದಿಗಳ ಪ್ರಕಾರ 750 ಮೀ.ಲೀಟರ್ ನೀರು ತುಂಬಿಸಲಾಗುವ ವಾಟರ್​​ ಬಾಟಲ್​ ಇದಾಗಿದ್ದು, ಈ ಬಾಟಲ್ ಅನ್ನು 24 ಕ್ಯಾರೆಟ್ ಚಿನ್ನದಿಂದ ಸಿದ್ಧಪಡಿಸಲಾಗಿದೆ. ಹಾಗೆಯೇ ಈ ಬಾಟಲ್ ಒಳಗಿನ ನೀರಿಗೆ ಕೂಡ 5ಗ್ರಾಂ ಚಿನ್ನವನ್ನು ಸೇರಿಸಲಾಗುತ್ತದೆ. ಈ ಬಾಟಲ್​ ಬೆಲೆ ಬರೋಬ್ಬರಿ 49 ಲಕ್ಷ ರೂ. ಎಂದು ವರದಿಯಾಗಿದೆ.

ಇದನ್ನೂ ಓದಿ: ಮೊಬೈಲ್‌ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ ಕರೆಂಟ್‌ ಶಾಕ್‌ ಕೊಟ್ಟ ಪತ್ನಿ

ಆದರೆ ನೀತಾ ಅಂಬಾನಿ ನಿಜವಾಗಿಯೂ ಈ ದುಬಾರಿ ನೀರನ್ನು ಕುಡಿಯುತ್ತಾರಾ? ಎಂಬುದು ಖಚಿತವಾಗಿಲ್ಲ. ಯಾಕೆಂದರೆ 2015ರ ಐಪಿಎಲ್ ಪಂದ್ಯದ ಸಮಯದಲ್ಲಿ ಸಾಮಾನ್ಯ ನೀರಿನ ಬಾಟಲ್​​ ಅಲ್ಲಿ ನೀರು ಕುಡಿಯುವ ಫೋಟೋ ವೈರಲ್​ ಆಗಿತ್ತು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ