‘ನಾನು ಉಚಿತವಾಗಿ ಪ್ರಯಾಣಿಸಲಾರೆ’ ಬಸ್​ ಕಂಡಕ್ಟರ್​ ಜೊತೆ ಜಗಳಕ್ಕಿಳಿದ ತಮಿಳುನಾಡಿನ ಈ ವೃದ್ಧೆ

Tamilnadu : ವೈಟ್​ ಬೋರ್ಡ್​ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಇದ್ದರೂ ಚೆನ್ನೈನ ವೃದ್ಧೆ ಮಾತ್ರ 15 ರೂಪಾಯಿ ಕೊಟ್ಟು ಕಂಡಕ್ಟರ್​ನಿಂದ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ.

‘ನಾನು ಉಚಿತವಾಗಿ ಪ್ರಯಾಣಿಸಲಾರೆ’ ಬಸ್​ ಕಂಡಕ್ಟರ್​ ಜೊತೆ ಜಗಳಕ್ಕಿಳಿದ ತಮಿಳುನಾಡಿನ ಈ ವೃದ್ಧೆ
ಉಚಿತವಾಗಿ ಪ್ರಯಾಣಿಸಲಾರೆ ಎನ್ನುತ್ತಿರುವ ಹಿರಿಯ ಮಹಿಳೆ
ಶ್ರೀದೇವಿ ಕಳಸದ | Shridevi Kalasad

|

Sep 30, 2022 | 11:36 AM

Viral : ಹಣ ಉಳಿದರೆ ಸಾಕು ಎಂದು ಸೋಗು ಹಾಕಿಕೊಂಡು ಉಚಿತವಾಗಿ ಪ್ರಯಾಣಿಸಲು ನೆಪ ಹುಡುಕುವ ಮತ್ತು ಅರ್ಹತೆ ಇಲ್ಲದಿದ್ದರೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಆದರೆ, ತಮಿಳುನಾಡಿನ ಈ ವೃದ್ಧೆ ಮಾತ್ರ ಎಲ್ಲರ ಮಧ್ಯೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಈ ವೃದ್ಧೆ ನಿರಾಕರಿಸಿದ ಸಂಗತಿ ವೈರಲ್ ಆಗಿದೆ. ಮಧುಕರೈ ಮತ್ತು ಪಾಲತುರೈ ಮಧ್ಯೆ ಸಂಚರಿಸುವ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ವೃದ್ದೆ ಕಂಡಕ್ಟರ್ ಜೊತೆ ಸಂಭಾಷಿಸುತ್ತಿರುವ ವಿಡಿಯೋ ಚಿತ್ರೀಕರಿಸಿದ್ದಾರೆ. ಬಸ್ ಟಿಕೆಟ್‌ಗಾಗಿ ಬೇಡಿಕೆ ಇಡುವ ಈ ವೃದ್ಧೆ ಕಂಡಕ್ಟರ್ ಜೊತೆ ಅಕ್ಷರಶಃ ಜಗಳಕ್ಕಿಳಿಸಿದ್ದಾರೆ. ‘ನಾನು ಓಸಿಯಾಗಿ ಓಡಾಡಲು ಇಚ್ಛಿಸುವುದಿಲ್ಲ (ಉಚಿತವಾಗಿ ಪ್ರಯಾಣಿಸುವುದಿಲ್ಲ)’ ಎನ್ನುವುದು ಅವರ ಜಗಳದ ಮುಖ್ಯಾಂಶ.

ಚುನಾವಣೆ ಹಿನ್ನೆಲೆಯಲ್ಲಿ ಡಿಎಂಕೆ ಪಕ್ಷವು, ತಮಿಳುನಾಡಿನ ವೈಟ್​ ಬೋರ್ಡ್​ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕಾದ ಅಂಶ. ಈ ಹಿನ್ನೆಲೆಯಲ್ಲಿ ಕಂಡಕ್ಟರ್ ಈ ವೃದ್ಧೆಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಈಕೆ ಅದನ್ನು ನಿರಾಕರಿಸಿ ಟಿಕೆಟ್ ಕೊಡಲೇಬೇಕೆಂದು ಒತ್ತಡ ಹೇರಿದ್ಧಾರೆ.

ಉಪಾಯಗಾಣದ ಕಂಡಕ್ಟರ್ ಕೊನೆಗೆ ಪ್ರಯಾಣ ದರ ರೂ. 15 ಸ್ವೀಕರಿಸಿ ವೃದ್ಧೆಗೆ ಟಿಕೆಟ್​ ನೀಡಿದ್ದಾರೆ.

ಇದನ್ನೂ ಓದಿ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada