Viral Video : ಉತ್ತರಪ್ರದೇಶದ ಅಯೋಧ್ಯೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಕೇವಲ ಅನ್ನ ಮತ್ತು ಉಪ್ಪನ್ನು ಮಾತ್ರ ಬಡಿಸಲಾಗಿದೆ. ಶಾಲಾಮಕ್ಕಳು ಅಂಗಳ ಮತ್ತು ಬರೀ ನೆಲದ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಪತ್ರಕರ್ತ ಪಿಯೂಷ್ ರೈ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅನ್ನದ ಜೊತೆ ಸಾರು, ಪಲ್ಯ ಏನೊಂದು ಇಲ್ಲ ಏನಿದು ಅವ್ಯವಸ್ಥೆ ಎಂದು ಶಿಕ್ಷಕರಿಗೆ, ಗ್ರಾಮದ ಮುಖ್ಯಸ್ಥರಿಗೆ ಕೇಳಲಾಗಿ ಈ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ಹಾಗಿದ್ದರೆ ಇದಕ್ಕೆ ಯಾರು ಹೊಣೆ?
A video of children at a primary school in UP’s Ayodhya being served boiled rice and salt as mid day meal has surfaced. pic.twitter.com/5wVaE9XWKC
ಇದನ್ನೂ ಓದಿ— Piyush Rai (@Benarasiyaa) September 28, 2022
ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡಬೇಕು. ಇಲ್ಲಿ ಕೇವಲ ಅನ್ನ ಮತ್ತು ಉಪ್ಪು ತಿನ್ನುತ್ತಿದ್ದಾರೆ. ಇಂಥ ಶಾಲೆಗೆ ಮಕ್ಕಳನ್ನು ಯಾರು ಕಳಿಸುತ್ತಾರೆ? ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಡಿಯೋ ನೋಡಲೇಬೇಕು ಎಂಬ ಧ್ವನಿ ಈ ವಿಡಿಯೋದಲ್ಲಿ ಕೇಳಿಬರುತ್ತದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಗ್ರಾಮದ ಮುಖ್ಯಸ್ಥರಿಗೆ ನೋಟೀಸ್ ನೀಡಲಾಗಿದೆ. ವಿದ್ಯಾರ್ಥಿಗಳ ಪೋಷಕು ಶಾಲೆಯ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಅಯೋಧ್ಯೆಯ ಜಿಲ್ಲಾ ನ್ಯಾಯಾಧೀಶ ನಿತೀಶ್ ಕುಮಾರ್ ಈ ಸಂಬಂಧಿ ತನಿಖೆಗೆ ಆದೇಶ ನೀಡಿದ್ದಾರೆ. ಬಿಎಸ್ಎ ಅಧಿಕಾರಿಗಳು ಈ ಪರಿಸ್ಥಿತಿಯ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಲಿದ್ದಾರೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಚೀಲಗಳ ಮೇಲೆ ಕುಳಿತುಕೊಳ್ಳಲು ಶಿಕ್ಷಕರು ಒತ್ತಾಯಿಸುತ್ತಾರೆ. ಅಲ್ಲದೆ, ಮೆನು ಪ್ರಕಾರ ಮಕ್ಕಳಿಗೆ ಸರಿಯಾಗಿ ಊಟ ಲಭ್ಯವಾಗುತ್ತಿಲ್ಲ. ಜೊತೆಗೆ ಶಾಲೆಯ ಪ್ರಾಂಶುಪಾಲರು ನಿಯಮಿತವಾಗಿ ಶಾಲೆಗೆ ಬರದೆ ಗೈರುಹಾಜರಾಗುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ಪ್ರತೀ ಮಗುವಿನ ಊಟಕ್ಕೆ ಉತ್ತರ ಪ್ರದೇಶ ರಾಜ್ಯಸರ್ಕಾರ ಕೇವಲ ರೂ. 4.97 ಖರ್ಚು ಮಾಡುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ಸಂಪೂರ್ಣ ಪೌಷ್ಠಿಕ ಆಹಾರ ಒದಗಿಸಲಾಗದು. ಆದ್ದರಿಂದ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅನೇಕ ಸಂದರ್ಭಗಳಲ್ಲಿ ಪ್ರಾಂಶುಪಾಲರು ಮತ್ತು ಗ್ರಾಮದ ಮುಖ್ಯಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂಬ ವಿಷಯವನ್ನು ಪತ್ರಕರ್ತ ಪಿಯೂಷ್ ರೈ ಮತ್ತೊಂದು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:20 am, Fri, 30 September 22