40 ನಿಮಿಷಗಳ ಕಾಲ ಸತ್ತು ಬದುಕಿದ ಮಹಿಳೆ, ಸಾವಿನ ನಂತರದ ಅನುಭವ ಹಂಚಿಕೊಂಡ ಮೂರು ಮಕ್ಕಳ ತಾಯಿ

|

Updated on: Dec 29, 2023 | 11:33 AM

ಮೂರು ಮಕ್ಕಳ ತಾಯಿ 40 ನಿಮಿಷ ಸತ್ತು ಬದುಕಿರುವ ಘಟನೆ ಬ್ರಿಟನ್​​​​ನಲ್ಲಿ ನಡೆದಿದೆ. ಕಿರ್ಸ್ಟಿ ಬೋರ್ಟೋಫ್ಟ್ ಎಂಬ ಮಹಿಳೆ ಹೃದಯ ಸ್ತಂಭಗೊಂಡು 40 ನಿಮಿಷಗಳ ಕಾಲ ನಿರ್ಜೀವಗೊಂಡಿದ್ದಾರೆ. ಈ ಬಗ್ಗೆ ಆಕೆಯ ಗಂಡ ಸ್ಟು ಮಾಹಿತಿ ನೀಡಿದ್ದಾರೆ.

40 ನಿಮಿಷಗಳ ಕಾಲ ಸತ್ತು ಬದುಕಿದ ಮಹಿಳೆ, ಸಾವಿನ ನಂತರದ ಅನುಭವ ಹಂಚಿಕೊಂಡ ಮೂರು ಮಕ್ಕಳ ತಾಯಿ
ಕಿರ್ಸ್ಟಿ ಬೋರ್ಟೋಫ್ಟ್
Follow us on

ಮೂರು ಮಕ್ಕಳ ತಾಯಿ 40 ನಿಮಿಷ ಸತ್ತು ಬದುಕಿರುವ ಘಟನೆ ಬ್ರಿಟನ್​​​​ನಲ್ಲಿ ನಡೆದಿದೆ. ಕಿರ್ಸ್ಟಿ ಬೋರ್ಟೋಫ್ಟ್ ಎಂಬ ಮಹಿಳೆ ಹೃದಯ ಸ್ತಂಭಗೊಂಡು 40 ನಿಮಿಷಗಳ ಕಾಲ ನಿರ್ಜೀವಗೊಂಡಿದ್ದಾರೆ. ಈ ಬಗ್ಗೆ ಆಕೆಯ ಗಂಡ ಸ್ಟು ಮಾಹಿತಿ ನೀಡಿದ್ದಾರೆ. ರಾತ್ರಿ ಆಕೆ ಸೋಫಾದ ಮೇಲೆ ಮಲಗಿರುವ ವೇಳೆ ಹೃದಯ ಸ್ತಂಭನವಾಗಿದೆ. ತಕ್ಷಣ ಈ ಬಗ್ಗೆ ವೈದ್ಯರಿಗೆ ತಿಳಿಸಿ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಸಮಯದಲ್ಲಿ ಆಕೆ ಉಸಿರು ನಿಲ್ಲಿಸಿದ್ದಳು. ಅದರೂ ಆಸ್ಪತ್ರೆ ಕರೆದುಕೊಂಡು ಹೋಗಿ ಕೊನೆ ಪಯತ್ನ ಮಾಡಲಾಗಿದೆ. ಆದರೆ ವೈದ್ಯರು ಜೀವ ಹೋಗಿದೆ ಎಂದು ಹೇಳಿದ್ದಾರೆ. ಆಕೆಯ ಅಂತ್ಯಕ್ರಿಯೆ ಸಿದ್ದತೆ ಮಾಡುಕೊಳ್ಳಿ ಎಂದು ವೈದ್ಯರು ಹೇಳಿದಾಗ, ನನ್ನ ಪತಿ ಎಚ್ಚರಗೊಂಡಿದ್ದಾಳೆ. ಆ 40 ನಿಮಿಷದ ನಂತರ ಆಕೆಗೆ ಬದುಕಿದ್ದಾಳೆ. ಈ ಸಂದರ್ಭದಲ್ಲಿ ಆಕೆ ತನ್ನ ದೇಹದಲ್ಲಿ ಆಗಿರುವ ಅನೇಕ ವಿಚಾರಗಳನ್ನು ನನ್ನ ಜತೆಗೆ ಹಂಚಿಕೊಂಡಿದ್ದಾಳೆ. ತನ್ನ ಚರ್ಮ ಹಾಗೂ ದೇಹದ ಒಳಗೆ ಆಗಿರುವ ವಿಚಿತ್ರ ಬದಲಾವಣೆಗಳನ್ನು ವಿವರಿಸಿದ್ದಾಳೆ. ಈ 40 ನಿಮಿಷದಲ್ಲಿ ಸತ್ತ ಅವಳು ಏನನ್ನು ನೋಡಿದಳು ಎಂಬ ಕುತೂಹಲ ಸಂಗತಿಗಳನ್ನು ಹಂಚಿಕೊಂಡಿದ್ದಾಳೆ.

ನನಗೆ ಆ ರಾತ್ರಿ ಹೃದಯ ಸ್ತಂಭನ ಉಂಟಾದಾಗ, ತುಂಬಾ ನಿರ್ಣಯಕವಾಗಿತ್ತು. ನನ್ನ ದೇಹದಲ್ಲಿ ಏನೋ ಸಂಕಟ, ಎಲ್ಲ ಕತ್ತಲು ಎಂಬಂತೆ ಕಾಣುತ್ತಿತ್ತು ಎಂದು ತನ್ನು ಗಂಡ ಸ್ಟುಗೆ ಹೇಳಿದ್ದಾಳೆ. ಆದರೆ ಆಕೆಯ ಗಂಡನಿಗೆ ಈ ರೀತಿ ಎಲ್ಲ ಆಗುತ್ತೆ ಎಂಬ ಪರಿಕಲ್ಪನೆಯೇ ಇರಲಿಲ್ಲ. ಇದರ ಜತೆಗೆ ನನ್ನ ಕುಟುಂಬದ ಸದಸ್ಯರು ಕೂಡ ಒಂದು ಬಾರಿ ಗೋಚರಕ್ಕೆ ಬಂದಿದ್ದಾರೆ. ನನ್ನ ಕುಟುಂಬದಲ್ಲಿ ಏನೋ ಆಗುತ್ತಿದೆ. ನನ್ನ ಸ್ನೇಹಿತರು, ಅಪ್ಪ, ಅಮ್ಮ ಸಹೋದರಿಯ ನಡುವೆ ಪ್ರೀತಿ ಹಾಗೂ ಕೆಲವೊಂದು ಚರ್ಚೆಗಳು ನಡೆಯುತ್ತಿದೆ ಎಂದು ನನಗೆ ಭಾಸವಾಗಿದೆ.

ಇದು ಎಲ್ಲವೂ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ನಡೆದ ಘಟನೆಗಳು, ನಂತರ ನನ್ನ ಸಮಾಧಿ ಮಾಡಲು ಎಲ್ಲ ತಯಾರು ಮಾಡಿಕೊಳ್ಳುವಂತೆ ವೈದ್ಯರು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ನಾನು ಕೋಮಾದಿಂದ ಎಚ್ಚರಗೊಂಡೆ. ಆಗಾ ನನ್ನ ಗಂಡ ನನ್ನ ಪಕ್ಕದಲ್ಲಿದ್ದರು. ಅವರು ವೈದ್ಯರಿಗೆ ನಾನು ಎಚ್ಚರಗೊಂಡಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ವೈದ್ಯರು ನನ್ನನ್ನೂ ಪರೀಕ್ಷೆ ಮಾಡಿ ನಾನು ಬದುಕಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇದು ಪವಾಡವೆ ಸರಿ ಎಂದು ವೈದ್ಯರು ಹೇಳಿದರು. ನಂತರ ಆಕೆಯನ್ನು ಸ್ಕ್ಯಾನ್‌ ಮಾಡಿ ಹೃದಯ ಅಥವಾ ಶ್ವಾಸಕೋಶ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಾಜಿನ ಚೂರುಗಳನ್ನು ಹಾಗೇನೇ ಕಸದ ಬುಟ್ಟಿಗೆ ಎಸೆಯುವ ಮುನ್ನ ಈ ವಿಡಿಯೋ ನೋಡಿ

ಸ್ವಲ್ಪ ವಾರಗಳ ನಂತರ ನಾನು ಸತ್ತ 40 ನಿಮಿಷಗಳ ನಂತರ ನಡೆದ ಘಟನೆಗಳು ನನ್ನ ನೆನಪಿಗೆ ಬಂದಿದೆ. ಅದನ್ನು ನಾನು ಮನೆಯವರಿಗೆ ಹಾಗೂ ವೈದ್ಯರಿಗೆ ಹೇಳಿದ್ದೇನೆ. ಈ ಸಮಯದಲ್ಲಿ ನನ್ನ ಒಳಗೆ ನೀನು ಸಾಯುವುದಿಲ್ಲ, ನೀನು ಗುಣಮುಖವಾಗುತ್ತೀಯಾ ಎಂದು ಹೇಳುತ್ತಿತ್ತು. ನನ್ನ ದೇಹದಲ್ಲಿ ಮಾತ್ರ ಅಸ್ಥಿತ್ವ ಇರಲಿಲ್ಲ, ಆದರೆ ನನ್ನ ಆತ್ಮ ನನ್ನ ಬಳಿಯೇ ಇತ್ತು. ಚರ್ಮಗಳು ತುಂಬಾ ಕೂಲ್​​ ಆಗಿತ್ತು, ದೇಹದ ಒಳಗೆ ಉಸಿರು ಇದೆ. ಯಾವುದೋ ಲೋಕದಲ್ಲಿ ಇದ್ದೇನೆ ಅಥವಾ ನಿದ್ದೆಯಲ್ಲಿದ್ದೇನೆ ಎಂಬಂತೆ ಭಸವಾಗುತ್ತಿತ್ತು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ