Video: ಶಾರ್ಟ್ಸ್ ಧರಿಸಿದ್ದು ತಪ್ಪಾ? ಬಟ್ಟೆಯ ಕಾರಣಕ್ಕೆ ಇಂಟರ್​ವ್ಯೂನಲ್ಲಿ ರಿಜೆಕ್ಟ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 21, 2024 | 5:44 PM

ಕೆಲವೊಂದು ಬಾರಿ ಡ್ರೆಸ್ಸಿಂಗ್ ಕಾರಣದಿಂದಲೂ ಉದ್ಯೋಗ ಸಂದರ್ಶನದಲ್ಲಿ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವತಿ ಕೂಡಾ ಫಾರ್ಮಲ್ ಬಟ್ಟೆ ಬಿಟ್ಟು ತನ್ನಿಷ್ಟದ ಶಾರ್ಟ್ಸ್ ಧರಿಸಿ ಜಾಬ್ ಇಂಟರ್​ವ್ಯೂಗೆ ಹೋಗಿದ್ದು, ಸರಿಯಾದ ಬಟ್ಟೆ ಧರಿಸಿಲ್ಲವೆಂದು ಆಕೆಯನ್ನು ಸಂದರ್ಶಕರು ರಿಜೆಕ್ಟ್ ಮಾಡಿದ್ದಾರೆ. ಇದರಿಂದ ಆಕೆ ಶಾರ್ಟ್ಸ್ ಧರಿಸಿದ್ದೇ ತಪ್ಪಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾಳೆ.

Video: ಶಾರ್ಟ್ಸ್ ಧರಿಸಿದ್ದು ತಪ್ಪಾ? ಬಟ್ಟೆಯ ಕಾರಣಕ್ಕೆ ಇಂಟರ್​ವ್ಯೂನಲ್ಲಿ ರಿಜೆಕ್ಟ್
ವೈರಲ್​​ ವಿಡಿಯೋ
Follow us on

ಉದ್ಯೋಗ ಸಂದರ್ಶನಗಳಿಗೆ ಸಿದ್ಧರಾಗಿ ಹೋಗುವಾಗ ಕೆಲವೊಂದು ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಉದ್ಯೋಗವಾಗಿರಲಿ ಸಂದರ್ಶನದ ಸಮಯದಲ್ಲಿ ನಿರ್ದಿಷ್ಟವಾಗಿ ಫಾರ್ಮಲ್ ಬಟ್ಟೆಗಳನ್ನೇ ಧರಿಸಬೇಕಾಗುತ್ತದೆ. ಒಟ್ಟಾರೆಯಾಗಿ ಇಂಟರ್ ವ್ಯೂ ಹೋದ್ರೆ ಡ್ರೆಸ್ಸಿಂಗ್ ಕಾರಣಕ್ಕೂ ಕೂಡಾ ಸಂದರ್ಶನದಲ್ಲಿ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಕೂಡಾ ಅದೇನಾಗುತ್ತೆ ನೋಡುವ ಅಂತಾ ಫಾರ್ಮಲ್ ಬಟ್ಟೆ ಬಿಟ್ಟು ತನ್ನಿಷ್ಟದ ಶಾರ್ಟ್ಸ್ ಧರಿಸಿ ಉದ್ಯೋಗ ಸಂದರ್ಶನಕ್ಕೆ ಹೋಗಿದ್ದು, ಡ್ರೆಸ್ಸಿಂಗ್‌ನಿಂದಾಗಿ ಆಕೆ ಇಂಟರ್ ವ್ಯೂನಲ್ಲಿ ರಿಜೆಕ್ಟ್ ಆಗಿದ್ದಾಳೆ. ಇದರಿಂದ ಬೇಸರಗೊಂಡ ಆಕೆ ಶಾರ್ಟ್ಸ್ ಧರಿಸಿದ್ದು ಬಿಟ್ರೇ ಇನ್ಯಾವುದೇ ತಪ್ಪು ಮಾಡಿಲ್ಲ ಎಂದು ಬಟ್ಟೆಯ ಕಾರಣಕ್ಕೆ ಉದ್ಯೋಗ ಸಂದರ್ಶನದಲ್ಲಿ ರಿಜೆಕ್ಟ್ ಆಗಿದ್ದಕ್ಕೆ ತನ್ನ ಆಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹೊರ ಹಾಕಿದ್ದಾಳೆ.

ಶಾರ್ಟ್ಸ್ ಧರಿಸಿದ್ದಕ್ಕಾಗಿ ಉದ್ಯೋಗ ಸಂದರ್ಶನದಲ್ಲಿ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಟೈರೆಶಿಯಾ ಎಂಬ ಮಹಿಳೆ ಹೇಳಿಕೊಂಡಿದ್ದಾಳೆ. ಸರಿಯಾದ ಬಟ್ಟೆ ಧರಿಸಿ ನಾಳೆ ಸಂದರ್ಶನಕ್ಕೆ ಬರಬಹದು ಎಂದು ಸಂದರ್ಶನಕಾರರು ಹೇಳಿದ್ದರು. ಆದ್ರೆ ನಾನೇ ಈ ಆಫರ್ ಅನ್ನು ರಿಜೆಕ್ಟ್ ಮಾಡಿದೆ ಎಂದು ಟಿಕ್ ಟಾಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಈ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಸಂದರ್ಶನದಲ್ಲಿ ಧರಿಸಬೇಕಾದ ಉಡುಪಿನ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್ ಒಂದನ್ನು heyyitsjanea ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಟೈರೆಶಿಯಾ ತನ್ನ ಜಾಬ್ ಇಂಟರ್​ವ್ಯೂ ಅನುಭವವನ್ನು ಹಂಚಿಕೊಳ್ಳುವಂತ ದೃಶ್ಯವನ್ನು ಕಾಣಬಹುದು. ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿ ನಾನು ಸಂದರ್ಶನಕ್ಕೆ ಹಾಜರಾಗಿದ್ದೆ. ಅದು ಬಿಟ್ರೆ ಯಾವುದೇ ಯಾವುದೇ ತಪ್ಪು ಮಾಡಿಲ್ಲ, ಇಷ್ಟಕ್ಕೆ ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಭಾರೀ ಮಳೆಗೆ ರಸ್ತೆ ಕಾಣದೆ ಚರಂಡಿ ಗುಂಡಿಗೆ ಬಿದ್ದ ಮಗು ಮತ್ತು ಮೂರು ಮಹಿಳೆಯರು

ಆಗಸ್ಟ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 34.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಸಂದರ್ಶನಕ್ಕೆ ಶಾರ್ಟ್ಸ್ ಧರಿಸುವುದು ಸಂಪೂರ್ಣವಾಗಿ ಹುಚ್ಚುತನವಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಶಾರ್ಟ್ಸ್ ಧರಿಸುವುದರಲ್ಲಿ ಏನೂ ತಪ್ಪಿದೆ ಎಂದು ಆಕೆಯ ಪರ ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ