ಮದುವೆ ಎಂದರೇನೇ ಹಾಗೆ ಸಂಭ್ರಮ ಸಡಗರ ಓಡಾಟಗಳು ಇದ್ದೇ ಇರುತ್ತದೆ. ಇತ್ತೀಚೆಗಂತೂ ಸೆಲ್ಫಿ ಫೋಟೋಗಳ ಟ್ರೆಂಡ್ ಹೆಚ್ಚಾಗಿ ಬಿಟ್ಟಿದೆ. ಸಂಭ್ರಮಕ್ಕಿಂತ ಹೆಚ್ಚಾಗಿ ಫೋಟೋ ತೆಗೆದು ಪೋಸ್ಟ್ ಮಾಡುವುದೇ ಹೆಚ್ಚಾಗಿದೆ. ಇತ್ತೀಚೆಗೆ ವಧು- ವರರ ಫೋಟೋ ತೆಗೆಯಲು ಹೋದ ಮಹಿಳೆ ಚರಂಡಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್ ಆಗಿ ವೈರಲ್ ಆಗಿದೆ. ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಫೋಟೋಗ್ರಾಫರ್ ಬೀಳುವುದು, ವರನ ಪಂಚೆ ಉದುರಿರುವ ಇಂತಹ ಸಾಕಷ್ಟು ಮುಜುಗರಕ್ಕೀಡು ಮಾಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆ ವಧು ವರರು ಹೊರಗಡೆ ಬರುವಾಗ ಅವರ ಮುಂದಿನಿಂದಲೇ ಮಹಿಳೆಯೊಬ್ಬಳು ವಿಡಿಯೋ ಮಾಡಿಕೊಂಡು ಬರುವುದನ್ನು ಕಾಣಬಹುದು. ಈಕೆ ವಿಡಿಯೋ ಮಾಡಿಕೊಂಡು ಹಿಂದೆ ಹಿಂದೆ ಬಂದು ನೇರವಾಗಿ ಚರಂಡಿಗೆ ಬಿದ್ದಿದ್ದಾಳೆ. ಅಲ್ಲಿದವರು ಆಕೆಯನ್ನು ತಕ್ಷಣ ಮೇಲಕ್ಕೆ ಎತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ವಿಐಪಿ ಕಾರಿನಲ್ಲಿ ಬಂದು G20 ಸಮಾವೇಶದಿಂದ ಹೂ ಕುಂಡಗಳನ್ನು ಕದ್ದ ಖತರ್ನಾಕ್ಗಳು!
ಈ ವೀಡಿಯೊ 10.5 ಮಿಲಿಯನ್ಗಿಂತೂ ಹೆಚ್ಚಿನ ವೀಕ್ಷಣೆ ಪಡೆದಿದೆ. ಜೊತೆಗೆ ಸಾಕಷ್ಟು ಲೈಕ್, ಕಾಮೆಂಟ್ಗಳನ್ನು ಕಾಣಬಹುದು. ಫೋಟೋ ತೆಗೆಯಲು ಜನರು ಏಕೆ ಇಷ್ಟೊಂದು ಉತ್ಸುಕರಾಗುತ್ತಾರೆ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾನೆ. ಇನ್ನೊಬ್ಬ ಅವಳಿಗೆ ಏನು ಗಾಯವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:31 am, Wed, 1 March 23