Video: ಭಾರೀ ಮಳೆಗೆ ರಸ್ತೆ ಕಾಣದೆ ಚರಂಡಿ ಗುಂಡಿಗೆ ಬಿದ್ದ ಮಗು ಮತ್ತು ಮೂರು ಮಹಿಳೆಯರು
ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ಆ ನೀರು ರಸ್ತೆಯಲ್ಲಿ ತುಂಬಿ ಹೋಗುತ್ತದೆ. ಹೀಗೆ ಮಳೆ ನೀರಿನಿಂದ ರಸ್ತೆ ಕಾಣದೆ ಅಪಘಾತಗಳು ಸಂಭವಿಸಿದ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದೇ ಘಟನೆಯೊಂದು ನಡೆಸಿದ್ದು, ಆಕಡೆಯಿಂದ ರಸ್ತೆ ದಾಟಿ ಈ ಕಡೆ ಬರುತ್ತಿದ್ದ ಮೂವರು ಮಹಿಳೆಯರು ಭಾರೀ ಮಳೆಗೆ ರಸ್ತೆ ಕಾಣದೆ ಮಗುವಿನ ಸಮೇತ ರಸ್ತೆ ಮಧ್ಯದಲ್ಲಿದ್ದ ತೆರೆದ ಚರಂಡಿ ಹೊಂಡಕ್ಕೆ ಬಿದ್ದಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ರಸ್ತೆ ಪಕ್ಕದಲ್ಲಿನ ತೆರೆದ ಚರಂಡಿ ಗುಂಡಿಗಳನ್ನು ಮುಚ್ಚುವುದು ಅಥವಾ ಚರಂಡಿ ದುರಸ್ತಿಯ ಸಮಯದಲ್ಲಿ ಬ್ಯಾರಿಕೇಡ್ ಇಲ್ಲವೇ ಎಚ್ಚರಿಕೆಯ ಫಲಕವನ್ನು ಅಳವಡಿಸಿವುದು ಅಧಿಕಾರಿಗಳ ಕರ್ತವ್ಯ. ಹೀಗೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ ಚರಂಡಿ ಗುಂಡಿಗಳಿಗೆ ಬಿದ್ದು ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಂತೂ ಈ ಸಮಸ್ಯೆ ತೀರಾ ಹೆಚ್ಚಿರುತ್ತದೆ. ಹೌದು ಮಳೆ ನೀರಿಗೆ ರಸ್ತೆ ಕಾಣದೆ ಕೆಲವೊಬ್ಬರು ಸೀದಾ ಚರಂಡಿ ಗುಂಡಿಗೆ ಕಾಲಿಟ್ಟು ಬಿಡುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆಯೂ ನಡೆದಿದ್ದು, ಆಕಡೆಯಿಂದ ರಸ್ತೆ ದಾಟಿ ಈ ಕಡೆ ಬರುತ್ತಿದ್ದ ಮೂವರು ಮಹಿಳೆಯರು ಭಾರೀ ಮಳೆಗೆ ರಸ್ತೆ ಕಾಣದೆ ಮಗುವಿನ ಸಮೇತ ಆ ಮೂವರು ದೊಪ್ಪನೆ ತೆರೆದ ಚರಂಡಿ ಹೊಂಡಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರ ಸಹಾಯಕ್ಕೆ ಧಾವಿಸಿ ಮಗು ಮತ್ತು ಆ ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಸಂಜೆ (ಆ. 20) ತಮಿಳುನಾಡಿನ ಸತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಮಳೆ ನೀರು ರಸ್ತೆ ಪೂರ್ತಿ ತುಂಬಿದ್ದರಿಂದ ರಸ್ತೆ ಕಾಣದೆ ಮೂವರು ಮಹಿಳೆಯರು ಮಗುವಿನ ಸಮೇತ ತೆರೆದ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಚರಂಡಿ ನಿರ್ಮಾಣಕ್ಕಾಗಿ ರಾಜ್ಯ ಹೆದ್ದಾರಿ ಇಲಾಖೆಯು ರಸ್ತೆ ಪಕ್ಕ ಸುಮಾರು ಮೂರು ಅಡಿ ಆಳದ ಕಂದಕವನ್ನು ಅಗೆದಿತ್ತು. ಆದರೆ ಅಲ್ಲಿ ಯಾವುದೇ ರೀತಿಯ ಬ್ಯಾರಿಕೇಡ್ ಅಥವಾ ಇನ್ನಾವುದೇ ಎಚ್ಚರಿಕೆ ಫಲಕವನ್ನು ಆಳವಡಿಸಿರಲಿಲ್ಲ. ಇದರಿಂದ ರಸ್ತೆ ದಾಟುವಾಗ ಮಳೆ ನೀರಿಗೆ ರಸ್ತೆ ಕಾಣದೆ ಮಹಿಳೆಯರು ಚರಂಡಿ ಗುಂಡಿಗೆ ಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಅದೃಷ್ಟವಶಾತ್ ಈ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಅಲ್ಲಿದ್ದ ಅಂಗಡಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
3 #women, carrying #infants, #fell into #rainwater-filled #trench dug up by State #Highways for building storm water drainage on #Madurai Road in #Sattur on Tuesday evening. People in vicinity #rescued them from three-foot-deep pit left without any #caution #signages. @THChennai pic.twitter.com/iKjQn9qOK9
— Sundar Subbiah (@SundarSubbiah) August 21, 2024
ಈ ಕುರಿತ ಪೋಸ್ಟ್ ಒಂದನ್ನು ಸುಂದರ್ ಸುಬ್ಬಯ್ಯ (Sundar Subbiah) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಮೂವರು ಮಹಿಳೆಯರು ಅತ್ತ ಕಡೆಯಿಂದ ಇತ್ತ ಕಡೆ ಬರಲು ರಸ್ತೆ ದಾಟುತ್ತಿರುವ ದೃಶ್ಯವನ್ನು ಕಾಣಬಹುದು. ಭಾರೀ ಮಳೆಯ ಕಾರಣ ರಸ್ತೆ ತುಂಬೆಲ್ಲಾ ನೀರು ತುಂಬಿದ್ದರಿಂದ ಸರಿಯಾಗಿ ರಸ್ತೆ ಕಾಣದೆ ಆ ಮೂವರು ಮಗುವಿನ ಸಮೇತ ಚರಂಡಿ ಗುಂಡಿಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಓಡಿ ಹೋಗಿ ಆ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಅಮ್ಮನ ಜತೆ ನನ್ನನ್ನೂ ಮಣ್ಣು ಮಾಡಿ, ಅವಳನ್ನು ಬಿಟ್ಟಿರಲಾರೆ, ತಾಯಿ ದೇಹವನ್ನು ಬಿಗಿದಪ್ಪಿದ ಕೋತಿ ಮರಿ
ದುರಸ್ತಿಯ ವೇಳೆ ಚರಂಡಿಯ ಸುತ್ತಲೂ ಎಚ್ಚರಿಕೆಯ ಫಲಕಗಳು ಮತ್ತು ಬ್ಯಾರಿಕೇಡ್ ಗಳನ್ನು ಅಳವಡಿಸದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ