ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ವಿಚಾರ ಎಲ್ಲರಿಗೂ ತಿಳಿದೇ ಇರಬಹುದು. ಈಗ ಈ ವಿಷಯ ಹೇಳುವುದಕ್ಕೆ ವಿಶೇಷ ಕಾರಣ ಒಂದಿದೆ. ಅದೇನು ಎಂದರೆ, ಮಹೇಂದ್ರ ಸಿಂಗ್ ಧೋನಿ ಫೋಟೊ ಒಂದನ್ನು ಡಬ್ಲ್ಯು ಡಬ್ಲ್ಯು ಇ ಸೂಪರ್ ಸ್ಟಾರ್ ಜಾನ್ ಸೀನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಧೋನಿ, ಜಾನ್ ಸೀನಾ ಸೋಷಿಯಲ್ ಮೀಡಿಯಾದಲ್ಲಿ ಕಂಡು ಕುತೂಹಲ ಹುಟ್ಟಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ರಸ್ಲಿಂಗ್ ಅಭಿಮಾನಿಗಳು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜಾನ್ ಸೀನಾ ತಮ್ಮ ಸೋಷಿಯಲ್ ಮೀಡಿಯಾ, ಇನ್ಸ್ಟಾಗ್ರಾಂ ಖಾತೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಫೋಟೊ ಅಪ್ಲೋಡ್ ಮಾಡಿದ್ದಾರೆ. ಆದರೆ, ಅಲ್ಲಿ ಯಾವುದೇ ಕ್ಯಾಪ್ಶನ್ ಅವರು ಬರೆದಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಫೋಟೊ ಹಂಚಿಕೊಂಡ ವಿಚಾರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಏನೇ ಆದರೂ ಜಾನ್ ಸೀನ ಕೂಡ ಧೋನಿ ಅಭಿಮಾನಿಯೋ ಎಂಬ ಪ್ರಶ್ನೆ ಮತ್ತು ವಿಷಯ ಕಂಡುಬಂದಿದೆ. ಈ ಫೋಟೊವನ್ನು ಟಿ20 ವಿಶ್ವಕಪ್ ಸಂದರ್ಭವೇ ಅವರು ಹಂಚಿಕೊಂಡಿದ್ದಾರೆ.
ಜಾನ್ ಸೀನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಮಹೇಂದ್ರ ಸಿಂಗ್ ಧೋನಿ ಯಾರದೋ ಕೈ ಕುಲುಕಲು ಮೆಟ್ಟಿಲು ಇಳಿದು ಬರುತ್ತಿರುವುದು ಕಂಡುಬರುತ್ತಿದೆ. ಚಿತ್ರದಲ್ಲಿ ಧೋನಿ ಮಾತ್ರ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವ್ಯಕ್ತಿ ಅಲ್ಲಿ ಕಾಣುತ್ತಿಲ್ಲ. ಈ ಚಿತ್ರವನ್ನು ಜಾನ್ ಸೀನ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಪೋಸ್ಟ್ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಜನ ಇದನ್ನು ಲೈಕ್ ಮಾಡಿದ್ದಾರೆ. ಹಲವರು ಈ ಚಿತ್ರದ ಬಗ್ಗೆ ವಿಶೇಷ ಕಮೆಂಟ್ಗಳನ್ನು ಮಾಡಿದ್ದಾರೆ.
ಜಾನ್ ಸೀನ ಭಾರತೀಯ ಸೆಲೆಬ್ರಿಟಿಗಳ ಚಿತ್ರವನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಧೋನಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ಜಾನ್ ಸೀನ, ವಿರಾಟ್ ಕೊಹ್ಲಿ, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯ ರೈ ಚಿತ್ರಗಳನ್ನು ಹಂಚಿಕೊಂಡಿದ್ದರು.
ಡಬ್ಲ್ಯು ಡಬ್ಲ್ಯು ಇ ಚಾಂಪಿಯನ್ ಜಾನ್ ಸೀನಗೆ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂ ಖಾತೆಯಲ್ಲಿ 16.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಜಾನ್ ಸೀನ ಭಾರತದಲ್ಲಿ ಕೂಡ ಹೆಸರುವಾಸಿ ಕುಸ್ತಿಪಟು ಆಗಿದ್ದಾರೆ. ಅವರ ಸ್ಟೈಲ್ಗೆ ಹಲವಷ್ಟು ಜನ ಮಾರುಹೋದವರಿದ್ದಾರೆ. ಇದೀಗ ಜಾನ್ ಸೀನ ಧೋನಿ ಚಿತ್ರ ಹಂಚಿಕೊಂಡಿರುವುದು ಸದ್ದು ಮಾಡಿದೆ.
ಇದನ್ನೂ ಓದಿ: T20 World Cup 2021: ಮೆಂಟರ್ ಧೋನಿ ಮಾಸ್ಟರ್ ಪ್ಲ್ಯಾನ್: ಆರಂಭಿಕರಿಗೆ 3 ಟಾರ್ಗೆಟ್
ಇದನ್ನೂ ಓದಿ: ನಟ ಅರ್ಷದ್ ವಾರ್ಸಿ ಫೋಟೋ ಪೋಸ್ಟ್ ಮಾಡಿದ WWE ಸೂಪರ್ ಸ್ಟಾರ್ ಜಾನ್ ಸೀನಾ; ಕಾರಣವೇನು?