Expensive Bed: ಕೋಟಿ ಕೋಟಿ ಬೆಲೆಬಾಳುವ ಇದು ವಿಶ್ವದ ಅತ್ಯಂತ ದುಬಾರಿ ಹಾಸಿಗೆ!

ಮಲಗುವ ಹಾಸಿಗೆಗೆ ಕೋಟಿ ಕೋಟಿ ಖರ್ಚು ಮಾಡಬೇಕಾದರೆ ಅದರಲ್ಲಿ ಅಂತದ್ದೇನಿದೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ? ಬಹುಶಃ ಮಿಲಿಯನೇರ್‌ಗಳು ಸಹ ಈ ಹಾಸಿಗೆ ಖರೀದಿಸುವ ಮೊದಲು 10 ಬಾರಿ ಯೋಚಿಸುತ್ತಾರೆ. ಹ್ಯಾಸ್ಟೆನ್ಸ್ ಎಂಬ ಸ್ವೀಡಿಶ್ ಕಂಪನಿಯೊಂದು ಈ ಹಾಸಿಗೆಯನ್ನು ಮಾರಾಟ ಮಾಡುತ್ತಿದೆ. ಇದರ ವಿಶೇಷತೆ ಏನೆಂದರೆ ಇದನ್ನು ತಯಾರಿಸಲು ಕುದುರೆ ಬಾಲದ ಕೂದಲನ್ನು ಬಳಸಲಾಗಿದೆ.

Expensive Bed: ಕೋಟಿ ಕೋಟಿ ಬೆಲೆಬಾಳುವ ಇದು ವಿಶ್ವದ ಅತ್ಯಂತ ದುಬಾರಿ ಹಾಸಿಗೆ!
Worlds most Expensive Bed Worth 5 Crores
Follow us
ಅಕ್ಷತಾ ವರ್ಕಾಡಿ
|

Updated on: Jun 03, 2024 | 2:12 PM

ದಪ್ಪವಾದ ಹಾಸಿಗೆಯ ಮೇಲೆ ಮಲಗುವುದು ಇಂದಿನ ದಿನಗಳಲ್ಲಿ ಫ್ಯಾಶನ್ ಆಗಿಬಿಟ್ಟಿದೆ. ಹೆಚ್ಚೆಂದರೆ ಲಕ್ಷ ಕೊಟ್ಟು ಹಾಸಿಗೆ ಖರೀದಿಸುತ್ತಾರೆ.  ಆದರೆ ಎಂದಾದರೂ ಕೋಟಿ ಕೋಟಿ ಬೆಲೆ ಬಾಳುವ ಹಾಸಿಗೆ ಎಂದಾದರೂ ನೀವು ಕಂಡಿದ್ದೀರಾ. ಇಲ್ಲೊಂದು ಹಾಸಿಗೆಯ ಬೆಲೆ ಬರೋಬ್ಬರಿ 5 ಕೋಟಿ. ಮಲಗುವ ಹಾಸಿಗೆಗೆ ಕೋಟಿ ಕೋಟಿ ಖರ್ಚು ಮಾಡಬೇಕಾದರೆ ಅದರಲ್ಲಿ ಅಂತದ್ದೇನಿದೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ? ಬಹುಶಃ ಮಿಲಿಯನೇರ್‌ಗಳು ಸಹ ಈ ಹಾಸಿಗೆ ಖರೀದಿಸುವ ಮೊದಲು 10 ಬಾರಿ ಯೋಚಿಸುತ್ತಾರೆ. ಹ್ಯಾಸ್ಟೆನ್ಸ್ ಎಂಬ ಸ್ವೀಡಿಶ್ ಕಂಪನಿಯೊಂದು ಈ ಹಾಸಿಗೆಯನ್ನು ಮಾರಾಟ ಮಾಡುತ್ತಿದೆ. ಇದರ ವಿಶೇಷತೆ ಏನೆಂದರೆ ಇದನ್ನು ತಯಾರಿಸಲು ಕುದುರೆ ಬಾಲದ ಕೂದಲನ್ನು ಬಳಸಲಾಗಿದೆ.

ಡೈಲಿ ಮೇಲ್ ವರದಿಯ ಪ್ರಕಾರ, ಹಾಸಿಗೆಗಳನ್ನು ಮಾರಾಟ ಮಾಡುವ ಈ ಕಂಪನಿಯ ಹೆಸರು ಹ್ಯಾಸ್ಟೆನ್ಸ್ . ಈ ಕಂಪನಿಯು 1852 ರಿಂದ ಹಾಸಿಗೆಗಳನ್ನು ಮಾರಾಟ ಮಾಡುತ್ತಿದೆ ಮತ್ತು ವಿಶ್ವದ ಪ್ರಸಿದ್ಧ ಕಂಪನಿಗಳಲ್ಲಿ ಒಂದಾಗಿದೆ. ತಾನು ಮಾರುತ್ತಿರುವ ಹಾಸಿಗೆಯ ಮೇಲೆ ಮಲಗುವುದರಿಂದ ನೆಮ್ಮದಿಯ ನಿದ್ದೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬಗ್ಗೆ ತಿಳಿದರೆ ನೀವೂ ಆಶ್ಚರ್ಯ ಪಡುವ ರೀತಿಯಲ್ಲಿ ಕಂಪನಿಯು ಅದರ ವಿಶೇಷತೆಯನ್ನು ವಿವರಿಸಿದೆ.

ಕುದುರೆ ಬಾಲದ ಕೂದಲಿನಿಂದ ಮಾಡಲ್ಪಟ್ಟಿರುವ ಹಾಸಿಗೆ:

ಈ ವಿಶಿಷ್ಟ ಹಾಸಿಗೆಯನ್ನು ತಯಾರಿಸಲು ಕುದುರೆ ಬಾಲದ ಕೂದಲನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಈ ಹಾಸಿಗೆಯನ್ನು ಖರೀದಿಸುವವರಿಗೆ ಕಂಪನಿಯು 25 ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ. ಸಾಮಾನ್ಯವಾಗಿ, ಹಾಸಿಗೆಗಳನ್ನು ಮಾರಾಟ ಮಾಡುವ ಕಂಪನಿಗಳು ಕೇವಲ 5 ಅಥವಾ 10 ವರ್ಷಗಳ ಖಾತರಿಯನ್ನು ನೀಡುತ್ತವೆ, ಆದರೆ ಹೆಸ್ಟೆನ್ಸ್ ತನ್ನ ವಿಶಿಷ್ಟ ಮತ್ತು ದುಬಾರಿ ಹಾಸಿಗೆಗಳ ಮೇಲೆ 25 ವರ್ಷಗಳ ಖಾತರಿಯನ್ನು ನೀಡುತ್ತಿದೆ. ಕಂಪನಿಯು ಈ ಹಾಸಿಗೆಯ ಬೆಲೆಯನ್ನು 5,42,600 ಪೌಂಡ್‌ಗಳಲ್ಲಿ ಅಂದರೆ 5 ಕೋಟಿ 52 ಲಕ್ಷಕ್ಕೂ ಹೆಚ್ಚು.

ಇದನ್ನೂ ಓದಿ: 2 ವರ್ಷದ ಈ ಮಗುವಿನ ಐಷಾರಾಮಿ ಜೀವನ ಹೇಗಿದೆ ನೋಡಿ

ಖರೀದಿಸುವ ಮೊದಲು ನೀವು ಪರೀಕ್ಷಿಸಿಬಹುದು:

ವರದಿಗಳ ಪ್ರಕಾರ, ಕಂಪನಿಯು ಗ್ರಾಹಕರಿಗೆ ಹಾಸಿಗೆಯನ್ನು ಖರೀದಿಸುವ ಮೊದಲು ಅದನ್ನು ಪರೀಕ್ಷಿಸಬಹುದು ಎಂಬ ಸೌಲಭ್ಯವನ್ನು ಸಹ ಒದಗಿಸಿದೆ. ಕಂಪನಿಯು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಮಳಿಗೆಯನ್ನು  ಹೊಂದಿದೆ, ಅಲ್ಲಿ ಜನರು ಬಯಸಿದಲ್ಲಿ ಹಾಸಿಗೆಯ ಪ್ರಯೋಗವನ್ನು ತೆಗೆದುಕೊಳ್ಳಬಹುದು. ಅಂದಹಾಗೆ, ಯಾರಾದರೂ ಅದನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಆದರೆ ಇನ್ನೂ ಅದರ ಮೇಲೆ ಮಲಗಲು ಬಯಸಿದರೆ, ಕಂಪನಿಯು ಈ ಸೌಲಭ್ಯವನ್ನು ಸಹ ಒದಗಿಸಿದೆ, ಆದರೆ ಇದಕ್ಕಾಗಿ ಒಂದು ರಾತ್ರಿಗಾಗಿ ನೀವು ಸುಮಾರು 8 ಲಕ್ಷ 74 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ