ಡ್ರೈವರ್ ಸೀಟ್ ಬಿಟ್ಟು ಕೊಡದೇ ಬೇರೆ ಸೀಟಿನಲ್ಲಿ (drivers seat) ಕುಳಿತುಕೊಂಡು ಬಸ್ ಓಡಿಸುವಂತೆ ಚಾಲಕನಿಗೆ ಓರ್ವ ಮಹಿಳೆ ಎಚ್ಚರಿಕೆ ನೀಡಿರುವಂತಹ ತಮಾಷೆಯ ಘಟನೆ ಉತ್ತರ ಭಾರತದಲ್ಲಿ ನಡೆದಿದೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶಿರೀಶ್ ಥೋರತ್ ಎನ್ನುವವರು ಅಪ್ಲೋಡ್ ಮಾಡಿದ್ದಾರೆ. ಆಸನದ ವಿಚಾರವಾಗಿ ಮಹಿಳೆ ಮತ್ತು ಬಸ್ ಚಾಲಕನ ಮಧ್ಯೆ ವಾಗ್ವಾದ ಉಂಟಾಗಿದೆ. ಈ ವೇಳೆ ಅಲ್ಲೇ ಇದ್ದ ಇತರೆ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಸ್ಸಿನ ಚಾಲಕ ಸೀಟಿನಲ್ಲಿ ಮಹಿಳೆ ಕುಳಿತುಕೊಂಡಿರುವುದನ್ನು ನಾವು ನೋಡಬಹುದು. ಬಸ್ನ್ನು ಟರ್ಮಿನಲ್ ಬಳಿ ಚಾಲಕ ನಿಲ್ಲಿಸಿ ಹೋಗಿದ್ದಾನೆ. ಚಾಲಕ ಹಿಂತಿರುಗಿ ಬರುವುದರೊಳಗೆ ಮಹಿಳೆ ತನ್ನ ಸೀಟಿನಲ್ಲಿ ಕುಳಿತಿರುವುದನ್ನು ನೋಡಿ ಸೀಟ್ ಬಿಡುವಂತೆ ಹೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ಚಾಲಕನೊಂದಿಗೆ ವಾದಿಸಲು ಆರಂಭಿಸುತ್ತಾಳೆ.
ಇನ್ನು ಬಸ್ನಲ್ಲಿ ಮಹಿಳೆಯೊಂದಿಗೆ ಅತ್ತೆ ಕೂಡ ಪ್ರಯಾಣಿಸುತ್ತಿದ್ದಾರೆ. ಅತ್ತೆಗೆ ಹಿಂದಿನ ಬದಿಯಲ್ಲಿ ಸೀಟ್ ಸಿಕ್ಕಿದ್ದು, ಮಹಿಳೆ ಡ್ರೈವರ್ ಸೀಟಿನಲ್ಲಿ ಕುಳಿತುಕೊಂಡಿದ್ದಾಳೆ. ಬಸ್ ಚಾಲಕ ಮಹಿಳೆಗೆ ಸೀಟ್ ಬಿಟ್ಟುಕೊಡುವಂತೆ ಎಷ್ಟೇ ಹೇಳಿದರು ಕೇಳುವುದಿಲ್ಲ. ಬದಲಿಗೆ ಯಾಕೆ ಈ ಸೀಟ್ನಲ್ಲಿ ಕುಳಿತುಕೊಳ್ಳಬಾರದು ಎಂದು ವಾದಿಸಿದ್ದಾಳೆ. ಸ್ವಲ್ಪ ಸಮಯದ ನಂತರ ಅತ್ತೆ ಕೂಡ ವಾಗ್ವಾದಕ್ಕೆ ಇಳಿಯುತ್ತಾಳೆ. ಎರಡನೇ ಸೀಟಿನಲ್ಲಿ ಕುಳಿತಿರುವ ಅತ್ತೆ ಮತ್ತೊಂದು ಸೀಟಿನಿಂದ ಬಸ್ ಓಡಿಸುವಂತೆ ಚಾಲಕನಿಗೆ ಹೇಳುವುದನ್ನು ಕೇಳಬಹುದಾಗಿದೆ.
ಇದನ್ನೂ ಓದಿ: ಟಿಕೆಟ್ ಕೊಡುವಂತೆ ಕಿರುಕುಳ ನೀಡಿದ ಆರೋಪದಡಿ ಟಿಟಿಇ ಅಮಾನತು
Indian travel diaries ??? Lady and her bahu board a bus and bahu sits in the driver’s seat. When the driver asks her to vacate the seat both ladies refuse and ask him to drive the bus from any other seat ???
Only in India ! pic.twitter.com/NXScZnUlBG— Shirish Thorat (@shirishthorat) March 12, 2023
ಇದನ್ನೂ ಓದಿ: Viral News: ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತೇ ಎಂದು ಈತ ಮಾಡಿದ ಕೆಲಸ ಏನು ಗೊತ್ತಾ?
ಇಡೀ ಬಸ್ ಖಾಲಿ ಇದೆ. ಆದರೆ ಮಹಿಳೆ ಮಾತ್ರ ಚಾಕನ ಸೀಟ್ನಲ್ಲಿ ಕುಳಿತುಕೊಳ್ಳಲು ಬಯಸುತ್ತಿರುವುದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಹೀಗೆ ಮಾಡಲಾಗುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ವಿಡಿಯೋ ವೈರಲ್ ಆಗಿರುವುದು ಬಹುಶಃ ಇದೇ ಮೊದಲಿರಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:19 pm, Wed, 15 March 23